ಬಸವಣ್ಣನವರಿಗೆ

ನೀನೇನೊ ನಿಜವಾಗಿ ಮಂತ್ರಿ. ಬಿಜ್ಜಗಿಜ್ಜಳರ ಸಭೆಗಲ್ಲ ನಾ ಹೇಳುವುದು, ಕಂತ್ರಿಜನಗಳ ಬಿಡು, "ಇಟ್ಟರೆ ಸಗಣಿಯಾಗಿ, ತಟ್ಟಿದರೆ ಕುರುಳಾಗಿ ಸುಟ್ಟರೆ ನೊಸಲಿಗೆ ವಿಭೂತಿಯಾಗಿ ತಟ್ಟದೇ ಹಾಕಿದರೆ" ಕೊಳವೆ ಗೊಬ್ಬರವಾಗಿ ನಾರಿದರು ಬೀಗಿ ಮೆರೆಯುವ ಭಂಡರನು ಸುಡು....

ತಾಯಿ

ಸರ್ರನೆ ಜಾರುವ ನುಣ್ಣನೆ ಬುದ್ಧಿಗೆ ಆಗೀಗ ಸಿಕ್ಕಿ ತೊಡಕು, ಅಲ್ಲಲ್ಲಿ ನಿಲ್ಲುವುದು; ನಿಂತಾಗ ಗರಿಬುದ್ದಿ ತೊಲೆಭಾರವಾಗಿ ನಿನ್ನೆ ನೆನಪು- ಸೊಯ್ಯನೆ ಸರಿಯುವ ಸಾಪುಮೈ ಹೊಳೆಯಲ್ಲಿ ಮೇಲೆದ್ದು ಹಾಳೆ ಸೀಳುವ ಚೂಪುಗಲ್ಲು ; ಮಿಸುಕಿದರೆ ಕತ್ತು...

ಎಚ್ಚರಿಕೆ

ಕೋವಿ ಎತ್ತಿದ್ದೇನು, ಗುರಿಯ ಹೂಡಿದ್ದೇನು ಕಡೆಗೆ ಹೊಡೆದದ್ದೂ ಹೂವಲ್ಲಿ! ಈ ನೀರಲ್ಲಿ ಬಿದ್ದ ತುಂಡುಗಳೆಲ್ಲ ಸಾಗಿ, ಬೆಳೆದದ್ದೆಲ್ಲ ಬಾಗಿ ಹರಿಯುತ್ತಲಿದೆ ಹೀಗೆಯೇ ಹೊರವಾಗಿ. ಒಂದು ಕ್ಷಣ ಹಿಂದೆ ಏನೆಲ್ಲ ಆಡಿದಿರಪ್ಪ! ಅಂದ ಮಾತಿಗೆ ಈಗ...

ಸೀಮಂತಿನಿ

೧ ಯಾರಿವಳು? ಇದ್ದಕ್ಕಿದ್ದಂತೆ ಪಕ್ಕದಲೆ ಬದಲಾದವಳು? ಗಂಡನೆಂಬವನನ್ನ ಕಂಡ ಕಂಡಂತೆಯೇ ಕಂದ ಎಂಬಂತೆ ಮಮತೆಯಲಿ ಮಾತಾಡುವಳು! ಅಪ್ಪ ಬಂದವನನ್ನು ತಪ್ಪು ಮಾಡಿದ ಎಳೆಯನಂತೆ ಉಡಿಯಲ್ಲಿ ಹಾಕಿ ಶಮಿಸಿದವಳು ಗುಟುರು ಮದವನು ಮೆಟ್ಟಿ ಎದ್ದ ಹೆಡೆಯನು...

ಪ್ರಥಮ ಪಾಠ

ಮನಸ್ಸಿನಾಳಕ್ಕೆ ಗಾಳ ಇಳಿಸಿ ಕಾಯುತ್ತ ಕೂತೆ ಬಂದೀತು ಎಂದು ಕಥೆ, ಕಡೆಗೊಂದು ಮಿಡಿಗವಿತೆ. ನಾ ಪಟ್ಟಕಷ್ಟ ಒಂದೊಂದನೇ ಕೆಳಕೆಡವಿ ಮೆಟ್ಟಲಾಗಿಸಿ ಮೇಲೆ ಹತ್ತಿ ಕತ್ತಲ ಕಾಡು ಕತ್ತಿಯಲಿ ಸವರಿ ಹೊರಬಂದ ಸಾಹಸ ನೆನೆದು ರೋಮಾಂಚಗೊಂಡೆ....

ಹಾಮಾ ನಾಯಕ

ಹೆತ್ತವರು ಗೊತ್ತಿದ್ದೆ ಹೆಸರಿಟ್ಟರೆಂಬ ಥರ ಅಚ್ಚರಿಗೊಳಿಸುವಂತೆ ಬೆಳೆದ ಹಿರಿವ್ಯಕ್ತಿತ್ವ ಕನ್ನಡದ ಕೋಟೆ ಕೊತ್ತಳ ಫೌಜು ನೆಲಜಲವ ಹೋರಾಡಿ ಕಾಯ್ದುಕೊಳ್ಳುವ ಧೀರ ದೃಢಸತ್ವ ನಾಯಕರು ನಿಜವಾಗಿ ನಾಯಕರೆ ; ಗುರಿ, ನಿಟ್ಟು ವ್ಯೂಹರಚನೆಯ ಗುಟ್ಟು ಪರಿಪೂರ್ಣ...

ಕೆ.ಎಸ್. ನರಸಿಂಹಸ್ವಾಮಿ

ಶಬ್ದಕೋಶವ ಎಸೆದು ಜನದ ನಾಲಿಗೆಯಿಂದ ಮಾತನೆತ್ತಿದ ಜಾಣ, ನೇರಗಿಡದಿಂದಲೇ ಹೂವ ಬಿಡಿಸುವ ಧ್ಯಾನ; ತೊಟ್ಟ ಮಾತೆಲ್ಲವೂ ಗುರಿಗೆ ತಪ್ಪದ ಬಾಣ. ಕವಿತೆ ಜೊತೆ ಮೊದಲೆಲ್ಲ ಮನ್ಮಥ ಮಹೋತ್ಸವ, ಪ್ರೀತಿಗೆ ರಥೋತ್ಸವ. ಮಲ್ಲಿಗೆಯ ಹೆದೆಯಲ್ಲಿ ಹೂಡಿ...

ಗೋಪಾಲಕೃಷ್ಣ ಅಡಿಗ

ಮೊದಲ ಹೆಜ್ಜೆಗಳಲ್ಲೆ ಅಸಲು ಕುಣಿತದ ಆಸೆ; ಹುಡುಕಾಟ, ನಕಲಿ ಹೆಜ್ಜೆಯನಿಟ್ಟ ಮಿಡುಕಾಟ. ಯಾರದೋ ಚೊಣ್ಣ, ಅಂಗಿಯ ತೊಟ್ಟು ಹುಸಿಮೀಸೆ ಹೊತ್ತು ಎಗರಿದ್ದಕ್ಕೆ ಪಶ್ಚಾತ್ತಾಪ ಪರದಾಟ; ದುಃಖ, ಗಾಢ ವಿಷಾದ, ಸೃಷ್ಟಿಕಾರಕ ನೋವು. ಕಾವು ಕೂತಿತು...

ಷೇಕ್ಸ್‌ಪಿಯರನಿಗೆ

ಅಲ್ಲಿ ಬೆಳಗುವ ರವಿಯೆ ಇಲ್ಲಿ ಬೆಳಗುವ; ಹಗಲು ಬೇರೆ. ಆ ತಾರೆಗಳೆ ಇಲ್ಲಿ ಹೊಳೆವುವು; ಇರುಳು ಬೇರೆ. ಅದೆ ಮಳೆ ಗಾಳಿ, ಕೊರೆವ ಚಳಿ, ಎಳೆ ಬಿಸಿಲು ಹದ ಬೇರೆ. ಒಂದೆ ಅನುಭವ, ಬೇರೆ...

ವಸ್ತುನಿಷ್ಠ ವಿಮರ್ಶೆ

ಸಂಜೆ, ತಿಂಡಿಯ ವೇಳೆ ಹೇಳಿ ಕಳಿಸಿದ ಹಾಗೆ ಗೆಳೆಯರಾಗಮನ. ಎಲ್ಲ ಬಲು ಖುಷಿಯಾಗಿ ಹರಟೆ ಕೊಚ್ಚುತ್ತ ಕಾದೆವು. ಬಂತು ತುಪ್ಪದಲಿ ಬೆಂದು ಘಮ ಘಮಿಸುತ್ತ ಬಿಸಿ ಬಿಸೀ ದೋಸೆ. ಇನ್ನೊಂದು ಮತ್ತೊಂದು ಎಂದು ನಿಸ್ಸಂಕೋಚ...