ಹಾಮಾ ನಾಯಕ

ಹೆತ್ತವರು ಗೊತ್ತಿದ್ದೆ ಹೆಸರಿಟ್ಟರೆಂಬ ಥರ
ಅಚ್ಚರಿಗೊಳಿಸುವಂತೆ ಬೆಳೆದ ಹಿರಿವ್ಯಕ್ತಿತ್ವ
ಕನ್ನಡದ ಕೋಟೆ ಕೊತ್ತಳ ಫೌಜು ನೆಲಜಲವ
ಹೋರಾಡಿ ಕಾಯ್ದುಕೊಳ್ಳುವ ಧೀರ ದೃಢಸತ್ವ
ನಾಯಕರು ನಿಜವಾಗಿ ನಾಯಕರೆ ; ಗುರಿ, ನಿಟ್ಟು
ವ್ಯೂಹರಚನೆಯ ಗುಟ್ಟು ಪರಿಪೂರ್ಣ ಎಲ್ಲ ಸಲ;
ತೊಡೆತಟ್ಟಿ ಎದುರಾದ ಜಟ್ಟಿಯ ಕ್ಷಣಾರ್ಧದಲ್ಲಿ
ಚಿತ್ತು ಮಾಡುವ ಚತುರ ; ಒಂದೆ ಗುರಿ, ಒಂದೆ ಶರ.
ಜಾತಿಕೋತಿಗಳ ಹಾವಳಿ ಎಲ್ಲ ದಿಕ್ಕಲ್ಲಿ
ಇಲ್ಲ ನೀವಿರುವಲ್ಲಿ, ನೀವೊ ಬಲು ಗಟ್ಟಿಕುಳ
ಕನ್ನಡದ ಶಿಖರಗಳ ಮೇಲೆ ಬೆಳಕನ್ನುರಿಸಿ
ಎಲ್ಲ ಮೂಲೆಗು ಅದನು ಕಾಣಿಸುವ ನಿಷ್ಠೆ, ಛಲ.

ಕನ್ನಡವ ಹಳಿದರೋ, ಕಿಡಿಯಾಡುವುದು ಕಣ್ಣು, ಮಾತೆಲ್ಲ ಸ್ಫೋಟಿಸುವ ಗುಂಡು,
ಸಹ್ಯಾದ್ರಿ ನೆತ್ತಿಯಲಿ ಒಟ್ಟಾಗಿ ಕವಿದು ಘೀಳಿಡುವಂತೆ ಕರಿಮುಗಿಲ ಹಿಂಡು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಗ್ಗಿ ಕಾಲ ಬಂದೈತೆ
Next post ಹಾಲುಬಾಯಿ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…