ಕೋವಿ ಎತ್ತಿದ್ದೇನು, ಗುರಿಯ ಹೂಡಿದ್ದೇನು
ಕಡೆಗೆ ಹೊಡೆದದ್ದೂ ಹೂವಲ್ಲಿ! ಈ ನೀರಲ್ಲಿ
ಬಿದ್ದ ತುಂಡುಗಳೆಲ್ಲ ಸಾಗಿ, ಬೆಳೆದದ್ದೆಲ್ಲ
ಬಾಗಿ ಹರಿಯುತ್ತಲಿದೆ ಹೀಗೆಯೇ ಹೊರವಾಗಿ.
ಒಂದು ಕ್ಷಣ ಹಿಂದೆ ಏನೆಲ್ಲ ಆಡಿದಿರಪ್ಪ!
ಅಂದ ಮಾತಿಗೆ ಈಗ ತಾವೆ ನಗುವುದು ಬೇರೆ.
ಇಷ್ಟು ದಿನ ಹಾಲು ತುಪ್ಪವ ಬೆರೆಸಿ ಈಗೇಕೆ
ಉಪ್ಪುನೀರಿನ ಮಾತು? “ತಪ್ಪು ಬಿಟ್ಟಿತು” ಎನ್ನಿ!
ನಿಮ್ಮ ಜೊತೆ ಬಂದು ನಿಮ್ಮದೆ ರೂಪಿನಚ್ಚೊಂದ
ಕೈಗಿತ್ತು ಈಗ ಹೀಗಾಡಿದರೆ ಇಗೊ ಹೊರಟೆ.
ಹ್ಞಾ! ನಿಲ್ಲಿ ಅಲ್ಲೆ, ಸರಿಯಿರಿ ದೂರ, ಸೆರಗ ಬಿಡಿ,
ನೋಡುತ್ತಿದ್ದಾನೆ ನಿಮ್ಮಾಟಗಳ ನಿಮ್ಮ ಮಗ!
ವರುಷ ದಾಟಿದ ಹುಡುಗ ತಿಳಿಯದಿರುವುದೆ ಅದಕೆ,
ನೀವಾಡಿದರೆ ಹೀಗೆ ಏನಾಡುವುದೊ ಹೊರಗೆ!
*****
Related Post
ಸಣ್ಣ ಕತೆ
-
ಹೃದಯ ವೀಣೆ ಮಿಡಿಯೆ….
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…
-
ದೇವರ ನಾಡಿನಲಿ
೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…
-
ಟೋಪಿ ಮಾರುತಿ
"ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…
-
ಗ್ರಹಕಥಾ
[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…