ಕನಸಿನ ಮೋಡಿ

ಆ ನೋಟ! ಮೃದುಮಧುರ ನೋಟವೆಲ್ಲಿಹುದು? ಅಂದೊಮ್ಮೆ ಮಿಂಚಿದುದು ಅಲ್ಲೆ ಅಳಿದಿಹುದು ಹುಚ್ಚು ಕನಸಿನಲಾದರು ಮತ್ತೆ ಹೃದಯವ ಸೇರದು! ಮತ್ತೊಮ್ಮೆ ಪಡೆಯುವೆನೆ? - ಮತ್ತೆ ಬಾರದದು ಮೇಲ್ವಾಯ್ದ ಜ್ವಾಲೆಯೊಲು ಸಾಗಿ ಹೋಗಿಹುದು ! ಕಾಲನದಿ ಸಾಗುತಿರೆ...

ಹಗಲಿದೊ ಮುಗಿಯುತ ಬಂತು

ಸಂಧ್ಯಾ ರಾಣಿಯು ಸುಂದರ ಸ್ವಾಗತ ನೀಡಿರಲದ ಕೈಕೊಳ್ಳಲು ಸರಿಯುತ ಉರಿಗಣ್ಣಿನ ರವಿ ಪಶ್ಚಿಮವರಸುತ ಕಾತರದಾತುರದಲಿ ಮುನ್ನಡೆದಿರೆ ಹಗಲಿದೊ ಮುಗಿಯುತ ಬಂತು! ಮನೆಯಲಿ ಮಡದಿಯು ಕಾದಿಹ ಕಾತರ ತೊದಲು ಕಂದರಾಲಿಂಗನದಾತುರ ಜನರೆದೆ ತುಂಬಿರೆ ದಾರಿಯ ಸರಸರ...

ಮದುವೆಯಾಯಿತು ಉಷೆಗೆ

ಮದುವೆಯಾಯಿತು ಉಷೆಗೆ ಮಸಣ ಮಂಟಪದಲ್ಲಿ. ಕೇಳಲಿಲ್ಲವೆ ಊರು, ಜನರದರ ವೈಖರಿಯ? ವರನ ಬಳಗವು ಬಂದು ನಿಂತಿತ್ತು, ಅಲ್ಲಲ್ಲಿ ಹೆಜ್ಜೆ ಹೆಜ್ಜೆಗು ವಧುಗೆ ಕಾಲ ಕೂಡಿಟ್ಟುರೆಯ ಮೂಳೆಯಾಭರಣಗಳ ಬಳುವಳಿಯ ನೀಡುತ್ತ! ವಧುವಿನದು ಮೃದುಪಾದ ನೊಂದರಾಗದು ಎನುತ...

ಅರೆ ಕಳೆದಿದೆ ರಾತ್ರಿ

ಜಗವೆಲ್ಲವು ಕನಸಿನ ಮಡಿಲಲಿ ಮೋಹದಿ ಮಲಗಿದೆ- ನಾನಿನ್ನೂ ಕಣ್ಣೀರಿನ ಹನಿಗಳ ನಡಗಿಸಿ, ಉಷೆಯ ಹಂಬಲಿಸಿ ಎದ್ದಿರಲು, ಅರೆ ಕಳೆದಿದೆ ರಾತ್ರಿ! ಈ ತೀರದ ದನಿಮರಳಿ ಬಂದು ಮಾರ್ದನಿಯಿಡೆ, ನಿಶಿಯೆದೆ ಮೌನ ಸಿಡಿದು ಚೂರು ಚೂರಾಗಲು,...

ನನ್ನ ನಿನ್ನ ಅಂತರ

ನಿನ್ನದು ಆ ತೀರ - ನನ್ನದು ಈ ತೀರ. ನಟ್ಟ ನಡುವಿನ೦ತರ- ತೊರೆಯ ಅಭ್ಯಂತರ, ಕಿರಿದಹುದು, ಕಿರಿದಲ್ಲ ; ಹಿರಿದಲ್ಲ, ಹಿರಿದಹುದು ; ಕಿರು ತೊರೆಯ ಅಂತರ ಕಡಲಿನಂತರ! ಹರಿಯುವಲೆಗಳಂತೆನ್ನ ಮನಸಿನಾತುರ ಹರಿಯುತಿದೆ, ಕೊರೆಯುತಿದೆ...

ಉಷೆ ಬಂದು ನಕ್ಕಾಗ

ಇರುಳಿನಾಗಸದಿಂದ ನಕ್ಷತ್ರ ನೆಲಕಿಳಿದು ತಾವರೆಯ ಎಲೆಮೇಲೆ ನಿಂತಿತ್ತು, ಉಷೆ ಬಂದು ನಕ್ಕಾಗ, ಹನಿಯೆದೆಗೆ ರಂಗಿಳಿದು ಬಣ್ಣ ಬಣ್ಣದ ಬಯಕೆ ಹೊಳೆದಿತ್ತು! ಉಷೆಯುಳಿವು ಮೂರೆ ಚಣ! ಮರು ನಿಮಿಷ ಜಗವನ್ನು ಹಗಲ ಹೊದಿಕೆಯ ಬಿಳುಪು ಪಸರಿಸಿತು....

ಬೆಳಗಾಯಿತೇಳು ಉಷೆ

ಇರುಳಿನಲಿ ಮೊಗ್ಗಾಗಿ ಮರೆಯಾದ ಮೋಡಗಳ ಚೆಂಗುಲಾಬಿಯ ದಳಗಳರಳುತಿವೆ, ರವಿಯುದಯ ಎರಚುತಿರೆ ಓಕುಳಿಯನೆಲ್ಲೆಲ್ಲು ! - ಹಕ್ಕಿಗಳ ರಾಗದುನ್ಮಾದದಲಿ, ಹಸುರು ನೆಲ ಜಗದೆದೆಯ ಒಲವ ಹರಕೆಯ ಹೊತ್ತು ತೋರುತಿದೆ ಹನಿಗಳಲಿ ! ತಂಗಾಳಿ ಬೀರುತಿದೆ ಹಿಂದೆಂದು...

ಹೋದಳುಷೆ-ಬಂತು ನಿಶೆ

ದೇವರಲ್ಲಿ ಹಸಿದನಂತೆ, ಎನಿತಿತ್ತರು ಸಾಲದಂತೆ, ಹಾಳುಹೊಟ್ಟೆ ಹಿಂಗದಂತೆ, ಅದಕೆ ಜೀವ ಬಲಿಗಳಂತೆ, ಹೋದಳುಷೆ - ಬಂತು ನಿಶೆ! ನಾವಿಬ್ಬರು ಕೂಡಿದಾಗ, ಎರಡು ಹೃದಯದೊಂದು ರಾಗ ಮೋಡಿಯಿಡಲು, ಕಾಲನಾಗ ಹರಿದು ಕಚ್ಚಿತವಳ ಬೇಗ. ಹೋದಳುಷೆ -...

ಹಗಲು – ಹರಿಗೋಲು

ಇಂದು ನೀ ಬಂದಿರುವೆ. ನನ್ನ ಬಾಳಿನ ಹಗಲು- ಹರಿಗೋಲು. ಹುಚ್ಚು ಹೊಳೆ ಕರೆಗಿನ್ನು ಬೆಚ್ಚಿಲ್ಲ ! ಕಾರ್ಗತ್ತಲೆಯ ಕಂಡು, ಮೊಗ್ಗಾದ ಮನದರಳು ಉಷೆ ಬರಲು, ಕಮಲದೊಳು ಕಂಪಿನಿಂ ಸುಖಸೊಲ್ಲ ಹರಹುತಿದೆ, ಮೈಯರಿತು ! ಕೊನೆತನಕ...