ತೀ ನಂ ಶ್ರೀ

ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು. ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು! ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ ಕಡಲ ಚಿತ್ರವನು ಕಣ್ಣಾಗಿ ಈಜಿದೆವು. ಪ್ರಕ್ಷೇಪ ಲೋಪ ಲಿಪಿಕಾರನಕ್ಷರಪಾಪ...

ಭೂಮಿ ಗುಂಡಾಗಿದೆ ನಿಜತಾನೆ?

ಹುರಿಹೊಸೆದ ಹಗ್ಗದಲಿ ಹಾವು ಕಂಡಿತೆ, ಪಾಪ! ಬರಿಯುಸಿರು ಬಿಟ್ಟವರೆ ಇಲ್ಲಿ ಕೇಳಿ; ತುದಿಗಾಲ ಮೇಲೇಕೆ ನಿಲ್ಲುವಿರಿ? ಬಣ್ಣದುರಿ ಹಳೆಮನೆಯ ಉರಿಸಿದರೆ ತಪ್ಪೆ ಹೇಳಿ. ಅಜ್ಜ ಮೊಮ್ಮಗು ಮಾತು ನಮಗೇಕೆ ಬಿಟ್ಟುಬಿಡಿ ಮಣ್ಣು ಹಡೆದದ್ದರಿತೆ ಪ್ರೀತಿ...

ಪರಮಹಂಸ

ಏನಿದೀ ಜಿಗಿದಾಟ ಕಿವಿಹರಿವ ಕೂಗಾಟ ಇದುವರೆಗು ಕೇಳರಿಯದೀ ಆರ್ಭಟ? ಕಳೆದ ಸಂತಮಹಾಂತರಾರು ಕಾಣದ ನೆಲೆಯ ಕಂಡನೆಂಬಂತೆ ಇವನಾಡುವಾಟ! ಅವರಿವರ ನಾಲಗೆಯ ಕಿತ್ತು ತಲೆಯೊಳು ನೆಟ್ಟು ಬೆಳೆಸಿಹನು ಇವನೊಂದು ಭಾರಿ ಮಂಡೆ. ರಮಣ ಅರವಿಂದ ನುಡಿಯುವರು...

ಅಪಘಾತ

ಸ್ವಾಮಿ, ಇದೆ ಕಡೆಗೀಟು; ತಲೆತಲಾಂತರದಿಂದ ನಮ್ಮ ನಿಮ್ಮಜ್ಜ ಪಿಜ್ಜಂದಿರೆಲ್ಲರು ಬೆಸೆದ ಎಂಥ ಘನ ಬಾದರಾಯಣ ದೈತ್ಯಬಂಧವೂ ದಾಟಬಾರದ ಕಟ್ಟಕಡೆಗಟ್ಟು ಇದರೀಚೆ ಏನಿದ್ದರೂ ನನ್ನ ಸ್ವಂತ, ಅಪ್ಪಟ ನನ್ನ ಬದುಕು ನನ್ನದೆ ನಾಚು. ಹಾ! ನಿಲ್ಲಿ...

ಸಾವು

ಕಂಡಿರುವೆ ಮೂರು ಸಲ ಇವನ ಮೋರೆ, ಮನೆಯಂಗಳಕೆ ನುಗ್ಗಿ ಹೀಚು ಹರಿವಾಗ, ನೋಡುವರ ಕೈಕಟ್ಟಿ ಹಗಲೆ ಲೂಟಿಯ ಹೊಡೆವ ದರೋಡೆಕೋರ ಹಂಡೆಯಂಥಾ ಹೊಟ್ಟೆ, ಕಿರುಬೆಂಡುಗಾಲು, ಉಂಡದ್ದು ಉದರ ಸೇರದ ಯಾವ ರೋಗವೋ! ತಿನಿಮೋರೆ ಚಂದವೋ,...

ಬರಡು

ಬಯಲ ಹೆಡೆಯಾಗಿ ನೆರಳ ಕೊಡೆಯಾಗಿ ಫಲ ಸುರಿಸಲು ಬಯಸಿ, ಮೊಳಕೆ ಒಡೆಯುತಿರುವಾಗಲೆ ಯಾವುದೊ ನಂಜು ಗಾಳಿ ಬೀಸಿ, ತೊಟ್ಟ ವಸ್ತ್ರವೇ ಜಗುಳಿ ಬಿದ್ದಂತೆ ಎಲೆಯುದುರಿವೆ ಕೆಳಗೆ; ಪ್ರಾಯದ ಗಿಡ ಆಯ ತಪ್ಪಿದಂತಿದೆ ಈ ರೂಪವೆ...

ವಿಷವದನ

ಆಗಿನಿಂದಲು ಇವನು ಹೀಗೆಯೇ ರೋಗಿಯೇ, ಮಾತಲ್ಲಿ ಮಾತ್ರ ಧನ್ವಂತರೀ ಶೈಲಿಯೇ; ಇಷ್ಟು ದಿನ ಹುಚ್ಚೆದ್ದು ಊದಿರುವ ರಾಗದಲಿ ಶೋಕ ವ್ಯಭಿಚಾರಿ, ಸ್ಥಾಯಿಯು ಮಾತ್ರ ಟೀಕೆಯೇ. ಟೀಕೆ ಪರರಿಗೆ, ಆತ್ಮಾರ್ಚನೆಗೆ ನುಡಿಕೇದಗೆ! ಇವನ ಬೊಜ್ಜು ಪಟಾಕಿ...

ನೀನು

ಎದೆಯ ಹೊಂಡದಲೆಲ್ಲ ಎಚ್ಚರದಿ ಕೈಯಾಡಿ ಹುಡುಕಿ ಎತ್ತಿದ್ದೇನೆ ನಿನ್ನ, ನಿನ್ನ ಮಲಗಿಸಿ ಮೈಯ ಅಂಗುಲಂಗುಲವನ್ನು ದುರ್ಬೀನುಗಣ್ಣಿನಲ್ಲಿ ಬೆದಕಿ ನೋಡಿದರೆ ಇದೇನು, ಎಲ ನೀನು ಪ್ರತಿ ಕಣದಲೂ ಖುದ್ದು ನಾನು! ಜವಳಿಯಂಗಡಿಯಲ್ಲಿ ಗಂಟೆಗಟ್ಟಲೆ ಹುಡುಕಿ ಬಟ್ಟೆ...

ವೃತ್ತ

ನಿಂತ ನೆಲವೆ ದ್ವೀಪವಾಗಿ ಕೂಪದಾಳದಲ್ಲಿ ತೂಗಿ ಕಂದಕವನು ಕಾವಲಾಗಿ ತೋಡಿದಂತೆ ನನ್ನ ಸುತ್ತ ಒಂದು ಕಲ್ಲ ವೃತ್ತ. ಹೃದಯ ಮಿದುಳು ಕಣ್ಣು ಕಿವಿ ಉಂಡ ಸವಿ, ಮನದ ಗವಿಯ ತಳದಲೆಲ್ಲೊ ಪಿಸುಗುಟ್ಟುವ ಪಿತಾಮಹರ ಚಿತ್ತ-...

ಮಂಗಳ

ನನಗು ನಿನಗೂ ನಡುವೆ ಇಂಥ ಕೊರಕಲು ಇದ್ದು ತಿಳಿಯದಿದ್ದುದು ಹೇಗೆ ಮಾರಾಯ? ಅಡ್ದಬಿದ್ದಿದ್ದ ಈ ಲೊಡ್ಡು ಸಂಕವ ಗಟ್ಟಿ ನೆಲವೆಂದೆ ಭ್ರಮಿಸಿದ್ದೆ ಎಂಥ ಮಡೆಯ! ಇಷ್ಟು ದಿನ ಅದೃಷ್ಟವಿತ್ತು ಆ ಕಡೆ ಬರಲು ಮುರಿದುಬಿದ್ದಿತು...