ಕನ್ನಡಿತಿ

ಆಗ ಭಾರತೀಯ ನಾರಿನ ಮಣಭಾರದ ಪಟ್ಟಾವಳಿಯನುಟ್ಟು ಬಗೆಬಗೆಯಲಂಕಾರದದೊಡವೆಗಳನಿಟ್ಟು ಭಾರಕ್ಕೆ ಬೆನ್ನುಬಾಗಿ, ಮೂಗಿನ ಗಾಡಿನತ್ತಿನಿಂದ ಕತ್ತು ಬಾಗಿ, ಪಾದಪಾದಗಳಲ್ಲಿ ವೃತ್ತ ವೃತ್ತಾಕಾರದ ಕಡಗ ಕಂಕಣಗಳಿಂದ ಛಂದೋ ಬದ್ಧ ಶಾಸ್ತ್ರ್‍ಈಯ ನಾಟ್ಯವಾಡಲು ಸೆಣಸುತಿದ್ದೆ, ಬೆವರಿ ಬಿಳಿಚಿಕೊಂಡು ನಿರ್ಜೀವವಾಗಿ...

ನಿಸ್ಸಹಾಯ

ಎಲ್ಲರನೊಂದೆ ಪಡಿಯಚ್ಚಿನಲಿ ಕೂಡಿಸುವುದು ಎಲ್ಲ ಬೇಲಿಗಳ ಕಿತ್ತೊಗೆದು ಬಯಲಿನಲ್ಲೆಲ್ಲರ ಬೆವರ ಹನಿಗಳಾಗಿಸುವುದು ಭ್ರಮೆಗುಳ್ಳೆಗಳನಡಗಿಸಿ ಕಡಲೊಡಲಲ್ಲಿ ನಿಲಿಸುವುದು ಎಲ್ಲರ ನೆಲದ ಹಾಸಿಗೆಯ ಮೇಲೆ ಮಲಗಿಸಿ ಆಗಸವ ಹೊದಿಸಿ ಗಾಳಿ ಜೋಗುಳ ಹಾಡಿ ತಟ್ಟುವ ಖನಿಜಗಳನೆಲ್ಲ ಉರಿಯಲ್ಲಿ...

ಕನಸು

ಅಪ್ಸರೆಯರೊಡನೆ ಚಂದ್ರಲೋಕದಲ್ಲಿ ತಿರುಗಾಡಿ ಆನಂದಿಸುವ ಕನಸನ್ನು ಚಿರುಗುಮೀಸೆಯ ಹುಡುಗ ಕಾಣದಿದ್ದರೆ, ಒಂದು ಮನೆ, ಒಂದು ಆಸರೆಯ ಮರ, ಬಳ್ಳಿಗೆ ಹೂವು ಹಣ್ಣು, ತನ್ನ ಅಂಗಳದ ರಂಗೋಲಿ, ತನ್ನ ಸರದಾರನೊಡನೆ ಬದುಕಿನ ಹೋಲಿರಂಗು, ಇವನೆಲ್ಲ ಮೊಗ್ಗು...

ಸೋಲು

ನೆಲಮುಗಿಲಿನೆತ್ತರಕು ನಿಂತಿದೆ ಭೂತ ಕಂಡ ನೆತ್ತರು ಕೆಂಡದ ಮೇಲೆ ಕುದಿಯುತಿದೆ ತನ್ನ ಬಾಲವನ್ನೇ ತಿನ್ನುತ್ತಾ ಸುರುಳಿಸುತ್ತಿಕೊಂಡಂತೆ ಆಗಿದೆ ಪಂಜರದಿಂದ ಹೊರಬಂದ ಪಕ್ಷಿ ಹಾರಲಾರದೆ ಹೊಯ್ದಾಡಿದಂತೆ ಸೋತಿದೆ ನಂದನವನದಲ್ಲಿ ಕಣ್ಣೀರ ಹೊಳೆ ಹೊದರಲ್ಲಡಗಿ ಹರಿಯುತ್ತದೆ ಗಳಗಳ...

ನಂಬಿಕೆ

ಇಲ್ಲಿ ಹರಿಹರರ ಪರದಾಟ ಇಂದ್ರಾದಿಗಳ ಬಯಲಾಟ ಬಂಡಾಟಗಳು ನಡೆಯುತ್ತಿವೆ ಹಳಸಿ ಹಿಸಿದ ದಾರಗಳ ಸುತ್ತಿಕೊಂಡು ಕಪ್ಪೆ ವಟಗುಟ್ಟುತ್ತಿವೆ ನರಿತಂತ್ರ ಮಂತ್ರಿಸುತಿವೆ ಟ್ರೇಡು ಮಾರ್ಕುಗಳ ಬಳಿದ ಬಕಧ್ಯಾನ ಸಾಗಿದೆ ಮೀನ ಮಂದೆ ಮುಂದೆ ಮಡಿ ಮಾಡಿ...

ಕರೆ

ಇವನು ಸಂತೆಯಲ್ಲಿ ವ್ಯಾಪಾರವಿಲ್ಲದೆ ಚಿಂತಿತನಾದ ಬದುಕಿನ ತದುಕುವಿಗೆ ಮೈಗೊಟ್ಟ ಬವಣೆಯ ಭಾರಕ್ಕೆ ಬೆಂಬಾಗಿದ ದುರ್ವಾಸನೆಗಳಿಂದುಸುರು ಕಟ್ಟಿದ ಪಾಶಗಳಿಂದ ಹೆಡೆಮುರಿ ಕಟ್ಟಿಸಿಕೊಂಡ ದಾಸ್ಯದೊತ್ತಾಯದ ಜೀತಕ್ಕೆ ಹೆಗಲನಿತ್ತ ಸ್ವಾತಂತ್ರ್ಯ ಸಂಕೋಲೆಗೆ ಕಾಲನಿತ್ತ ನಾಯಿ ನರಿ ಗೂಬೆ ಗೋರಿಲ್ಲಾಗಳ...

ಆದೀತೆ!

ಒಂದು ಹೂವು ಇನ್ನೊಂದು ಹೂವಿನಾಳಗಲಗಳ ಕಂಡೀತೇ? ಅದರಂದ ಮಕರಂದಗಳ ಸವಿದೀತೆ? ಒಂದರ ಮಹತಿ ನಿಯತಿಗಳನರಿತೀತೆ? ಅದರಾಗುಹೋಗುಗಳನಳೆದೀತೇ? ಹಾಗೆ ಮಾಡಲು ಬೆಳಗನೊಳಗೊಂಡ ಅರುಣೋದಯದಂತೆ, ಮರವ ಧ್ಯಾನಿಸುತ್ತ ಕುಳಿತ ಬೀಜದಂತೆ, ಕೂಸು ಹೀಚಾಗಬೇಕೆನಿಸುತ್ತದೆ ಇಲ್ಲವೇ ಹಗಲುಗನಸು ಕಂಡುಂಡು...

ಶಕುನ ಕನ್ಯೆ

ಒಬ್ಬಾಕೆ ನನ್ನ ಮನೆಯಂಗಳದಲ್ಲಿ ಬಂದು ನಿಂತಳು ಹರಕು ಬಟ್ಟೆ ಅವಳ ಮಾನವನ್ನು ಹೇಗೋ ಮುಚ್ಚಿತ್ತು ಕಾಂತಿವಂತ ಮೈಯನ್ನು ಕಣ್ಣ ಬಾಣಗಳಿಂದ ರಕ್ಷಿಸಲು ಮುದುಡಿಕೊಂಡು, ಒಡಲನ್ನು ಕೈಯಲ್ಲಿ ಹಿಡಿದುಕೊಂಡು ತಲೆಗೂದಲಿಗೆ ಧೂಳೆಣ್ಣೆ ಸವರಿ ಕಲ್ಲು ಹೂಮುಡಿದು...

ಬೇನೆ

ಈ ಬಾಗಿಲೀಚೆಗೊಂದು ದೃಶ್ಯ ಆಚೆಗೊಂದ ದೃಶ್ಯ ಈಚೆಗೆ ಗಿಡಕಂಟಿ, ಹೀಚುಹೂವು, ಮುಳ್ಳು ಕಾಯಿ ಹಣ್ಣು-ಹುಣ್ಣು ಹುಳು ಆಚೆಗೆ ತಗ್ಗು ಕರೀ ಕಂದಕ ಹಾಳು ಬಾವಿ ಹಲವು ಕತ್ತರಿಗಳಿಗೆ ಸಿಕ್ಕಿ ನರಗಳೂಳಿಡುವ ಕೂಗು ಕತ್ತಲು, ಕೊರಗು...

ಉನ್ಮುಖ

ಬಟ್ಟೆಗಳ ಕಳಚಿನಿಂತ ಭಂಗಿ ಕೆಳಗಡೆ ಹುಡುಕಿ ಕಾಣದುದು ಮೇಲಿದೆಯೇನೋ ಎಂದು ತದೇಕವಾಗಿ ಆಗಸದಲ್ಲಿ ಕೀಲಿಸಿ ಕಣ್ಣ ಬೆಳಕಿಗೆ ಮುಖಮಾಡಿ ಕೇಳದ ಧ್ವನಿಯೆಡೆಗೆ ಕಿವಿಮಾಡಿ ತುಡಿಯದ ಸ್ಪಂದನಕ್ಕೆದೆ ತುಡಿತವ ತೆರೆದಿಟ್ಟು ಗೆಜ್ಜೆ ತಾಳಲಯದಲ್ಲಿ ಏಕತಾರಿಯ ಏಕನಾದದಲ್ಲಿ...