೧ ಹಾ! ಇನ್ನು ದೂರಮಾದೆಯ ನನಗೆ ಸಂತತಂ ಕಾಳಧೂಮವನುಗುಳ್ವ ಎಲೆಲೇ ಗಗನಚುಂಬಿ!* ಭೋರೆನುತ್ತಲಿ ವರುಣ ವೇಗದಿಂ ಜಲದಂಬಿ- ನಾ ವೃಷ್ಟಿಯಿಂ ಕಾಡಿದರು ತಾ ನಿರಂತರಂ; ಭೂವಳಯದಲ್ಲೆಲ್ಲಿರ್ದೊಡಂ ನಾಂ ಕಣಮೊಂದು ನೀರನೂ ಬಿಡದೆ ಹೀರುವೆನೆಂಬ ಪೂಣಾಂತು ಜಗವ ಸುಡುತಿದ್ದರೂ ಭಾಸ್ಕರನು-ಮೃಗಜಂತು ತರುರಾಜಿ ಸರ್ವಮುಂ ಇರೆ ಬಿಸಿ...

ಜೀತಾ ಮಾಡಿ ಕಾಸ್ ಕೆರ್‍ಕೊಂಡಿ ಅಟ್ಟೀಲ್ ಎಡ್ತೀನ್ ಮೋಸೋಸ್ಕಂಡಿ ಏನೋ ಕುಡಿಯಾಕ್ ಬಂದ್ರೆ- ಸೇರಿಗ್ ಸೇರು ನೀರ್‍ನೆ ಬೆರಸಿ ಕಾಸ್ ಕೇಳ್ತೀಯ ಮೋಸ ಮರಸಿ ಸಾಚಾ ಮನ್ಸರ್ ಬಂದ್ರೆ? ೧ ನನ್ ಕೈ ಕಾಸು! ನಂಗ್ ಔಳ್ ಎಡ್ತಿ! ಮೋಸ ಮಾಡ್ತೀನ್ ನಾನ್ ಔಳ್ಗ್ ಇಡ್...

ಸ್ಫೂರ್‍ತಿಯ ಮೂರ್‍ತಿಗೊಂಡಂತೆ ಕಂಡವು ಆನೆ ಕುದುರೆ ಹಾ- ವುಗೆ, ನಿನ್ನ ಹೊಸ್ತಿಲವ ದಾಟಿ ಇಲ್ಲಡಿಯಿಟ್ಟೆ; ಬಿಜಯ ಮಾಡಿಸಿದೆ ವೈಭವದಿ, ದಿಗ್ವಿಜಯ ಮಾ- ಡುವೆ, ಕುರುಹಗಳ ತೋರಿ ಹೇಳುತಿಹೆಯಾ, ನಲ್ಲ! ನನಸೆಂದು ತೋರಿ ಹಾರೈಸಿದುದು ಕನಸಾಗೆ, ಕನಸು ಕನ್ನ...

ಸಂಚಾರದಲ್ಲಿದ್ದ ಒಬ್ಬ ಗುರು ಒಂದು ದೇವಾಲಯದಲ್ಲಿ ತಂಗಿದ್ದರು. ಅಲ್ಲಿಗೆ ಕೆಲವು ಶಿಷ್ಯರು ಬಂದರು. “ಗುರುವೆ! ನಮಗೆ ದಾರಿ ತೋರಿಸಬೇಕೆಂದು” ಒಬ್ಬ ಶಿಷ್ಯ ಕೇಳಿದ. “ನಿನ್ನ ಮುಂದಿರುವ ವೃಕ್ಷವೇ ನಿನ್ನ ದಾರಿ” ಎಂದರು ಗು...

ಮನೆ ಮನೆಯೊಳೆಮಗೆಷ್ಟೊಂದು ಅಡುಗೆ ಯನುಕೂಲವಿರುತ್ತಿರಲೇನು ಮಲವೆದ್ದು ಘಂ ಮೈನುವ ಬೀದಿ ಬದಿಯನ್ನದಾತುರವೋ? ಮನೆ ಮಡದಿ ಮಕ್ಕಳೊಲವಿನಲಿ ಉಂಬನ್ನ ತನು ಮನವಾಗೆ ಮನೆಯೆ ಮಂದಿರವಕ್ಕು – ವಿಜ್ಞಾನೇಶ್ವರಾ *****...

ಸುಳಿದೊಡೆದೂ ದಿಟ್ಟಿ ಹೆಽರುಽಗಾಽಗಽಲೀಽಽ ತಾನಾ ದಿಟ್ಟಿ ಹೇರುಗಾಗಲಿ ಹಡೆದಳೇ ತಾಯೀ || ೧ || ಹೋದರ್ ಬಂದರ ದಿಟ್ಟಿ ವಽಲಽಗಾಗಲೀ ತಂದಾ ತಾನಾ ಆಚೆಮನೆ ಲಕ್ಕದಿರು ಇಚೆಮನೆ ತಂಗದೀರು ಓಡೋಡಿ ಬನ್ನೀರೋ || ೨ || ನಮ್ಮ ತಂಗೀ ಬಂದಾದಂದಿ ಹಾನಾ ತನ್ನಿರೋ ಹ...

ನಾಯಕನು ಶಿವಪೂಜೆ ಮುಗಿಸಿಕೊಂಡು ನಾಷ್ಠಾ ಮಾಡಿ ಕೊಂಡು, ಬಂದು ಗಿರಿಜಾಮೀಸೆಯನ್ನು ತೀಡುತ್ತಾ ದಿವಾನ್ಖಾನೆಯಲ್ಲಿ ಕುಳಿತಿದ್ದನು. ಮನೆವಾರ್ತೆಯು ಬಂದು ಬಾಗಿಲಲ್ಲಿ ನಡುಕಟ್ಟಿ ಕೊಂಡು ನಿಂತಿದ್ದನು. ಅವನ ಕಂಕುಳಲ್ಲಿ ಒಂದು ಕಟ್ಟು ಕಾಗದ. ಜೊತೆಗೆ ಆಳು...

ಮುಗ್ಧ ಮಾನವನು ಭಕ್ತಿ ಗೈಯುವಾಗ ಮಾರಣ ಹೋಮ ಮಾಡುವುದು ಶೋಭೆಯೆ! ಇಂಚು ಇಂಚು ಭಾವಗಳಿಂದ ಜೀವಿಸುವಾಗ ನೀವುರುದಿರ ಚಲ್ಲಾಟವಾಡುವುದು ಯೋಗ್ಯಯೆ!! ಬಹಿರಂಗದಲಿ ಮನಸು ಬತ್ತಲೆ ಗೊಳಿಸಿ ಕುಣಿಯುವ ನೀವು ಬಾಳು ಮೋಜೆಂದಿರಾ! ದುರಾಶೆ, ದುಸ್ಸಹಾಸಗಳಲಿ ಮರೆಯ...

ಇದಾರ ಮನಸು ಉದಾರ ಮನಸು ಕನಸುಗಳ ಹೊಸೆಯಿತೊ ಚಿತ್ರ ಬರೆದು ಬಣ್ಣ ಹಚ್ಚಿ ಮೂಡುವ ಮೊದಲೆ ಅಳಿಸಿತೊ ಇದಾರ ಮನಸು ಉದಾರ ಮನಸು ಭಾವನೆಗಳ ಭಾವಿಸಿತೊ ಪ್ರೀತಿಯೆಂದು ಕರುಣೆಯೆಂದು ಕಣ್ಣ ತುಂಬ ತುಂಬಿತೊ ಇದಾರ ಮನಸು ಉದಾರ ಮನಸು ಕುಲ ಕೋಟಿಯ ಕಲ್ಪಿಸಿತೊ ಒಂದ...

ಸಂಜೆಗಾಳಿಗೆ ಜಳಕ ಮಾಡಿಸೆ ಹನಿತು ಮಳೆ ಹೊಳೆಯೋಡಿತು ಬಾನ್‌ ಬೆಸಲೆ ಶಶಿ ನೋಡಿ ನಗುತಿರೆ ತಿರೆಗೆ ತಂಗದಿರಾಯಿತು. ಮುಗಿಲ ರೆಂಬೆಯ ಮೇಲೆ ಮಿಂಚಿನ ಹಕ್ಕಿ ರೆಕ್ಕೆಯ ಕೆದರುತ ಹವಣಿಸಿದೆ ಉಡ್ಡೀನ ಲೀಲೆಗೆ ಚಂದ್ರಲೋಕವ ಬಯಸುತ. ಕಪ್ಪೆ ಜೀರುಂಡೆಗಳು ಮೇಳದಿ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...