ಇದು ಮಂತ್ರ; ಅರ್‍ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ; ತಾನೆ ತಾನೆ ಸಮರ್‍ಥಛಂದ; ದೃಗ್ಬಂಧ-ದಿ- ಗ್ಬಂಧ; ಪ್ರಾಣದ ಕೆಚ್ಚು ಕೆತ್ತಿ ರಚಿಸಿದೆ; ಉಸಿರ ಹೆದೆಗೆ ಹೂಡಿದ ಗರಿಯು ಗುರಿಯ ನಿರಿಯಿಟ್ಟು ಬರು- ತಿದೆ ತೂರಿ ಲೀಲೆಯಲನಾಯಾಸ. ಗರುಡನಂ- ತೆರಗಿ ಬಂ...
ಒಬ್ಬ ಅತಿ ಎತ್ತರದ ಕಂಭವನ್ನು ಏರಿ ಕುಳಿತು ತಾನು ಎಲ್ಲರಕ್ಕಿಂತ ಎತ್ತರದಲ್ಲಿ ಇರುವನೆಂದು ಹೆಮ್ಮೆಪಡುತ್ತಿದ್ದ. ಅವನ ಸಹಪಾಠಿ ಹೇಳಿದ “ನಾನು ಹತ್ತದೇ ಈ ಕೋಲಿನಿಂದ ಕಂಭದತುದಿ ಮುಟ್ಟ ಬಲ್ಲೆ. ಸುಲಭದಲ್ಲಿ ಎತ್ತರ ಮುಟ್ಟುವಾಗ ನಿನಗೇಕೆ ಇಷ್ಟು...
ಸತ್ಯವನು ಎತ್ತಿ ತೋರುವ ಬೆಳಕನೊಡೆದಲ್ಲಿ ಸ್ತುತ್ಯದ ಹಸುರಿಹುದದರ ಮಧ್ಯದಲಿ ಎತ್ತಿ ಹೇಳುವುದೆಮ್ಮ ಬದುಕಿನ ಸತ್ಯವಿಹುದಿಲ್ಲಿ ಅತ್ತ ಕೆಂಪೇರಿ ಗರ ಬರ ಬಾರದಿರಲಿ ಇತ್ತ ನೀಲಿಮದ ನೆರೆಯೇರದಿರಲಿ – ವಿಜ್ಞಾನೇಶ್ವರಾ *****...
ಕತೆಹೇಳ್ ಕತೆಹೇಳ್ ಯತ್ ಹಿಡಿತು ಬದ್ಕ ಬಾಲೆಲ್ಲಾ ನಾಯ ನೆರಿಪಾಲಾಯ್ತು || ೧ || ಮೊಲಕೊಂದೋನ್ ಶತ್ ಮೂರ್ ತಿಂಗಲಾಯ್ತು ಮೊನ್ನಾಗ ಕೊಂದ್ ಮೊಲ ಇವತ್ ಪಲ್ದ್‌ಯಾಯ್ತು || ೨ || ***** ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ...
ಕಾಸ್ತಾರರ ಮುಖಂಡ ಹಕೀಂ ಬಂದು ಸಲಾಂ ಹೊಡೆದು ನಿಂತನು. ” ಏನೋ ಬಂದೆ ಹಕೀಂ!” “ಏನಿಲ್ಲಾ ಖಾವಂದ್ ! ನಾಲ್ಕು ಕುದುರೆ ಅಲ್ಲಿಗೆ ಹೊರಡ ಬೇಕು ಅಂತ ಅಪ್ಪಣೆ ಆಯ್ತಂತೆ. ಯಾವುದು ಯಾವುದು ಅಂತ ಅಪ್ಪಣೆ ಅಂತ ಬಂದೆ ಖಾವಂದ್ ! ”...
ದೇವಾ ನಿನಗೆ ನಿಚ್ಚ ಮೊರೆ ಇಡುವೆ ಎನಗೆ ಸ್ವಚ್ಛ ಮನವ ನೀಡು ನೀನು ನಿನ್ನ ಕೃಪೆ ಸಾಗರ ಬತ್ತಿ ಹೋದರೆ ಈ ನನ್ನ ಜನುಮ ಸಾರ್‍ಥಕವೇನು! ಮಾಯೆ ಇದು ಭೀಕರ ಕರಾಳ ಇದರ ಬಾಹುನಲ್ಲಿ ನಲಗುತ್ತಿರುವೆ ನಾ ನೀನು ನನ್ನ ಮಾಯಾ ಸೆರೆ ಬಿಡಿಸದೆ ಶಾಂತಿ ಎಲ್ಲಿಯದು ಹ...
ಬಳಿಕ ನಾಂ ಬೇಸತ್ತು ಜೀವರಸವನು ಬಯಸಿ ಈ ತುಟಿಯನಾಮಣ್ಣು ಕುಡಿಕೆಗಾನಿಸಲು, ಅದರ ತುಟಿಯಿದಕೆ ತತ್ತ್ವವನುಸಿರಿತೀ ತೆರದಿ: “ಕುಡಿ, ಸತ್ತ ಬಳಿಕ ನೀನಿತ್ತ ಬರಲಾರೆ.” *****...
ಗಗನವು ಯಾರದೊ ಕುಸುಮವು ಯಾರದೊ ಬಯಸುತಿರುವ ಹೃದಯಕೆ ರಂಗವು ಯಾರದೊ ಗೀತವು ಯಾರದೊ ಕುಣಿಯುತಿರುವ ಪಾದಕೆ ಹಲಗೆ ಯಾರದೊ ಬಳಪವು ಯಾರದೊ ಬರೆಯುತಿರುವ ಹಸ್ತಕೆ ತಂಬುರ ಯಾರದೊ ತಾಳವು ಯಾರದೊ ಹಾಡುತಿರುವ ಕಂಠಕೆ ಹೂವು ಯಾರದೊ ದಾರವು ಯಾರದೊ ಕೋಯುತ್ತಿರುವ...
ಇಗೊ ಸಂಜೆ, ಸಖಿ, ಚೆಂಬೊಗರಿಂ ರಂಗೇರಿಹ ಜಲದಾಬ್ಜಮುಖಿ ತುಸ ತುಟಿತೆರೆದು ಶಿಶುಚಂದ್ರನ ನಗೆ ನಗುವಳು ಸ್ವಾಗತವೊರೆದು; ನಿನ್ನು ಸಿರ್ ಕಂಪ ಕೊಳ್ಳಲು ಎಲರ್ ತರುತಿಹನೀ ಬನದಲರಿಂಪ; ಓ ಚಪಲಾಕ್ಷಿ, ಎನ್ನೆದೆಯಾಗಸದೊಳು ಬಿಡು ಅಕ್ಷಿಯ ಪಕ್ಷಿ, (ಇಗೊ ಸಂ...
ನೆತ್ತರ ಹೆಪ್ಪುಗಟ್ಟಿಸುವ ಅಮವಾಸ್ಯೆ ಕತ್ತಲು ಕಳೆದು ಸಣ್ಣ ಗೆರೆಯಂತೆ ಮೂಡಿದ ಈದ್ ಕಾ ಚಾಂದ್ ಮೋಡಗಳಿಲ್ಲದ ಶುಭ್ರ ಅಗಸದಲ್ಲಿ ಕಾಣುತ್ತಿದ್ದಾನೆ ನೋಡು ರಂಜಾನ್ ಹಬ್ಬದ ಸಣ್ಣ ಗೆರೆಯಂತಹ ಚಂದ್ರನ ನೋಡಿದ ಮಗಳು ಓಡೋಡಿ ಬಂದು “ಅಮ್ಮಿ ಈದ್ ಮುಬಾರಕ್” ಹ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






