ದೇವಾ ನಿನಗೆ ನಿಚ್ಚ ಮೊರೆ ಇಡುವೆ
ಎನಗೆ ಸ್ವಚ್ಛ ಮನವ ನೀಡು ನೀನು
ನಿನ್ನ ಕೃಪೆ ಸಾಗರ ಬತ್ತಿ ಹೋದರೆ
ಈ ನನ್ನ ಜನುಮ ಸಾರ್‍ಥಕವೇನು!
ಮಾಯೆ ಇದು ಭೀಕರ ಕರಾಳ
ಇದರ ಬಾಹುನಲ್ಲಿ ನಲಗುತ್ತಿರುವೆ ನಾ
ನೀನು ನನ್ನ ಮಾಯಾ ಸೆರೆ ಬಿಡಿಸದೆ
ಶಾಂತಿ ಎಲ್ಲಿಯದು ಹಲಬುತ್ತಿರುವೆ ನಾ
ಎತ್ತೆತ್ತ ನೋಡಲು ಇಂದ್ರಿಯಗಳೇ
ಮತ್ತು ಮನದ ಅಟ್ಟ ಹಾಸಗಿವು
ಎನ್ನೊಳಗಿನವನನ್ನು ಕೇಳದೆ ಹೇಳದೆ
ಮಾಡುತ್ತಿವೆ ತೋಚಿದಂತೆ ಸಾಹಸವು
ಜನುಮ ಜನುಮಗಳಿಗೂ ಮನಸು
ಸಂಗಾತಿಯಾಗಿ ತಂದಿದೆ ನರಕ
ನಿನ್ನದಯೆ ನನ್ನ ಮೇಲೆ ಇರದಿರೆ
ನನಗೆ ಹೇಗೆ ಲಭಿಸಿತು ನಾಕ
ನಾನು ನಿನ್ನದುರಿನಲಿ ಅತ್ತು ಅತ್ತು
ಬೇಡುತ್ತಿರುವೆ ನನ್ನನ್ನು ಕಾಪಾಡು
ಈ ಮೋಹ ಮಾಯೆಗಳಿಂದ ಬಿಡಿಸೆನ್ನ
ಮಾಣಿಕ್ಯ ವಿಠಲನಾಗಿ ಮಾರ್‍ಪಾಡು
*****