ಒಬ್ಬ ಅತಿ ಎತ್ತರದ ಕಂಭವನ್ನು ಏರಿ ಕುಳಿತು ತಾನು ಎಲ್ಲರಕ್ಕಿಂತ ಎತ್ತರದಲ್ಲಿ ಇರುವನೆಂದು ಹೆಮ್ಮೆಪಡುತ್ತಿದ್ದ.
ಅವನ ಸಹಪಾಠಿ ಹೇಳಿದ “ನಾನು ಹತ್ತದೇ ಈ ಕೋಲಿನಿಂದ ಕಂಭದತುದಿ ಮುಟ್ಟ ಬಲ್ಲೆ. ಸುಲಭದಲ್ಲಿ ಎತ್ತರ ಮುಟ್ಟುವಾಗ ನಿನಗೇಕೆ ಇಷ್ಟು ಜಂಭ?” ಎಂದ. ಅಷ್ಟರಲ್ಲಿ ಅಲ್ಲಿಗೆ ಬಂದ ಒಬ್ಬ. “ಕಂಭದ ಎತ್ತರದಲ್ಲೇ ಕುಳಿತು ಯಾರಿಗಾದರೂ ಭೂಮಿಯ ಎದೆಯನ್ನು ಮುಟ್ಟಲು ಸಾಧ್ಯವೇ?” ಎಂದು ಸವಾಲು ಹಾಕಿದನು.
ಅಲ್ಲಿ ನೆರದ ಶಿಷ್ಯರಲ್ಲಿ ಯಾರೂ ಬಾಯಿ ಬಿಡಲಿಲ್ಲ. ಅದು ಸಾಧ್ಯವೇ ಇಲ್ಲವೆಂದರು. ಮೇಲೆ ಕುಳಿತಿದ್ದ ಶಿಷ್ಯ ತನ್ನ ಮಾನ ಭಂಗವಾಯಿತೆಂದು ಗೊಳೋ ಎಂದು ಅಳುತ್ತಾ ಕಣ್ಣೀರು ಸುರಿಸಿದ.
ನೀರು ಬಂದು ಭೂಮಿ ಎದೆಯನ್ನು ಮುಟ್ಟಿತು. ಇಳಿದು ಬಂದ ಶಿಷ್ಯನ ಬೆನ್ನು ತಟ್ಟಿ, ಗುರುಗಳು ಎಂದರು. “ನೀ ಕಂಭದ ಎತ್ತರದಿಂದ ಅತ್ತು ಭೂಮಿ ಎದೆ ತಟ್ಟಿದೆ” ಎಂದರು. ಶಿಷ್ಯನ ಮುಖ ಮತ್ತೆ ಪ್ರಫುಲ್ಲಿತವಾಯಿತು. “ಆಕಾಶ ಎಂದೂ ಭೂಮಿ ಮುಟ್ಟಲಾರೆ ಎಂದೆನಿಸಿದರು ಮಳೆಯಲ್ಲಿ ಅತ್ತು ಸುಲಭವಾಗಿ ಭೂಮಿ ಎದೆ ತಟ್ಟುವುದಿಲ್ಲವೇ” ಎಂದರು ಗುರುಗಳು.
*****