Home / ಜನತಾ ಗೀತೆಗಳು

Browsing Tag: ಜನತಾ ಗೀತೆಗಳು

ಹರಲೀಯ ಕೊಡಲಾರೆ | ಕರನಾಟ ಕಂದಽಗ ||ಪ|| ಹರಲೀಯ ಕೊಡಲಾರೆ, ಕರನಾಟ ಕಂದಗ ವರಬೊಲ್ಲ ತಂದ ಕೊಮರಾಗ | ಹ | ರಣದಾಗ ತುರಕರ ಗೆದ್ದ ವೀರಾಗ | ಹ | ೧ ಕಥೆಯ ಕೇಳಿರಿ ಜನರೆ, ಮತಿಯಿಟ್ಟು ತೂಗುತಲಿ ಸುತಗ ಮನಸಿಟ್ಟ ಕಳಲಯುಗದ | ಮಲತಾಯಿ ಬತವ ಹಾಡೇವ ನಿಜಗತೆಯ...

ಆಸರಕಿ ಅಳದಿಟ್ಟು, ಬ್ಯಾಸರಕಿ ಬಳದಿಟ್ಟು ಚಿಂತಿ ಕಾಲಾಗ ತುಳದಿಟ್ಟು | ಈ ದೇಹ ಶೀಲ ಮಾಡಿಟ್ಟ ಜನದಾಗ || ಕನ್ನೇಯ ಬಡಿಬ್ಯಾಡ, ಕೈಬಳಿ ಒಡೆದಾವು ಸಣ್ಣಂಚಿನ್ವಾಲೆ ಮುರಿದಾವು | ನನ ಮಗನ ನನ್ನಾಣಿ ಮಡದಿ ಬಡಿಬ್ಯಾಡ || ಛೀ! ಏಳ ಛೀಮಾರಿ, ನಾಚಿಕಿಲ್ಲದ ನ...

ಹೊನ್ನಿನ ಮಳೆ ಬಂದ, ಚಿನ್ನದ ಕೆರೆ ತುಂಬಿ ಕಿನ್ನುರಿ ಮಾಟದ ಹೊಳಿ ಬಂದು | ರಾಯರ ಸಣ್ಣಕ್ಕಿ ಕೇರ ತರಿಬ್ಯಾವ || ಗಂಡ ಹೆಂಡರ ಜಗಳ, ಗಂಧ ತೀಡಿದ್ಹಂಗ ಲಿಂಗಕ ನೀರ ಎರಿದ್ಹಾಂಗ | ಹಿರಿಹೊಳಿ ಗಂಗವ್ವ ಸಾಗಿ ಹರಿದ್ಹಾಂಗ || ಸಿಟ್ಟು ಮಾಡುವಿರೇನು, ಸಿರಿಯ...

ಹಸುಮಳ್ಕಳಾಡಿದರ, ಹಸನವ್ವ ಅಂಗಳ ದೆಸಿಮುಖದ ಜೆಲುವ ಮಗರಾಮ | ಆಡಿದರ ಹಸನ ಹಡದವ ಅರಮನೆ || ಹಚ್ಚನ್ನ ಮೈಯಾವ, ಹವಳದ ತುಟಿಯಾವ ಎಲ್ಲಿಗ್ಹೋಗಿದ್ದಿ ಗಿಳಿರಾಮ | ತವರೂರ ಉತ್ತತ್ತಿ ವನಕ ಉಲುವಿಲ್ಲ || ದೇಶದೇಶದ ಮಂದಿ, ಕಾಸಿಗೆ ಹೋಗತಾರ ಕೂಸು ಕಂದವ್ವ ಒ...

ತಂಬಿಟ್ಟು ತಿಳಿದುಪ್ಪ, ನಿ೦ಬಿ ಉಪ್ಪಿನಕಾಯಿ ರಂಬಿ ನನ ತಂಗಿ ಬಸರಂತ | ಹೇಳ್ಯಾನ ಹಂಪಿಸಾಗರದ ಬಣಜೀಗ || ಬಂಗಾರ ಬಳಿಯೊತ್ತಿ, ದುಂಡ ಕಂಕಣವೊತ್ತಿ ಗೊಂಡೇವು ಒತ್ತಿ ಮಲಗ್ಯಾಳ । ನನ ತಂಗಿ ದಂಡನಾಳವನ ಬಂಕೀಲಿ || ಸಂತೋಷದ ಸುದ್ದಿ, ಸಂತ್ಯಾಗ ಕೇಳೀನಿ ಕ...

ಅಲ್ಲದಂತ್ತೀಗೆ, ಬೆಲ್ಲದಂತ ನಾದೂನಿ ನೆಲ್ಲಿಕಾಯಂತ ನೆಗೆಣ್ಣಿ | ಕೂಡಾಡಿ ಕಲ್ಯಾಣ ತವರ ಮರತೇನ || ಅತ್ತೀಯ ಮನಿಯಾಗ, ಹತ್ತೆಂಟು ಬೇದಾರ ಹಚ್ಚಿಕೋ ಬ್ಯಾಡ ನನ ಮಗಳ | ಜನವೆಲ್ಲ ಗಂಗವ್ವನೆಂದು ಕರೆದಾರ || ಗಂಡನ ಈ ಮನೆಯು, ಗಂಡಗಾರಿಯ ಮುಳ್ಳ ಕುಂಡರಗೊಡ...

ಕಡಗವಿಲ್ಲದ ಕೈಯು, ದಿಡಗವಿಲ್ಲದ ಹೊಳೆಯು ಹಡದವ್ವ ಇಲ್ಲದ ತವರಿ‌ಽಗೆ | ಹೋದಽರ ನಡುದಾರ್ಯಾಗ ವಸ್ತಿ ಹೋದ್ಹಾಂಗ || ಮಳೆಯು ಬಂದರು ಬರಲಿ, ಮರದಽ ಮೇಲಿರುವೆ ಮಳೆ ನಿಂತ್ರು ಮರದ ಹನಿ ಬಿಡದ | ಹಡದವ್ವ ನೀಬಿಟ್ರ ನಿನ್ನ ಮನ ಬಿಡದ || ಕಾಸಿಗೆ ಹೋಗುದಕ, ಏ...

ಅಲ್ಲ ಅಂಗಡ್ಯಾಗ, ಬೆಲ್ಲ ಬಾಜರದಾಗ ಎಲ್ಲರ ಮಾತ ಮನದಾಗ | ಇಟಗೊಂಡು ಬೆಲ್ಲದ್ಹೇರಾಗಿ ಬರುವೀನೆ || ಬೇವಿನ ಆ ಗಿಡಕ, ಬೆಬ್ಬದ ಕಟ್ಟೆ ಕಟ್ಟಿ ಜೇನ ತುಪ್ಪದಲಿ ಹೊಯ್ನೀರ | ಹಣಿಸಿದರ ಬೇವು ತನ್ನಿಸವ ಬಿಡಲಿಲ್ಲ || ಜೀವಕ ಬಂದರ, ತಾಯಾರ ತಂದ್ಯಾರ ಮೈದೂನರ...

ದುಂದುಮೆ ಕೇಳ್ರಿ ದುಂದುಮೆ ||ಪ|| ದುಂದುಮೆ ಎಂತೆಂದು ಪಾಡಿರಿ ಜನರು ದುಂದುಮೆ ಬಸವಂತನ ಹಬ್ಬ | ದುಂದುಮೆ | ದುಂದುಮೆ ನಿರ್ದುಮೆ ಸಾಲಗನ್ನಿರೆ | ದುಂದುಮೆ ಕೇಳ್ರಿ ದುಂದುಮೆ ||ಅ. ಪ|| ಸಬ್ಬ ದೇಶದೊಳು ಇಂಥ ಹೆಚ್ಚಿನ ಮರ್ಕಟ ಅಬ್ಬರಿಸುತ್ತ ಹಾರ್ಯಾ...

ದುಂದುಮೆ ಕೇಳ್ರಿ ದುಂದುಮೆ ||ಪ|| ದುಂದುಮೆ ಎಂತೆಂದು ಪಾಡಿರಿ ಜನರು ದುಂದುಮೆ ಬಸವಂತನ ಹಬ್ಬ | ದುಂದುಮೆ ದುಂದುಮೆ ನಿರ್ದುಮೆ ಸಾಲಗನ್ನಿರೆ ದುಂದುಮೆ ಕೇಳ್ರಿ ದುಂದುಮೆ ||ಅ. ಪ|| ಶ್ರೀಶಮೈದುನನಿಗೆ, ಪಾಶುಪತವನಿತ್ತ ವಾಸವ ನಮಿತ ಮಹೇಶನನೆ | ಗಿರಿ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...