ಜಾಲೀಮರದ ಹಾಡು

ಕೇಳೊ ಗೆಳೆಯ ಕೇಳೊ ಕತೆಯ ಉರಿ ಹತ್ತಿದ ಕಟ್ಟಿಗೆ ಇದ್ದಿಲಾದ ವ್ಯಥೆಯ. ಕನ್ನಡದ ಕಾಡಿನಲಿ ಏಸೊಂದು ಮರಗಳು ಸಿರಿಗಂಧವೊಂದೇ ರಾಜನೇನು? ತೆಂಗು ಕಂಗಿನ ಜೊತೆಗೆ ಕಂಗಾಲಾಗಿರುವ ಕನ್ನಡದ ಜಾಲೀಮರ ಬಲ್ಲೆಯೇನು? ಗಟ್ಟಿ ಕೆಲಸಗಳಿಗೆಲ್ಲ ಜಗಜಟ್ಟಿ...

ಕರ್ಣ

ಸಿಕ್ಕೀತು ಹೇಗೆ ಕರ್ಣನಿಗೆ ಈ ನಾಡ ಸಿಂಹಾಸನ! ಹೆತ್ತ ತಾಯಿಯೆ ತೇಲಿಬಿಟ್ಟಳು- ನೀರ ಮೇಲಿನ ಪಯಣ. ಮೀನುಗಳು ಮುತ್ತಿಟ್ಟವು ಮೊಸಳೆಗಳು ಮುಟ್ಟವು ಅಲೆಯ ಮೇಲಿನ ಬಾಳು ಆಸೆಗಳು ಹುಟ್ಟವು. ಒಬ್ಬನಿಗೆ ಹೃದಯಕಳಶ ಇನ್ನೊಬ್ಬನಿಗೆ ಮೈಯ...

ಕರಿ ಕಣಿವೆ

ಅಳಬೇಕೆಂದುಕೊಳ್ಳುತ್ತೇನೆ- ಕಣ್ಣೀರು ಕಣ್ಮರೆಯಾಗುತ್ತದೆ. ನಗಬೇಕೆಂದುಕೊಳ್ಳುತ್ತೇನೆ- ಮಂದಹಾಸ ಮಾಯವಾಗುತ್ತದೆ. ಗೋರಿಯ ಆಳದಲ್ಲಿ ಚೀರಿಡುವ ನೆನಪುಗಳು; ಕರುಳ ಬಳ್ಳಿಯ ಕೊಲ್ಲುವ ಪ್ರೀತಿ ಜಾರೆಯಾದಾಗ ಸೋರೆ ಬುರಡೆಯಂತೆ ತೇಲುವ ಭೂತಗಳು. ನಡೆಯುತ್ತದೆ ಕಾಳಗ ಸಾವು ನೋವಿನ ನಡುವೆ ಒಳಗೆ...

ಬೆವರಿನ ಹಾಡು

ಭೂಮಿ ಒಳಗಿಂದ ಆಕಾಶ ಕಂಡವರು ಆಕಾಶದೊಳಗಿಂದ ಭೂಮಿಯ ಕಡೆದವರು ಕೆಲಸ ಕೊಟ್ಟವರನ್ನು ಮುಂದೆ ತಂದವರು ಕೆಲಸ ಮಾಡುತ್ತಲೇ ಹಿಂದೆ ಉಳಿದವರು. ಮುಟ್ಟಬಾರದು ಎಂದರೂ ಇತಿಹಾಸ ಕಟ್ಟಿದರು ಊಳಿಗದ ಸೆರೆಯಲ್ಲಿ ಉಸಿರನ್ನೆ ಉಂಡವರು ಬೆವರಿನ ಮಸಿಯಲ್ಲಿ...

ಗೋರಿ

ನನಗೆ ಗೋರಿಯ ತೋಡಿ ನಗುತಿರುವ ಬದುಕೇ ನಗುವ ನಿಲ್ಲಿಸು ನೀನು ಕೆಣಕಬೇಡ ಬಾಳೆ, ತೆಂಗಿನ ಕಾಯಿ, ಹೂವೆಲ್ಲ ಸಿಂಗರಿಸಿ ಗೋರಿ ಬದಿಯಲ್ಲಿ ನನಗೆ ಕಾಯಬೇಡ. ಎಷ್ಟು ಅಡಿ ಉದ್ದವಿದೆ ಎಷ್ಟು ಅಡಿ ಆಳವಿದೆ. ನೀನು...

ಕತ್ತಲ ರಾಣಿ

ನಟ್ಟ ನಡು ಇರುಳಲ್ಲಿ ಅರಳಿದ ಹೂವು ನೆಟ್ಟ ಬಾವುಟದಲ್ಲಿ ಹೆಪ್ಪೊಡೆದ ನೋವು ನಡುವೆ ಉರಳುವ ಚಕ್ರ ಚಲನೆ ಸಾವಯವ ಮೈಮಾಟದಲ್ಲಿ ಭಾವ ಬುದ್ಧಿಗಳ ಕೂಟದಲ್ಲಿ ಕತ್ತಲ ರಾಣಿಯ ಮಿಂಚಿನ ಪ್ರತಿಮೆ! ಕುಶಲವೆ ನನ್ನ ಕತ್ತಲ...

ನನ್ನ ಆತ್ಮ

ನನ್ನ ಆತ್ಮವನ್ನೊಮ್ಮೆ ಕಾಣಬೇಕೆಂದು ಬಯಸಿ ಎದೆಯೊಳಗೆ ಇಣುಕಿದೆ; ಅಲ್ಲಿ, ಅದು- ಕೊಳದ ದಂಡೆಯಲಿ ವಿಹರಿಸುವ ಬದಲು ಚಂಡಮಾರುತದೊಡನೆ ಹೋರಾಡುತ್ತಿತ್ತು. ನದಿಯ ನೀರಲ್ಲಿ ಮೀಯುವ ಬದಲು ಕಂಬನಿಯ ಕಡಲಲ್ಲಿ ಕೈತೊಳೆಯುತ್ತಿತ್ತು. ತಂಗಾಳಿಯ ಅಲೆಗಳಲಿ ಆನಂದಿಸುವ ಬದಲು...

ಎಲೆ ಸಾವೇ ನೀನೇಕೆ ಜೀವಂತ?

ಬಿದ್ದ ಮರಗಳ ಬುಡಕ್ಕೆ ಹತ್ತಿದ ಗೆದ್ದಲು ನಿಗಿ ನಿಗಿ ಕೆಂಡಕ್ಕೆ ಕಣ್ಣೀರು ಬಿದ್ದು ಬರಿ ಇದ್ದಿಲು ದಾರಿ ಬದಿಯಲ್ಲಿ ದುಗುಡ ತುಂಬಿದ ಗಿಡ ಮೇಲೆ ನೋಡಿದರೆ ನಡುಗುತ್ತಿರುವ ಮೋಡ. ಬಿದ್ದ ಮನೆಯ ಜಂತೆಗಳಲ್ಲಿ ಕಂತೆಕಂತೆ...

ಒಂಟಿ ಗಿಡ

ಮರಳುಗಾಡಿನ ನಡುವ ಒಂಟಿ ಗಿಡ ಹೂಬಿಡುವ ಬಾಯಾರಿಕೆ ಅದಕೆ ನೀರು ತರುತ್ತೇವೆಂದು ಮುತ್ತಿಟ್ಟು ಹೋದವರು ಬರಲಿಲ್ಲ ತಿರುಗಿ ಸಾವಿಲ್ಲದ ಬುಡಕೆ. ಮುಂಗುರುಳಿಗೆ ಮುದ ಕೊಟ್ಟು ಹೆಂಗರುಳ ಗೆದ್ದರು, ಮನಸಿಗೆ ಮತ್ತೇರಿಸಿ ಮೈಮೇಲೆ ಬಿದ್ದರು. ಗಿಡವ...

ಭೂಕಂಪದ ಬದುಕು

ಬದುಕುವುದು ಭೀಕರವೆಂದರೆ ನಿಜವೆನ್ನೋಣ; ಆದರೆ ಸಾವೂ ಭೀಕರವಾಗಬೇಕೆ? ಕರೆದುಕೊಂಡಂತೆ ಸೀತೆಯನ್ನು ಭೂಮಿ ಅಮ್ಮನಾಗಬಾರದೇಕೆ? ಸಾಯಿಸುವುದಕ್ಕೂ ಸಿಟ್ಟಾಗಿ ಆಕೆ ಕೆಂಡಮಂಡಲವಾಗಬೇಕೆ? ಸಿಟ್ಟೆಂದರೆ ಎಂಥ ಸಿಟ್ಟು! ಹಾವಂತೆ ಹರಿದಾಡಿದ ಗುಟ್ಟು ಸಾವಿನ ಎಡೆ ಕೇಳುತ್ತ ಹೆಡೆಯತ್ತಿ ಬುಸ್ಸೆಂದು...