ವಿಜಯಹಾದಿಯ ಸುತ್ತಲು ಎತ್ತಲು,
ಮುಚ್ಚಿತು ಮುಬ್ಬು ಹೇರಳದಿ;
ದೂರದ ಶಿಖರದಿ ಮಿನುಗಿತು ವಿದ್ಯುತ್,
ಭೀಕರ ದಿನಗಳಲಿ.
ಬಂಟನ ಭರವಸೆ ಸಾಗಿತು ಹಾರಿ,
ಧರೆಯಲಿ ಮೆರೆಯುತ ನೆಟ್ಟನೆ ಸಾರಿ;
ಕೊಂಬುತುತ್ತೂರಿ ತುಂಬಿತು ನೆರವಿ,
ಸಮರವ ಇಮ್ಮಡಿಸಿ.
ಸ್ವಚ್ಛ ಸ್ವತಂತ್ರದ ಸಫಲದ ವಿಜಯ,
ಮೊಳಗಿತು, ಮೊಳಗಿತು ಮೋದದಲಿ;
ಶೌರಿಯ ಕೋರಿಕೆ ಚಲಿಸಿತು ಪ್ರಸರಿ,
ಯೋಜನ ಯೋಜನದಾಚೆಯಲಿ.
ವೈಭವ ಉದಯವು ಮಿನುಗಿತು ತೂರಿ,
ನವ ನವ ಶಕ್ತಿಯಲಿ.
*****


















