Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ, ಸೆಪ್ಟೆಂಬರ ೨೯, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ, ಸೆಪ್ಟೆಂಬರ ೨೯, ೧೯೪೨

ಪ್ರೀತಿಯ ಕಿಟಿ.

ಹೀಗೆ ಅಜ್ಞಾತವಾಗಿ ಬದುಕುತ್ತಿರುವ ಜನರು ಕೆಲವೊಮ್ಮೆ ವಿಲಕ್ಷಣವಾದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಸುಮ್ಮನೆ ಯೋಚಿಸು, ಸ್ನಾನಕ್ಕೇ ಅವಕಾಶ ಇಲ್ಲದ ಕಡೆಯಲ್ಲಿ ನಾವು ಸ್ನಾನದ ಟಬ್ಬುಗಳನ್ನು ಬಳಸುತ್ತೇವೆ. ಯಾಕೆಂದರೆ ಆಫೀಸಿನಲ್ಲಿ[ ಕೆಳ ಅಂತಸ್ತಿನ ಪೂರ್ಣ ಭಾಗ] ಬಿಸಿನೀರು ಇದೆ. ನಾವು ಏಳುಜನವೂ ಅದರ ಸದುಪಯೋಗ ಮಾಡಿಕೊಳ್ಳುತ್ತೇವೆ.

ಯಾಕೆಂದು ಕೇಳಿದರೆ ನಾವೆಲ್ಲ ಪರಸ್ಪರ ಭಿನ್ನ. ಕೆಲವರು ಇತರರಿಗಿಂತ ತುಂಬಾ ಸೌಜನ್ಯವಂತರು. ಕುಟುಂಬದ ಪ್ರತಿಯೊಬ್ಬರೂ ತಮ್ಮ ಸ್ನಾನದ ಕ್ರಿಯೆಯನ್ನು ಕೈಗೊಳ್ಳಲು ತಮ್ಮದೇ ಆದ ಸ್ಥಳಗಳನ್ನು ಹುಡುಕಿಕೊಂಡಿದ್ದಾರೆ. ಪೀಟರ್ ಗಾಜಿನ ಬಾಗಿಲು ಹೊಂದಿದ್ದರೂ ಅಡುಗೆ ಕೋಣೆಯನ್ನೇ ಬಳಸುತ್ತಾನೆ. ಸ್ನಾನಕ್ಕೆ ಹೊರಡುವ ಮುನ್ನ ನಮಗೆಲ್ಲಾ ಒಂದರ್ಧ ಗಂಟೆ ಅಡುಗೆ ಕೋಣೆಯ ಹತ್ತಿರ ಸುಳಿಯಬಾರದೆಂದು ಹೇಳುತ್ತಾನೆ. ಆ ಸ್ಥಳ ಬೇಕಾದಷ್ಟಾಯ್ತು ಎಂಬುದು ಅವನ ಅಭಿಪ್ರಾಯ. ವ್ಯಾನ್ಡ್ಯಾನ್ ನೇರವಾಗಿ ಮೇಲ್ಮಹಡಿಗೆ ಹೋಗುತ್ತಾರೆ. ತನ್ನ ಕೋಣೆಯ ಏಕಾಂತದ ಖುಷಿಯೊಂದಿಗೆ ಅವರಿಗೆ ಬಿಸಿನೀರನ್ನು ಕೊಂಡ್ಯೊಯ್ಯುವ ಚಿಂತೆಯಿಲ್ಲ. ಶ್ರೀಮತಿ ವ್ಯಾನ್ಡ್ಯಾನ್ ಬೇಕಾಬಿಟ್ಟಿ ಎಲ್ಲ ಕಡೆಯಲ್ಲಿ ಸ್ನಾನಕ್ಕಿಳಿಯಲ್ಲ. ತನಗೆ ಬೆಸ್ಟ್ ಎನ್ನಿಸುವ ಸ್ಥಳವನ್ನು ಹುಡುಕುತ್ತಿರುತ್ತಾರೆ. ಡ್ಯಾಡಿ ತಮ್ಮ ಪ್ರೈವೇಟ್ ಆಫೀಸಿನಲ್ಲಿ, ಮಮ್ಮಿ ಅಡುಗೆ ಕೋಣೆಯ ಫೈರ್ ಗಾರ್ಡನ ಹಿಂದುಗಡೆಯಲ್ಲಿ ಸ್ನಾನ ಮಾಡುತ್ತಾರೆ. ನಾನು ಮತ್ತು ಮಾರ್‍ಗೊಟ್ ನಮ್ಮ ಮೈ‌ಉಜ್ಜಿಕೊಳ್ಳಲು ಫ್ರಂಟ್ ಆಫೀಸನ್ನು ಆಯ್ದುಕೊಂಡಿದ್ದೇವೆ. ಶನಿವಾರದ ಅಪರಾಹ್ನದ ನಂತರ ಪರದೆ ಇಳಿಬಿಡುತ್ತ, ನಾವು ಅರೆಗತ್ತಲಲ್ಲಿ ಸ್ನಾನಕ್ಕಿಳಿಯುತ್ತೇವೆ.

ಆದರೂ ನಾನು ಈ ಸ್ಥಳವನ್ನು ತುಂಬಾ ದಿನಗಳ ಮಟ್ಟಿಗೆ ಇಷ್ಟ ಪಡುವುದಿಲ್ಲ. ಕಳೆದ ವಾರದಿಂದ ನಾನು ಸ್ವಲ್ಪ ನೆಮ್ಮದಿದಾಯಕವೆನ್ನಿಸುವ ಕೋಣೆಗಳನ್ನು ಹುಡುಕುತ್ತಿದ್ದೇನೆ. ಪೀಟರ್ ಕೊಟ್ಟ ಉಪಾಯವೆಂದರೆ W.Cನ ದೊಡ್ಡ ಆಫೀಸಿನ ಕೋಣೆಯನ್ನು ಸೂಚಿಸಿದ. ಅಲ್ಲಿ ನಾನು ಪ್ರಖರ ಬೆಳಕಿನಲ್ಲಿ, ಕೆಳಗೆ ಕೂತು, ಬಾಗಿಲನ್ನು ಹಾಕಿಕೊಂಡು, ಕೀಟಲೆ ಕಣ್ಣುಗಳಿಂದ ತಪ್ಪಿಸಿಕೊಂಡು ಚೆನ್ನಾಗಿ ನೀರನ್ನು ಮೈ ಮೇಲೆ ಸುರವಿಕೊಂಡು ಸ್ನಾನ ಮಾಡಬಹುದು.

ರವಿವಾರ ಮೊದಲ ಬಾರಿ ನಾನು ನನ್ನ ಸುಂದರವಾದ ಬಾತರೂಮಿನಲ್ಲಿ ಸ್ನಾನಕ್ಕಿಳಿದೆ. ಇದು ಹುಚ್ಚು ಎಂದೆನ್ನಿಸಿದರೂ ನನಗೆ ಒಳ್ಳೆಯ ಸ್ಥಳವೆನ್ನಿಸಿತು.

ಕಳೆದ ವಾರ ಕೆಳ ಅಂತಸ್ತಿನಲ್ಲಿ ಕಟ್ಟಿಕೊಂಡ ಚರಂಡಿ ಮತ್ತು W.C ಆಫೀಸಿನಿಂದ ಪ್ಯಾಸೇಜವರೆಗೂ ನೀರಿನ ಪೈಪುಗಳ ಜೋಡಿಸುವ ಬದಲಿಸುವ ಕೆಲಸದಲ್ಲಿ ಪ್ಲಂಬರ್ ಬ್ಯೂಸಿಯಾಗಿದ್ದ. ಕಾರಣ ಚಳಿಗಾಲದಲ್ಲಿ ಅಂಟಿಕೊಳ್ಳುವ ಪೈಪುಗಳನ್ನು ಮೊದಲೇ ಬದಲಾಯಿಸಿಕೊಳ್ಳುವುದು ಮುಂಜಾಗ್ರತೆಯೂ ಆಗಿತ್ತು. ಒಂದೊಮ್ಮೆ ನಾವು ಅತಿಯಾದ ಚಳಿಗಾಲವನ್ನು ಎದುರಿಸಬೇಕಾಗಬಹುದು ಎಂಬ ಕಾರಣಕ್ಕೆ. ಪ್ಲಂಬರ ಬಂದಿರುವುದು ನಮಗೆ ಖುಷಿಯ ವಿಚಾರವಾಗಿರಲಿಲ್ಲ. ಇಡೀ ದಿನ ನೀರು ಸಿಗದ ಕಾರಣವಷ್ಟೇ ಅಲ್ಲದೇ ನಮಗೆ W.C ಹೋಗಲು ಸಾಧ್ಯವಿರಲಿಲ್ಲ. ಈ ಸಂಕಟದಿಂದ ಹೊರಬರಲು ನಾವೇನು ಮಾಡಿದೆವೆಂಬುದನ್ನು ನಿನಗೆ ಹೇಳಿದರೆ ಅಸಭ್ಯವೆನಿಸಬಹುದು. ಹೀಗಿದ್ದೂ ಈ ವಿಚಾರಗಳ ಹೇಳಲಾರೆ ಎಂಬ ಬಿನ್ನಾಣಗಿತ್ತಿಯೂ ನಾನಲ್ಲ.

ನಾವಿಲ್ಲಿಗೆ ಬಂದ ದಿನದಿಂದಲೂ ನಾನು ಮತ್ತು ಡ್ಯಾಡಿ ನಮಗಾಗಿ ಪಾಯಿಖಾನೆಯ ಬೋಗುಣಿಯೊಂದನ್ನು ಸಿದ್ಧ ಇಟ್ಟಿದ್ದೆವು. ಒಳ್ಳೆಯ ಚೆನ್ನಾಗಿರುವ ತೊಟ್ಟಿ ಯಾವುದೂ ಇಲ್ಲದ ಕಾರಣ ಈ ಗ್ಲಾಸ್ ಜಾರನ್ನು ಬಳಸಿದೆವು. ಪ್ಲಂಬರ್ ಬಂದ ದಿನಗಳಲ್ಲಿ ಆತನಿಗೆ ನಮ್ಮ ಇರುವು ತಿಳಿಯದಂತೆ ನೈಸರ್ಗಿಕ ತ್ಯಾಜ್ಯಗಳನ್ನು ದಿನದುದ್ದಕ್ಕೂ ಈ ಜಾರಗಳಲ್ಲಿ ತುಂಬಿ ಸಿಟ್ಟಿಂಗ್ ರೂಮನಲ್ಲಿಡಲಾಗಿತ್ತು. ಒಂದೀಡಿ ದಿನ ಮಾತಿಲ್ಲದೇ ಕೂತಲ್ಲಿಯೇ ಕುಳಿತು ಕೊಳ್ಳುವ ಸಂಗತಿಯಷ್ಟು ಇದು ಕೆಟ್ಟದ್ದೆಂದು ನಾನು ಯೋಚಿಸುವುದಿಲ್ಲ. ಮಾತಾಡದೇ ಇರುವುದು ನಿಜಕ್ಕೂ ’ಮಿಸ್ ಕ್ವೇಕ್ ಕ್ವೇಕ್’ಗೆ ಎಂತಹ ಪರೀಕ್ಷೆ ಎಂಬುದನ್ನು ನೀನು ಊಹಿಸಲಾರೆ. ಉಳಿದ ದಿನಗಳಲ್ಲಿ ನಾನು ಪಿಸುಮಾತಲ್ಲಿ ಮಾತಾಡಬೇಕಾದ ಕಷ್ಟ ಸಹಿಸಿದರೆ, ಈಗ ಮಾತನಾಡಲಾಗದ, ಎಲ್ಲಿಯೂ ಹೋಗಲಾಗದ ಈ ಸ್ಥಿತಿಯು ಅದರ ಹತ್ತು ಪಟ್ಟು ಹೆಚ್ಚು ಕೆಟ್ಟದ್ದು. ಮೂರು ದಿನಗಳು ನಿರಂತರ ಕೂತು ಕೂತು ನನ್ನ ಕುಂಡೆ ಜಡ್ಡುಗಟ್ಟಿದಂತೆ ಬಿರುಸಾಗಿತ್ತು ನೋವಿನಿಂದ ಕೂಡಿತ್ತು. ಮತ್ತೆ ಸರಿಯಾಗಲು ಮಲಗುವ ಹೊತ್ತಿನ ಕೆಲವು ವ್ಯಾಯಾಮಗಳು ಸಹಾಯವಾದವು.

ನಿನ್ನ
ಆನ್

Tagged:

Leave a Reply

Your email address will not be published. Required fields are marked *

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...