Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಮಂಗಳವಾರ, ಅಕ್ಟೋಬರ್ ೨೦, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಮಂಗಳವಾರ, ಅಕ್ಟೋಬರ್ ೨೦, ೧೯೪೨

ಪ್ರಿಯ ಕಿಟಿ,

ಈ ಆಘಾತ ಹೊಂದಿ ಎರಡು ಗಂಟೆಗಳಾಗುತ್ತ ಬಂದರೂ ನನ್ನ ಕೈಗಳಿನ್ನು ನಡುಗುತ್ತಲೇ ಇವೆ. ಮನೆಯಲ್ಲಿ ಐದು ಅಗ್ನಿ ಶಾಮಕ ಉಪಕರಣಗಳಿದ್ದವು. ಅವುಗಳನ್ನು ಭರ್ತಿಮಾಡಲು ಯಾರೋ ಬರುತ್ತಿದ್ದಾರೆಂದು ನಮಗೆ ಗೊತ್ತಿತ್ತು. ಆದರೆ ಬಡಗಿಗೆ ನೀನು ಏನೆಂದು ಕರೆಯುವಿ ಗೊತ್ತಿಲ್ಲ, ಅವರು ಬರುತ್ತಿದ್ದಾರೆಂದು ನಮಗೆ ಯಾರೂ ಎಚ್ಚರಿಕೆ ಕೊಟ್ಟಿರಲಿಲ್ಲ.

ಆ ಕಾರಣವೇ ನಮ್ಮ ಕಬೋರ್ಡನ ಹಿಂದುಗಡೆ ಹೊರಗಡೆಯಿಂದ ಗುದ್ದಲಿಯಿಂದ ಹೊಡೆಯುತ್ತಿರುವ ಸದ್ದು ನನಗೆ ಕೇಳುವವರೆಗೂ ಗದ್ದಲ ಮಾಡದೇ ಸುಮ್ಮನಿರುವ ಯಾವ ಪ್ರಯತ್ನವನ್ನೂ ನಾವು ಮಾಡಿರಲಿಲ್ಲ. ಒಂದು ಕ್ಷಣ ನಾನು ಬಡಗಿ ಇರಬಹುದೆಂದು ಯೋಚಿಸಿದೆ.ಮತ್ತು ಎಲಿ ವೊಸನ್‌ಳನ್ನು ಎಚ್ಚರಿಸಿದೆ. ಯಾಕೆಂದರೆ ಆಕೆ ಹೊರಗೆ ಹೋಗಬಾರದೆಂದು. ಆ ಸಮಯ ಆಕೆ ನಮ್ಮೊಂದಿಗೆ ಊಟಮಾಡುತ್ತಿದ್ದಳು. ಡ್ಯಾಡಿ ಮತ್ತು ನಾನು ಆ ಮನುಷ್ಯ ಹೊರಟು ಹೋದನೇ ಎಂಬುದ ತಿಳಿಯಲು ಬಾಗಿಲತ್ತ ನಿಧಾನ ಜರುಗಿದೆವು. ಸುಮಾರು ಕಾಲು ಗಂಟೆ ಕೆಲಸ ಮಾಡಿದ ಮೇಲೆ ಆ ವ್ಯಕ್ತಿ ಗುದ್ದಲಿ ಕೆಳಗಿಟ್ಟು ನಮ್ಮ ಕಬೋರ್ಡಿನ ಮೇಲಿನ ಸಲಕರಣೆಗಳನ್ನು ಕೆಳಗೆ ಹಾಕಿದ [ನಮಗೆ ಹಾಗೆನ್ನಿಸಿತು] ಮತ್ತು ಬಾಗಿಲನ್ನು ಜೋರಾಗಿ ದಬ್ಬಿದ. ಹೆದರಿಕೆಯಿಂದ ನಾವು ಬಿಳಿಚಿಕೊಂಡೆವು. ಬಹುಶಃ ಆತ ಏನನ್ನೋ ತಿಳಿದುಕೊಂಡಿರಬೇಕು. ಹಾಗಾಗಿ ನಮ್ಮ ಗುಪ್ತಗವಿಯನ್ನು ಶೋಧಿಸಲು ಬಯಸಿರಬೇಕು. ಹಾಗೇ ಕಾಣುತ್ತಿದೆ. ಬಾಗಿಲು ಬಡಿಯುವುದು, ಎಳೆಯುವುದು, ತಳ್ಳುವುದು ನಡದೇ ಇತ್ತು. ಈ ಮನುಷ್ಯನೇನಾದರೂ ನಮ್ಮ ಸುಂದರವಾದ ಅಡಗುತಾಣವನ್ನು ಗುರುತಿಸಿಬಿಟ್ಟರೇ ಎಂಬ ವಿಚಾರಕ್ಕೆ ನಾನು ಸುಸ್ತಾಗಿದ್ದೆ. ಇದು ನಮ್ಮ ಕೊನೆ ಗಳಿಗೆ ಎಂದುಕೊಂಡೆ. ಆಗ ನನಗೆ ಕೂಫಸ್ ಮಾತು ಕೇಳಿತು, ಬಾಗಿಲು ತೆಗೆಯಿರಿ, ಇದು ನಾನು ಕೂಡಲೇ ಬಾಗಿಲು ತೆಗೆದೆವು. ಗೊತ್ತಿದ್ದವರು ಮಾತ್ರ ತೆಗೆಯುತ್ತಿದ್ದ ಕಬೋರ್ಡನ್ನು ಹಿಡಿದುಕೊಂಡಿದ್ದ ಹುಕ್ ತೀರಾ ಸಡಿಲಗೊಂಡಿತ್ತು. ಹಾಗಾಗೇ ಕಾರ್ಪೆಂಟರ್ ಬರುವ ಸಂಗತಿಯನ್ನು ನಮಗೆ ಯಾರೊಬ್ಬರೂ ಹೇಳಿರಲಿಲ್ಲ. ಆ ಮನುಷ್ಯ ಕೆಳಗಡೆ ಹೋಗಿದ್ದ. ಕೂಫಸ್ ಎಲಿ ವೊಸನ್‌ಳನ್ನು ಹುಡುಕತೊಡಗಿದರು. ಆದರೆ ಆ ಕಬೋರ್ಡನ್ನು ತೆಗೆಯಲಾಗಲಿಲ್ಲ. ನನಗೆ ದೊಡ್ಡ ಸಮಾಧಾನವಾಗಿತ್ತು. ಯಾಕೆ ಹೇಳಲೇ? ನನ್ನ ಕಲ್ಪನೆಯಲ್ಲಿ ಒಳಬರಲು ಯತ್ನಿಸುತ್ತಿದ್ದ ಆ ಮನುಷ್ಯ ಬೆಳೆಯುತ್ತ ಬೆಳೆಯುತ್ತ ಬೃಹದಾಕಾರವಾಗಿ ದೈತ್ಯನಾಗಿ ಬೆಳೆದಂತೆ ಆತನೇ ಜಗತ್ತಿನ ಅತಿದೊಡ್ ಫ್ಯಾಸಿಸ್ಟ ಆಗಿ ಬೆಳೆದಂತೆ ಕಲ್ಪಿಸುತ್ತಿದ್ದೆ.

ಅದಿರಲಿ! ಪುಣ್ಯಕ್ಕೆ ಈ ಸಲ ಎಲ್ಲವೂ ಸರಿಯಾಗಿಯೇ ಆಯಿತು. ಅದೇ ಸೋಮವಾರ ನಾವೆಲ್ಲ ಬಹಳ ಮಜಾ ಮಾಡಿದೆವು. ಮೇಪ್ ಮತ್ತು ಹೆಂಕ್ ಅಂದು ನಮ್ಮಲ್ಲಿಯೇ ಉಳಿದರು. ಮಾರ್‍ಗೊಟ್ ಮತ್ತು ನಾನು ಮಲಗಲು ಡ್ಯಾಡಿ ಮಮ್ಮಿಯ ಕೋಣೆಗೆ ಹೋದೆವು . ಯಾಕೆಂದರೆ ನಮ್ಮ ಕೋಣೆಯನ್ನು ವ್ಯಾನ್ ಸ್ಯಾನ್ಟಸ್ ಬಳಸುವವರಿದ್ದರು. ಆ ದಿನದ ಊಟ ಅದ್ಭುತವಾಗಿತ್ತು. ಆದರೆ ಮಧ್ಯೆ ಗೊಂದಲ ಉಂಟಾಯಿತು. ಡ್ಯಾಡಿಯ ಲ್ಯಾಂಪ್ ಫ್ಯೂಸ್ ಒಡೆದು ಹೋಯಿತು. ಎಲ್ಲ ಕಡೆ ಕತ್ತಲಾವರಿಸಿತು. ಏನು ಮಾಡುವುದೆಂದು ತಿಳಿಯಲಿಲ್ಲ. ಮನೆಯಲ್ಲಿ ಸ್ವಲ್ಪ ಫ್ಯೂಸ್ ವೈರಗಳು ಇದ್ದರೂ ಅವನ್ನೆಲ್ಲಾ ಸ್ಟೋರರೂಮಿನ ತೀರಾ ಒಳಭಾಗದಲ್ಲಿ ಇಡಲಾಗಿತ್ತು. ಅವುಗಳನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೂ ಗಂಡಸರು ಧೈರ್ಯಮಾಡಿ ಹುಡುಕಿ ತಂದರು. ಹತ್ತು ನಿಮಿಷಗಳ ನಂತರ ಪುನಃ ಬೆಳಕು ಉರಿಯಿತು.

ನಾನು ಮುಂಜಾನೆ ಬೇಗನೇ ಎದ್ದೆ. ಹೆಂಕ್ ಎಂಟೂವರೆಗೆಲ್ಲ ಮನೆ ಬಿಡಬೇಕಿತ್ತು. ಬ್ರೆಕ್‌ಫಾಸ್ಟನ್ನು ಹೊಟ್ಟೆ ತುಂಬಾ ತಿಂದು ಮೇಪ್ ಕೂಡಾ ಕೆಳಗಡೆ ಹೊರಟುಹೋದಳು. ಆಗಲೇ ಮಳೆ ಸುರಿಯುತ್ತಿತ್ತು. ಹಾಗಾಗಿ ಆಫೀಸಿಗೆ ಆಕೆ ಮಳೆಯಲ್ಲಿ ಸೈಕಲ್ಲು ತುಳಿದು ಹೋಗಬೇಕಾಗಿರಲಿಲ್ಲ. ಇದರಿಂದ ಆಕೆಗೆ ಸಂತಸವಾಗಿತ್ತು. ಮುಂದಿನ ವಾರ ಒಂದು ರಾತ್ರಿ ಉಳಿಯಲು ಎಲಿ ವೊಸನ್ ಬರುತ್ತಿದ್ದಾಳೆ.

ನಿನ್ನ,
ಆನ್

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...