ಎರಡು ಗುಡಿ ಗೋಪುರಗಳು ಒಂದರ ಹಿಂದೆ ಒಂದು ಇತ್ತು. ಒಂದರಲ್ಲಿ ಬಿಳಿ ಪಾರಿವಾಳಗಳು, ಇನ್ನೊಂದು ಗೋಪುರದಲ್ಲಿ ಕರಿ ಬಣ್ಣದ ಪಾರಿವಾಳಗಳು ವಾಸವಾಗಿದ್ದವು. ಎರಡು ಗುಂಪಿನ ಪಾರಿವಾಳಗಳು ಆಗಸದಲ್ಲಿ ಹಾರಾಡುವಾಗ ತಮ್ಮ ದೇವಾಲಯದ, ದೈವದ ಹೆಮ್ಮೆ ಸಾರುತ್ತಿದ್ದವು.
“ನಮ್ಮ ದೇವರ ಬಣ್ಣ ಬಿಳಿ” ಎಂದು ಬಿಳಿ ಪಾರಿವಾಳಗಳು ಹೇಳಿದವು.
ಕರಿ ಪಾರಿವಾಳಗಳ ಗುಂಪು ಹೇಳಿತು “ನಮ್ಮ ದೇವರ ಬಣ್ಣ ಕಪ್ಪು” ಎಂದು ಒಂದಕ್ಕೊಂದು ರೆಕ್ಕೆ ಬಡಿದುಕೊಂಡು ಪಟ ಪಟ ವಾದ ಮಾಡುತಿದ್ದವು.
ಮೇಲೆ ಆಗಸದಲ್ಲಿ ಹಾರಾಡುತ್ತಿದ್ದ ದೊಡ್ಡ ಹಂಸ ಒಂದು, ಪಾರಿವಾಳಗಳೆ! ಜಗಳ ನಿಲ್ಲಿಸಿ, ದೇವರು ಬಿಳಿಯೂ ಅಲ್ಲ, ಕಪ್ಪು ಅಲ್ಲ ಅವನು ಆಗಸದಂತೆ ನೀಲಿ, ಭೂಮಿಯಂತೆ ಹಸಿರು” ಎಂದಿತು.
ಪಾರಿವಾಳಗಳು ಗುಟುರು ಹಾಕುತ್ತ ಹಂಸದ ಹೇಳಿಕೆಗೆ ತಲೆ ತೂಗಿದವು.
*****