ಪಕ್ಷಿ ಮಂಚವೆ ತಾಯ ಮಂಚವು
ವೃಕ್ಷ ತೊಟ್ಟಿಲು ತೂಗಲಿ
ಕಣ್ಣು ಕಮಲಾ ಹಾಲು ಅಮೃತ
ಎದೆಯ ಗಾನವ ಉಣಿಸಲಿ
ದೇಹ ದೇಗುಲ ಮನವೆ ಲಿಂಗವು
ಆತ್ಮ ನಂದಾದೀಪವು
ಪ್ರೀತಿಯೊಂದೆ ಮಧುರ ಪರಿಮಳ
ಹೊನ್ನ ಅರಮನೆ ಗೀತೆಯು
ಪಕ್ಷಿ ಇಂಚರ ಹೂವು ತರತರ
ಹಸಿರು ಹೂವಿನ ನೂಪುರಾ
ಮಂದಗಾಳಿಯ ಹಿಗ್ಗು ಹೊಸತರ
ನೃತ್ಯ ಮಂದಿರ ಸಡಗರಾ
ದೇಹಮಾಯಾ ಮೋಹ ದಾಹದ
ವಿಷವು ಸಕ್ಕರೆಯಾಗಲಿ
ಅಲ್ಲಿ ಮಾವಿನ ಮರದ ತುದಿಯಲಿ
ಗಿಣಿಯ ರಾಮನ ಕರೆಯಲಿ
*****