ರಾಮಾ ನಿನ್ನೊಂದು ದರುಶನ
ನನಗೆ ತೋರಬಾರದೆ
ನನ್ನ ಸಾವಿರ ಜನುಮಗಳ ಪಾಪ
ತೊಳೆದು ಹೋಗಲಾರದೆ!
ಎಷ್ಟೊತ್ತಿನ ವರೆಗೆ ಹಾಸಿರುವೆ
ಭೀಕ್ಷೆಗೆ ಈ ನನ್ನ ಪದರು
ನಿನ್ನ ಕೃಪೆ ಸಾಗರ ಹರಿಯದೆ
ಖಾಲಿ ಇರುವುದು ನಿನ್ನೆದರು
ಜನ್ಮ ಜನ್ಮಗಳಲ್ಲೂ ನಿನ್ನ ಕಾಣದೆ
ಆಸೆ ಅಮಿಷೆಗಳಲಿ ಬಳಲಿದೆ
ನನ್ನವರು ನನ್ನವರೆಂದಕೊಂಡು
ನನ್ನವರ ಸುಖಕ್ಕೆ ತೊಳಲಿದೆ
ಇನ್ನಾದರೂ ಈ ಜನುಮದಲ್ಲಿ
ಅದು ಆಯುಷ್ಯದ ಸಂಜೆಯಲಿ
ನಿನ್ನ ಕಾಡಿ ಬೇಡಿ ಅಳುತ್ತಿರುವೆ
ತೋರಬಾರದೆ ರೂಪ ಕರುಣೆಯಲಿ
ಬದುಕು ನೀ ನಿಲ್ಲದೆ ಅದು ತಬ್ಬಲಿ
ನಿಮ್ಮ ಕೃಪೆ ಕಟಾಕ್ಷ ಎಂದಿಗಾಗುವುದೇ
ಕಾಯುತ್ತಿರುವೆ ಅನಂತ ಜನ್ಮಗಳಿಂದ
ಮಾಣಿಕ್ಯ ವಿಠಲನಾಗದೆ ಸಾಫಲ್ಯಹುದೆ?
*****