ಲತೆಯಾಗದಿರು
ಹೂವಾಗದಿರು
ವನಿತೆ ಮರವಾಗು
ಹೆಮ್ಮರವಾಗು
ಮೋಡವಾಗದಿರು
ವನಿತೆ, ಗುಡುಗಾಗು
ಸಿಡಿಲಾಗು, ಮಿಂಚಾಗು.
ಹಣತೆಯಾಗದಿರು
ಮೊಂಬತ್ತಿಯಾಗದಿರು
ವನಿತೆ, ಕಿಡಿಯಾಗು
ಜ್ವಾಲಾಮುಖಿಯಾಗು
ಚಾಕುವಾಗದಿರು
ಈಳಿಗೆ ಮಣೆಯಾಗದಿರು
ವನಿತೆ ಕತ್ತಿಯಾಗು
ಗುರಾಣಿಯಾಗು
ಕವಿತೆಯಾಗದಿರು
ಕಥೆ ಕಾದಂಬರಿಯಾಗದಿರು
ವನಿತೆ, ಇತಿಹಾಸವಾಗು
ಚರಿತ್ರಾರ್ಹಳಾಗು.
*****
Related Post
ಸಣ್ಣ ಕತೆ
-
ಅಜ್ಜಿಯ ಪ್ರೇಮ
ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…
-
ರಣಹದ್ದುಗಳು
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
-
ಒಂದು ಹಿಡಿ ಪ್ರೀತಿ
ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…
-
ಅಹಮ್ ಬ್ರಹ್ಮಾಸ್ಮಿ
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…