ಏಳು ಕಂದಾ ಮುದ್ದು ಕಂದಾ

ಏಳು ಕಂದಾ ಮುದ್ದು ಕಂದಾ
ತಂದೆ ಶ್ರೀಗುರು ಕರೆದನು
ಮಕ್ಕಳಾಟವು ಸಾಕು ಮಗುವೆ
ವ್ಯರ್ಥ ಸಾಕು ಎಂದನು

ಕೈಯ ಹಿಡಿದನು ಕರುಣೆ ಮಿಡಿದನು
ಮೇಲು ಮೇಲಕೆ ಕರೆದನು
ಮೇಲು ಮೇಲಿನ ಮೇಲು ಮಠದಾ
ಪ್ರೇಮ ಪಾಠವ ಕೊಟ್ಟನು

ಮಾತು ಜ್ಯೋತಿರ್ಲಿಂಗವಾಗಲಿ
ಮನವು ಆರತಿ ಬೆಳಗಲಿ
ಸೇವೆ ಸುಂದರ ಕಮಲವಾಗಲಿ
ತೇರು ನವಯುಗ ಸೇರಲಿ

ನಿರ್ಮಲಾತ್ಮರೆ ಲೋಕ ಪೂಜ್ಯರೆ
ಶರಣ ಗಾನವು ತುಂಬಲಿ
ಕಾಯ ಕಾಂಚನ ಕಮಲ ಅರಳಲಿ
ವಿಶ್ವ ಜಂಗಮವಾಗಲಿ

ಗುರುವೆ ಲಿಂಗವು ಲಿಂಗ ಜಂಗಮ
ಶರಣ ಸಂಗಮ ಅನುಪಮ
ಭಕ್ತ ಶಕ್ತಿಗೆ ಜ್ಞಾನ ಶಕ್ತಿಯು
ತುಂಬಿ ಬಂದರೆ ನಿರುಪಮ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಾಂತಿಮಂತ್ರ
Next post ಆಧುನಿಕ ಕೃಷಿಗಾರು ಸೂತ್ರಧಾರಿಗಳು?

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…