ಮಾಡದಿದ್ದರೆ ಮುನೇಶ್ವರ
ಹೆಗಲೇರುವನು ಶನೇಶ್ವರ
ಇದು ನಂಬಿಕೆ ಜನರದ್ದು
ವರುಷದ ಒಂದು ಹರುಷದ್ದು /ಪ//
ಜನಗಳು ಸೇರುವರು ಇಲ್ಲಿ
ಬಾಡೂಟದ ಸಂಭ್ರಮದಲ್ಲಿ
ಗಟ್ಟಿಯಾಯಿತು ಸಂಬಂಧ
ಜಾತ್ರೆ ಪಡೆಯಿತು ಈ ಅಂದ
ಮುನೇಶ್ವರನ ಹೆಸರಲ್ಲಿ
ಶನೇಶ್ವರನ ಭೀತಿಯಲಿ!
ಕುರಿಕೋಳಿಗಳು ಬಲಿಯಿಲ್ಲಿ
ಅವರಿಗೆ ದೇವರು ಯಾರಿಲ್ಲಿ?
ಹೋಗಲಿ ದಯೆಯಿರುವುದೆ ಇಲ್ಲಿ?
ಬಿದ್ದಿತು ದಾವೆ ಕೋರ್ಟಿನಲಿ
ದೇವರುಗಳು ಎಸ್ಕೇಪಿಲ್ಲಿ – ತಮ್ಮ
ಸೃಷ್ಟಿಕರ್ತರ ಶಪಿಸುತಲಿ!
*****