
ಮುನಿಯ ಬೇಡ ಪ್ರಕೃತಿ ಮಾತೆ ಗೊತ್ತು ನಾವು ಕಟುಕರು ಇರಲಿ ಕರುಣೆ ಇನ್ನು ಕೊಂಚ ನಾವು ನಿನ್ನ ಕುವರರು ನೀನು ತಾಯಿ ಪೊರೆದೆ ನಮ್ಮ ಇನಿತು ನೋವು ಆಗದಂತೆ ಇದನು ಅರಿಯದೆ ನಾವು ಬೆಳೆದೆವು ಎಲ್ಲ ಕ್ರೌರ್ಯ ನಾಚುವಂತೆ ಇಂಥ ತಪ್ಪಿಗೆ ಒಂದು ಏಟು ನೀನು ಕೊಟ್...
ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು ದಾರ ಏಕೆ ದೂರ ಬೇಕೆ ಮಾತನಾಡುವಾಗ ಬೇಲಿ ಬೇಡ ನೋಟ ಇರಲಿ ಮನಸು ಕೂಡುವಾಗ ಹಂಚಿಕೊಂಡ ರಕ್ತವೊಂದೆ ರಕ್ತ ಹರಿವುದೇಕೆ? ಹಾಲೂಡಿದ ನೆಲವದೊಂದೆ ಇಲ್ಲಿ ಕದನವೇಕೆ?...
ಮಳೆ ಸುರಿಯಲಿ ಹೊಳೆ ಹರಿಯಲಿ ತಿಳಿಯಾಗಲಿ ಮೋಡ ಧಗಧಗಿಸುವ ಧರೆ ತಣಿಯಲಿ ಮನುಜನೆದೆ ಕೂಡ ಗಿಳಿ ಹಾಡಲಿ ತೆನೆ ತೂಗಲಿ ಕಾಡಾಗಲಿ ಹಸಿರು ಬುಸುಗುಟ್ಟುವ ಜಗದೆದೆಯಲಿ ಹೊಮ್ಮಲಿ ಮೆಲ್ಲುಸಿರು ರವಿ ಏಳಲಿ ಗಿರಿ ಕಾಣಲಿ ಮೂಡಲಿ ಮಳೆಬಿಲ್ಲು ಸೆರೆಯೊಳಗಿನ ಬಣ್ಣಗ...
ಮರೆಯದಿರಣ್ಣ ಕನ್ನಡವ; ಜನ್ಮ ಕೊಟ್ಟ ಈ ಕನ್ನಡವ ಮಾತು ಕೊಟ್ಟ ನುಡಿಗನ್ನಡವ ತುತ್ತು ಕೊಟ್ಟ ತಾಯ್ಗನ್ನಡವ || ಹಳಿಯದಿರಣ್ಣ ಕನ್ನಡವ; ತಾಯ್ಮೊಲೆ ಉಣಿಸಿದ ಕನ್ನಡವ ವಿದ್ಯೆಯ ನೀಡಿದ ಕನ್ನಡವ ಸಭ್ಯತೆ ಕಲಿಸಿದ ಕನ್ನಡವ ಅಳಿಸದಿರಣ್ಣ ಕನ್ನಡವ; ಶತಶತಮಾನದ ...
ಮರಳಿ ಬಾರೆ ಪ್ರಕೃತಿ ಮಾತೆ ಮರಳಿ ತೋರೆ ನಿನ್ನನು ನಾವು ಸಿಡಿದು ಹೋಗುವ ಮುನ್ನ ಪಾರು ಮಾಡೆ ನಮ್ಮನು ಹಕ್ಕಿ ಹಾಡು ಕೇಳಬೇಕಿದೆ ಅದಕೆ ಕಿವಿಗಳು ಕಾದಿವೆ ಗುಬ್ಬಿ ಗೂಡು ಕಟ್ಟಬೇಕಿದೆ ಅದಕೆ ಮನಗಳು ತೆರೆದಿವೆ ಗಾಳಿ ಕೊಳಲ ನೂರು ಸ್ವರಕೆ ಅಬ್ಬರದ ಮನ ಜಾ...
ಬೇಲೂರ ಗುಡಿಯಲ್ಲಿ ಕಲೆಯಾದ ಶಿಲೆಯಲ್ಲಿ ದೀನ ದುರ್ಬಲರೊಡಲ ಬಿಸಿಯುಸಿರಿದೆ ಆ ಬಿಸಿಯು ಮೈಸೋಕಿ ತೆರೆದ ಈ ಕಣ್ಮುಂದೆ ಕಪ್ಪು ಇತಿಹಾಸ ಸಂ-ಪುಟ ತೆರೆದಿದೆ ಭವ್ಯತೆಯ ಹಂಪೆಯಲಿ ಬೆವರು ಕಂಬನಿ ರಕ್ತ ಹೊಳೆ ತುಂಗೆಭದ್ರೆಯಾಗಿ ಹರಿದಾಡಿದೆ ಇದರಲ್ಲಿ ಮಿಂದೆದ...
ಬುರ್‍ಖಾ ಬಿಟ್ಟು ಹೊರಗೆ ಬಾರವ್ವ – ಓ ತಂಗಿ ಹೊಸಿಲ ದಾಟಿ ಲೋಕ ನೋಡವ್ವ ತಲೆಯ ಮ್ಯಾಗಿನ ಸೆರಗ ತೆಗಿಯವ್ವ – ಓ ತಂಗಿ ಅದನ್ನೆತ್ತಿ ಸೊಂಟಕೆ ಸಿಕ್ಕಿಸವ್ವ ನೀನು ಬಣ್ಣದ ಗೊಂಬಿ ಅಲ್ಲವ್ವ – ಓ ತಂಗಿ ನಿನ್ನ ಸೂತ್ರ ನನ್ನಲ್ಯಾಕವ್ವ...
ಬಂಡವಾಳವಾಗುತಿದೆ ಕನ್ನಡ ಭಾಷೆ-ನಮ್ಮ ಕನ್ನಡ ಭಾಷೆ ಬಂಡವಾಳವಾಗುತಲಿ ಅಳಿದು ಹೋಗುತ್ತಲಿದೆ ಕನ್ನಡ ಭಾಷೆ-ನನ್ನ ಕನ್ನಡ ಭಾಷೆ || ಓಟಿಗಾಗಿ ಸೀಟಿಗಾಗಿ ಜನರ ಕುಣಿಸೊ ನೋಟಿಗಾಗಿ ಕನ್ನಡವನೆ ನಂಬಿಹರು ಸ್ವಾರ್ಥಭರಿತ ಧೂರ್ತರು ಎತ್ತ ಹೋದರತ್ತ ಇವರು ಜಯ್ ...
ನೋಡಲು ಕ್ರಿಕೇಟು ಮ್ಯಾಚು ಸಹಜವೆ ಉತ್ಸಾಹ ಭಾರತ ಪಾಕ್ ಎಂದರೆ ಯಾತಕೆ ರಣೋತ್ಸಾಹ ನಿನ್ನೆ ನಾವು ಅವರು ಒಂದೆ ತಾಯ ಮಕ್ಕಳು ಇಂದು ಬೇರೆ ದೇಶ ಅದಕೆ ಬೇಕೆ ದ್ವೇಷ ಆಟಕೆ ಬೇಕು ಸ್ನೇಹ ಬೇಕೆ ಮತೀಯ ವೈರ? ಉಳಿಸಿಕೊಂಡರೆ ಕಿಸಿರು ನಿನಗೋ ಕಪ್ಪು ಹೆಸರು! ಸೋ...
ನಾವೆಲ್ಲರೂ ಹಿಂದು ಅವರ ದೃಷ್ಟಿಗೆ ಒಳಗೆ ಅಲ್ಲ ಒಂದು ನಮ್ಮ ದೃಷ್ಟಿಗೆ || ಅವನು ಗುಡಿಯ ಒಳಗೆ ಅವನ ಹೆಸರು ಹಿಂದು ನಾನು ಗುಡಿಯ ಹೊರಗೆ ನನಗೂ ಹೆಸರು ಹಿಂದು ಅವನು ಊರ ಒಳಗೆ ನಾನು ಇರುವೆ ಹೊರಗೆ ಹೇಳಬೇಕು ಸುಳ್ಳು ತಾಯಿ ಒಂದೆ ಎಂದು ಊರಿಗೊಂದೆ ಬಾವಿ...














