ದೀನ ನಾನೆಂದೆನ್ನ
ಕಡೆಗಣಿಸದಿರು ತಂದೆ|
ನಾ ದೀನನೆಂದರೆ ಎನ್ನತಂದೆ
ನೀ ದೀನನೆಂದೆನಿಸಿದಂತೆ|
ಬೇಡ ನನಗೆ ನನ್ನಿಂದ
ನೀ ದೀನನೆಂದೆನಿಸಿಕೊಳ್ಳುವುದು||
ಮೂರು ಲೋಕದ ಒಡೆಯ
ನೀನಾಗಿ, ಅವುಗಳಿಗೆಲ್ಲಾ
ದೊರೆಯು ನೀನಾದರೆ|
ದೊರೆ ಮಗನಲ್ಲವೇ ನಾನು?
ನನ್ನ ದೀನನಾಗಲು
ಬಿಡುವೆಯಾ ನೀನು||
ಬೇಡೆನಗೆ ನಿನ್ನ ಆ ಸ್ವರ್ಗ,
ಅಂದಚೆಂದದ ಅರಮನೆ|
ಆ ನಿನ್ನ ಮೋಹಕ ರಂಬೆ ಉರ್ವಶಿ
ಮೇನಕೆಯರ ಸಹವಾಸ|
ಗಂಧರ್ವಗಾನ, ದೇವಲೋಕ
ನಿನ್ನ ಸಿರಿಯತನವಂತೂ
ಬೇಡವೇ ಬೇಡ|
ನಿನ್ನ ಈ ಭುವಿಯಲಿ
ನಿತ್ಯ ನಿನ್ನ ಸೇವೆಯ
ಭಾಗ್ಯವನಿತ್ತರದುವೇ ಸಾಕು|
ಇಲ್ಲಿ ನರನಾಗಿ ಬಂದುದಕೆ
ಜನ್ಮ ಸಾರ್ಥಕ ಮಾಡಿಕೊಳ್ಳುವುದಕೆ
ಸಾಕು ಇನ್ನೇನು ಬೇಕು||
*****