ಮಾನವ ನಿನ್ನ ಬಾಳು ನಶ್ವರವಾಗಿರಲು
ಏಕೆ ನಿನ್ನಲ್ಲಿ ಸ್ವಾರ್ಥ ಬಂತು
ನೀನು ಜನುಮ ಜನುಮಗಳಲ್ಲೂ ಹೀಗಿರಲು
ಅಂಟಿಕೊಂಡಿತು ಏಕೆ ಕರ್ಮ ತಂತು
ಮಾಯೆ ಮೋಹಗಳು ಭೂತವಾಗಿ ಕಾಡಿ
ನಿನ್ನ ನಿತ್ಯ ಪತನಕ್ಕೆ ಅಟ್ಟಿಸಿರಲು
ಮತ್ತೆ ಮತ್ತೆ ನೀನು ಅರಿಯದೆ ಏಕೆ
ಬೆಂಕಿ ಜ್ವಾಲೆಗಳೇ ತಂಪೆಂದು ಅಪ್ಪಿರಲು
ಯಾವ ಕ್ಷಣವೂ ನಿನ್ನ ಸಾವು ಕಾದಿದೆ
ಆದರೂ ನೀನು ಹರಿಗೆ ಮರೆತೆ
ಇಂದ್ರಿಯ ಸುಖ ಭೋಗಗಳಲಿ ಮಿಂದು
ಮತ್ತೆ ಅನುಭವಿಸಿದೆ ಶಾಂತಿ ಕೊರತೆ
ಮಾಡುವ ಕರ್ಮಗಳು ಮಾಡಿ ದೈವ ನಂಬಿ
ನಿನ್ನ ದುಗುಡುಗಳಿಗೆ ನೀನಾದೆ ಕಾರಣ
ಹರಿಯೇ ನೆನೆಯದೆ ನಿನಗೆ ಸುಖವೆ
ಮಾಣಿಕ್ಯ ವಿಠಲನ ಬೇಕು ಪ್ರೇರಣ
*****