ಹೊಸ ವರುಷ

ಹರಿಯೆ ನನ್ನ ಅರಿಸಿಕೊಂಡು ಬಂತು
ಮತ್ತೊಮ್ಮೆ ಈಗ ಹೊಸ ವರುಷ
ವರುಷಗಳು ಹೀಗೆ ಉರುಳುತ್ತಿವೆ
ನಿನ್ನ ನೆನೆಯದ ಮತ್ತೇನು ಹರುಷ

ಮೋಜ ಕುಣಿತಗಳಿಂದ ಸ್ವಾಗತಿಸಿ
ತನು ಮನವ ಹೀಗೆ ಘಾಸಿಗೊಂಡಿದೆ
ಆಯಸ್ಸು ತನ್ನೊಂದು ಎಳೆ ಕಳೆದುಕೊಂಡು
ಬಡುಕಲಾಗಿ ತಾನು ಘಾಸಿಗೊಂಡಿದೆ

ನನ್ನಲ್ಲಿ ಹುರುಪು ಚೈತನ್ಯದ ಮೂಲವೇ
ನವೀನ ದಿನಗಳಿಗೆ ಆಧಾರವಾಗಿ
ನಿನ್ನ ನೆನೆಯದ ಬರಡಾದ, ಬಂಜರಾದ
ಈ ತನು ನಿತ್ಯ ನನಗೆ ಭಾರವಾಗಿದೆ

ಯಾವಗಳಿಗೆಗಳೇ ಇರಲಿ ವರ್ಷವಿರಲಿ
ಎಲ್ಲವೂ ನನ್ನರಳಿಸುವ ಸುಮವಾಗಿಲಿ
ನಿನ್ನ ಧ್ಯಾನದಲ್ಲಿ ನಾ ನಿತ್ಯ ನಿತ್ಯಕರಗಿ
ಮಾಣಿಕ್ಯ ವಿಠಲನಾಗಿ ಘಮಘಮವಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀ ಮನಸುಮಾಡಿದರೆ
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ಉಪೋದ್ಘಾತ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…