ಹೇಗೆ ತಾನೇ ಸಹಿಸಲಿ?

ಹೇಗೆ ತಾನೇ ಸಹಿಸಲಿ?
ಹೇಗೆ ತಾನೇ ಮರೆಯಲಿ||
ಆ ನಿನ್ನ ದೇಶಪ್ರೇಮದ ಕೆಚ್ಚದೆಯ ಕಿಚ್ಚ
ಸುಟ್ಟ ಆ ಕಡುವೈರಿಯ ಅಟ್ಟಹಾಸವ ||

ಅಂದು ನೀನು ಸೈನ್ಯ ಸೇರಿದ ದಿನ
ಊರೆಲ್ಲಾ ನಿನ್ನ ದೇಶಪ್ರೇಮ ಕಂಡು
ಸಂಭ್ರಮಿಸಿ ಕುಣಿದಾಡಿದಾಕ್ಷಣ|
ನಿನ್ನ ಶಾಲೆಗೆ ಕರೆಸಿ ಗೌರವಿಸಿದಾಕ್ಷಣ
ಯೋಧನುದಿಸಿದ ನಾಡೆಂದು
ಹಾಡಿ ಹರೆಸಿದಾ ದಿನ ||

ಇಂದು ಯುದ್ಧದಿ ಹೋರಾಡಿ
ಹತ್ತಾರು ಆ ವೈರಿಗಳ ಕೊಂದು
ವೀರ ಮರಣವಹೊಂದಿ
ಹುತಾತ್ಮನಾದ ಜೋದ ನಿನ್ನ
ಆಮರ ಜೀವವಂತವಾದ ನಿನ್ನ||

ದೇಶ ಇಂದು ರಾಷ್ಟ್ರ ಧ್ವಜವ
ನಿನ್ನೆದೆಯ ಮೇಲೆ ಸರ್ಮಪಿಸಿ
ನವಿಸುತ್ತಿದೆ ನಿನಗೆ ಅನಂತ ನಮನ|
ನಿನ್ನಿಂದ ಹೆಸರಾಯ್ತು ಊರು, ಶಾಲೆ
ಹೆತ್ತ ತಾಯಿ ತಂದೆಯರ ವಂಶೋತ್ಥಾನ
ನಿನ್ನಿಂದ ಸ್ಫೂರ್ತಿಸೆಲೆಯಾಗಿ
ನಮ್ಮ ಯುವಜನಕ್ಕಾಯ್ತು ಉತ್ತೇಜನ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರೆವಿನ ರೋಗಕ್ಕೆ ಒಂದು ದೇಶಿ ಔಷಧಿ
Next post ಸೂಜಿ-ಗಲ್ಲು

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…