ಬೆಳಿಗ್ಗೆಲ್ಲಾ ರಾಮಾಯಣ ಕೇಳಿ ‘ಸೀತೆಗೂ ರಾವಣನಿಗೂ’, ಏನು ಸಂಬಂಧ ಎಂಬ ಪ್ರಶ್ನೆಗೆ ಮಾವ, ಸೊಸೆ ಎಂಬ ಉತ್ತರ ಕೊಟ್ಟನಂತೆ ಅಂದರೆ ರಾಮಾಯಣದ ಪಾತ್ರಗಳ ಸಂಬಂಧವನ್ನೇ ಮರೆತು ಬಿಡುವ ಪ್ರಸಂಗವು ಬಹಳ ಜನಕ್ಕೆ ಇದೆ. ಇದೀಗ ಇಟ್ಟ ವಸ್ತು ಎಲ್ಲಿ ಅಂತ ಗೂತ್ತಾಗಿಲ್ಲ, ಎಂಬ ಮರವು. ಇಡೀ ರಾತ್ರಿ ಓದಿದ ವಿದ್ಯಾರ್ಥಿ ಬೆಳಗಿನ ಪರೀಕ್ಷೆಗೆ ಮರೆತು ಹೋಗಿ ಉತ್ತರಿಸಲಾರದೆ ಹಿಂದಿರುಗುತ್ತಾನೆ. ಇದಕ್ಕೆ ಕಾರಣ ಮರೆವು. ಇಂಥವರಿಗೆ ಮರೆವಿನ ಮಹಾಪುರುಷರೆಂದು ಕರೆಯುತ್ತಾರೆ. ಈ ಮರೆವು ಪ್ರತಿಯೊಬ್ಬರಲ್ಲೂ ಚರಿತ್ರೆ ಕಾಲದಿಂದಲೂ ಅಂಟು ರೋಗದಂತೆ ಬಂದಿದೆ, ಇದರಿಂದಾಗಿ ಏನೆಲ್ಲ ಅನಾಹುತಗಳಾದ ನಿದರ್ಶಗಳು ನಮ್ಮ ಮುಂದಿವೆ.
ಇಂಥಹ ಮರೆವಿಗೆ ದೇಶಿ ಔಷಧಿಯ ಮದ್ದನ್ನು ಇದೀಗ ಕಂಡು ಹಿಡಿಯಲಾಗಿದೆ. ಕೆಲವು ವರ್ಷಗಳಿಂದ ರಾಜ್ಯದಲ್ಲಿ ಆರಂಭಗೊಂಡ ಪ್ರಕೃತಿ ಆಯುರ್ವೇದಿಕ್ ಮತ್ತು ಆರ್ಗಾನಿಕ್ ಪೌಂಡೇಶನ್ ಸಂಸ್ಥೆಯು ಬಿಳಿಗಿರಿ ರಂಗನ ಬೆಟ್ಟದ ಡಾ|| ಸುದರ್ಶನ ಅವರ ಸಂಸ್ಥೆಯ ಪ್ರಕೃತಿಯಾಧಾರಿತ ಗಿಡಮೂಲಿಕೆ ಉತ್ಪನ್ನಗಳನ್ನು ಜನತೆಗೆ ತಲುಪಿಸುತ್ತಿದೆ. ತಜ್ಞವೈದ್ಯರುಗಳಿಂದ ಆಯುರ್‍ವೇದಿಕ್ ಚಿಕಿತ್ಸಾ ವ್ಯವಸ್ಥೆ ಗಿಡಮೂಲಿಕೆಗಳ ಬಗೆಗೆ ಜಾಗೃತಿ ಮೂಡಿಸಲಾಗುತ್ತದೆ. ಇದೀಗ ಈ ಸಂಸ್ಥೆಯು ಮರೆವಿನ ಸಮಸ್ಯೆಯಿಂದ ಬಳಲುತ್ತಿರವವರಿಗೆ ‘ಮೆಮೊಲಿಕ್ಸ್’ ಎಂಬ ಸಂಪೂರ್ಣ ಗಿಡಮೂಲಿಕಾ ಆಹಾರವನ್ನು ಬಿಡುಗಡೆ ಮಾಡಿದೆ. ಬ್ರಾಹ್ಮಿ, ಶಂಖಪುಷ್ಪಿಯಂತಹ ಉತ್ತಮ ಗಿಡಮೂಲಿಕೆಗಳನ್ನು ಹಲವಾರು ಔಷಧಿಯುಕ್ತ ಮೂಲಿಕೆಗಳ ಮಿಶ್ರಣದಿಂದ ಇದನ್ನು ತಯಾರಿಸಿದೆ. ‘ಮೆಮೊಲಿಕ್ಸ್’ ವಿಶೇಷವಾಗಿ ನೆನಪಿನ ಶಕ್ತಿಯ ಕೊರತೆಯಿಂದ ಬಳಲುತ್ತಿರುವವರಿಗೆ ವರದಾನದಾಗಿದೆ. ಮುಂಬರುವ ಪರೀಕ್ಷೆಗಳನ್ನು ಎದುರಿಸಲು ಮರೆವಿನ ಒತ್ತಡದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಯಾಗಿದೆ. ಯಾವುದೇ ದುಷ್ಪರಿಣಾಮವಿಲ್ಲದ ಈ ಉತ್ಪನ್ನ ಸ್ಮರಣಶಕ್ತಿ ಅಭಿವೃದ್ದಿಯೊಂದಿಗೆ ಅವಶ್ಯಕ ದೇಹ ಪೋಷಕಾಂಶಗಳನ್ನು ಹೂಂದಿದೆ ಮತ್ತು ಇದು ಸ್ವದೇಶಿ ಔಷಧಿಯಾಗಿದೆ.
*****