Home / Article

Browsing Tag: Article

“ಜಗತ್ತಿನಲ್ಲಿ ಯಾವದೂ ಅಸಂಭವವಿಲ್ಲ” ಎಂದು ನೆಪೋಲಿಯನ್ನನು ಹೇಳಿದ್ದರಿಂದಲೂ ೨ನೇ ದುಂಡು ಮೇಜಿನ ಪರಿಷತ್ತಿನಲ್ಲಿ ಮ. ಗಾಂಧಿಯವರು ತಮ್ಮ ಶಬ್ದಕೋಶದಲ್ಲಿ “ಅಪಜಯ” ಎಂಬ ಶಬ್ದವು ಇಲ್ಲೆಂದು ಉದ್ಧಾರ ತೆಗೆದದ್ದರಿಂದಲೂ ಜನರ ಆಕಾಂಕ...

ಶ್ರೀಕೃಷ್ಣನ ಹದಿನಾರು ಸಾವಿರ ಹೆಂಡಂದಿರ ಮತ್ತು ಸಾಲೊಮನನ ಮೂರು ನೂರು ಹೆಂಡಂದಿರ ಕಥೆಗಳನ್ನು ಕೇಳಿದ ನಮಗೆ ವಾರಸಾ ಪಟ್ಟಣದಲ್ಲಿಯ ಲೆವಿನಿಸ್ಕಿ ಎಂಬವನು ೩೬ ಸಾರೆ ಲಗ್ನವಾದದ್ದನ್ನು ಕೇಳಿ ಆಶ್ಚರ್ಯ ವೆನಿಸಲಾರದು. ಆದರೆ ಲೆವಿನಿಸ್ಕಿಯ ಮದುವೆಗಳ ವಿಶ...

ಸರ್ ಎಡ್ವರ್ಡ್ ಬೆಕ್ ಎಂಬವನು ಹಿಂದುಸ್ತಾನದಲ್ಲಿ ಲಂಡನ್ ಟಾಯಮ್ಸ್ ದ ಪ್ರತಿನಿಧಿಯಾಗಿದ್ದನು. ಆಗಿನ ವ್ಹಾಯಿಸ್‌ರಾಯನಾದ ಲಾರ್ಡ್ ಹಾರ್ಡಿಂಜ್ ನ ಮೇಲೆ ಬಾಂಬಿನ ಅತ್ಯಾಚಾರವಾದಾಗ ಇವನು ದಿಲ್ಲಿಯಲ್ಲಿ ಇದ್ದನು. ಆ ದಿವಸ ದಿಲ್ಲಿಯಲ್ಲಿ ದರ್ಬಾರವಿತ್ತು....

ಹಿಂದುಸ್ತಾನದಲ್ಲಿ ಹುಟ್ಟುವ ಕಬ್ಬಿನಲ್ಲಿ ೧೨೦ ಲಕ್ಷ ಟನ್ನು ಕಬ್ಬು ತಿನ್ನುವದರಲ್ಲಿ ಮತ್ತು ಕುಡಿಯಲಿಕ್ಕೆ ಹಾಲು ತೆಗೆಯುವದರಲ್ಲಿ ಉಪಯೋಗಿಸಲ್ಪಡುತ್ತದೆ. ೧೫ ಲಕ್ಷ ಟನ್ನು ಕಬ್ಬಿನಿಂದ ಸಕ್ಕರೆಯು ತಯಾರಾಗುತ್ತದೆ. ೪೪೦ ಲಕ್ಷ ಟನ್ನು ಕಬ್ಬಿನಿಂದ ಬೆ...

ಕಳವು ಒಂದು ಕಲೆಯು, ಕಂಡಕಂಡವರಿಗೆ ಕದಿಯುವದು ಸಾಧಿಸುವದಿಲ್ಲ. ಕೆಲವರು ಹೊಟ್ಟೆಬಟ್ಟೆಗಾಗಿ ಕದಿಯುವರು. ಕೆಲವರು ಕದಿಯುವ ಚಟದ ಸಲುವಾಗಿ ಕದಿಯುವರು. ಕೆಲವರು ವಿನೋದಕ್ಕಾಗಿ ಕದಿಯುವರು. ಬ್ರಿಟಿಶ್ ಕೋಲಂಬಿಯಾದಲ್ಲಿ ಕೆಲವು ಕಳ್ಳರು ಸಮಯ ಸಾಧಿಸಿ ಜೇಲ...

ಪ್ರೌಢ ರಸಿಕ ಜನರುಗಳಿರಾ, ಪ್ರಾಥಮಿಕ ಪಠ್ಯ ಪುಸ್ತಕದಲ್ಲಿ ಎಡಗೈಯ ಬಿನ್ನಹಪತ್ರವನ್ನು ನೀವು ಓದಿರುವಿರಷ್ಟೇ. ನಾನು (ಬಲಗೈ) ಆಲಸಿಯಾಗಿದ್ದೇನೆಂದೂ ಎಡಗೈಯ ಸಹಾಯವಿಲ್ಲದೆ ಯಾವ ಕೆಲಸವೂ ನನ್ನಿಂದ ಆಗುವದಿಲ್ಲೆಂದೂ ನಮ್ಮ ಹಿರಿಯರು ಪಕ್ಷಪಾತದಿಂದ ನನಗೆ ...

ಊಟಕ್ಕೆ ಕುಳಿತಾಗ ಮಾತಾಡಬೇಕೋ ಮಾತಾಡಬಾರದೊ ಎಂಬ ವಿಷಯದ ಮೇಲೆ ಸದಾ ಭಿನ್ನಾಭಿಪ್ರಾಯವಿದೆ. ವಿಶೇಷತಃ ಹಕೀಮರೂ ವೈದ್ಯರೂ ಊಟಕ್ಕೆ ಕುಳಿತಾಗ ಮಾತಾಡಬಾರದೆಂದು ಅಭಿಪ್ರಾಯಪಡುತ್ತಿದ್ದರೆ, ಡಾಕ್ಟರ ಜನರು ಮಾತಾಡಬೇಕೆಂದು ಹೇಳುತ್ತಾರೆ. ನನ್ನ ಅಭಿಪ್ರಾಯ ಎ...

ಜಗತ್ತಿನಲ್ಲಿಯ ಎಲ್ಲ ಸುಖದುಃಖವನ್ನು ಕೊಡಿಸಿ ಸರಿಸಮಾನವಾಗಿ ಹಂಚಿದರೆ ಪ್ರತಿಯೊಬ್ಬನ ಭಾಗಕ್ಕೆ ಬರುವ ಸುಖದುಃಖದಿಂದ ಯಾವನೂ ಸಂತುಷ್ಟನಾಗುವದಿಲ್ಲೆಂದು ಜಗದ್ವಿಖ್ಯಾತ ತತ್ವಜ್ಞಾನಿಯಾದ ಸಾಕ್ರೇಟಿಸನು ಹೇಳಿದ್ದಾನೆ. ಅದೇ ತತ್ವವನ್ನು ವಿಂಗಡಿಸಿ, ವಿಸ...

ವರ್ತಮಾನಪತ್ರಗಳ ಸುದ್ದಿಗಾರರ ಕರ್ತವ್ಯವು ಸುದ್ದಿ ಕೂಡಿಸುವದು; ಸುದ್ದಿ ಸಿಗದಿದ್ದರೆ ಸುದ್ದಿ ಹುಟ್ಟಿಸುವದು. ಸುಳ್ಳು ಸುದ್ದಿಯನ್ನು ಸತ್ಯವಿದ್ದಂತೆ ಮಾಡಿ ತೋರಿಸುವವನು ಚತುರನಾದ ಸುದ್ದಿಗಾರನು!   * * * * ೧೯೩೧ನೇ ಇಸ್ವಿಯಲ್ಲಿ ಮುಂಬೈಯಲ್ಲಿ ಅ...

ಬೇಸಿಗೆ ಬಂದ ಹಾಗೆಲ್ಲ ಜನರು ತಂಗಾಳಿಯ ಸಲುವಾಗಿ ಬಾಯಿ ತೆಗೆದುಕೊಂಡು ಕೂಡುವರು, ಬಿಸಿಲು ಬಲಿತಂತೆ ಮನೆಯೊಳಗಿಂದ ಹೊರಗೆ ಬಂದು ಬಂಕದಲ್ಲಿ ಕುಳಿತುಕೊಳ್ಳುವರು. ಹೊರಗೆ ಕುಳಿತವರು ಸಮೀಪದ ಗಿಡಕ್ಕೆ ಹೋಗುವರು. ಶ್ರೀಮಂತರು ಮಹಾಬಳೇಶ್ವರ, ಉಟಕಮಾಂಡ ಸಿಮ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...