ಜಯವೆನುತ ಕೈಮುಗಿದು ನಮಿಸುವೆ
ನಯದೊಳೊಂದಿಪೆ ದೃಢದಲಿ
ಭವಕ್ಕಪ್ರಾಣವ ದೂರಮಾಡೆಂದೆನುತ ಎನಮನಗೊನಿಯಲಿ || ಪ ||
ಭವನೆತ್ರೈಜೀವನ ಜಗತ್ಪರಿಪಾಲ ದಯಾನಿಧಿಯೆನುತಲಿ
ಮಹೀತಲ ಹಬ್ಬಲಿ ಮಹಾಭವಾಂಡದ ಸುತ್ತಲಿ
ಮೇಧಿನಿಸ್ತಳದಿ ಜನಸಿದೆಯೋ ಮೌಜಿಲಿ
ಚಿನುಮಯಾತ್ಮಕ ಸ್ವರೂಪಿಲೀ ಆ ಭಯ ಭಕ್ತಿಯಲಿ
ನಮಿಸುವೆ ಶ್ಯಾ ಚಮನ ಸುಂದರವಲಿ || ೧ ||
ಧರಿಯ ಚರಿಸ್ಯಾಡುತ್ತ ಬಂದಿರಿ
ಭರದಿ ದಕ್ಷಿಣ ಭಾಗಕೆ
ಗುರುಪರಾತ್ಪರದೇವ ಪರಮಫಕ್ಕೀರಪ್ರಭೋ ಜಾತಾರಕೆ
ಹರಿಹರಸ್ಥಲವೆಂದು ನೆಲಸಿ
ಮೆರಿದ ಬಾತಿಯ ಗ್ರಾಮಕೆ || ೨ ||
ಆದಿಯಿಂದ ಅತ್ತಲಾದಿರಿ
ಅನಾದಿ ಮೂರುತಿ ಆದಿಯೋ
ನಾದ ಬಿಂದು ಕಲಾತೀತ ವಿನೋದ ಬೋಧಾನಂದವು
ಸಾಧಿಸಿರಿ ಮುಕ್ತಾಂಗನಿಯರ ಪಾದಪರಬ್ರಹ್ಮವು
ಮೇದಿನಿಗೆ ಶಿಶುನಾಳಗ್ರಾಮದಿ ಓದಿಸುವೆ ತಮ್ಮಮಾನವು || ೩ ||
*****