
ಹಸಿರಂಚಿನ ಹಳದಿಪತ್ತಲು ಸುತ್ತಿ ಬೆಳ್ಳಿಯುಂಗರ ಕಾಲುಗೆಜ್ಜೆ ಬುಗುಡಿ ನಗುಮೊಗ ತುಂಬಿಕೊಂಡು ಕಣ್ಣರಳಿಸಿ ಜೀವನದಿಯ ಸುಖದ ಹರಿವು ಬೆಳ್ಳಿ. ಏನೆಲ್ಲ ನನ್ನ ನಿನ್ನ ನಡುವೆ ಎಂದು ತಾನಾಗಿಯೇ ತುಂಬಿಕೊಂಡ ಬಂದ ಮುಂಜಾವಿನ ಎಳೆಬಿಸಿಲಿನ ಉಸಿರಿನೊಳಗೆ ನೀರವ ...
ಬಿಳಿರಂಗೇ ನಿನ್ನ ಸುಮ್ಮನೆ ಕಾಡುವ ಕಪ್ಪು, ಕೆಂಪು, ಹಸಿರು, ಹಳದಿ, ನೀಲಿ ಹುಚ್ಚುಚ್ಚು ಗಾಢ ಬಣ್ಣಗಳದೇನು ತಪ್ಪು? ಕನಸುಗಳೂ ಇರಲಿ ವಾಸ್ತವವ ಒಪ್ಪು! ತಪ್ಪಿರುವುದೆಲ್ಲಿ? ಬಣ್ಣಗಳ ಅರ್ಥೈಸಲಾಗದ ನಿನ್ನ ಹುಂಬತನದಲ್ಲೇ? ತುಂಟ ಬಣ್ಣಗಳೇ ಬೇಡೆನುವ ನಿರ...
ಏನು ಮಾಡೆನು ನನ್ನ ದೊರೆಗಾಗಿ? ಈ ಹೂವು ಅರಳಿದ್ದೆ ಮುಡಿಗಾಗಿ – ಅವನ ಅಡಿಗಾಗಿ! ಜೀವದ ಮಾತ ಆಡುತ ಸೋತು ಹಾಡಾಗಿ ಹರಿದೇನು ಅವನಲ್ಲಿ ಕಾಣದ ಲೋಕ ತೆರೆಸುವ ಧೀರ ಆಳಾಗಿ ನಡೆದೇನು ಬೆನ್ನಲ್ಲಿ! ಹೆಣ್ಣಿನ ಆಸೆ ತಳೆಯದು ಭಾಷೆ ಹೊಳೆದೀತು ಮಿಂಚಾಗಿ...
ಹೀಗೇ ನಡೆಯುತ್ತಾ ನಡೆಯುತ್ತಾ ಅರ್ಧದಲ್ಲೇ ಥಟ್ಟನೆ ಎಲ್ಲ ನಿಂತು ಗಾಳಿ ಸ್ತಬ್ಧ ನೀರು – ಬೇರು ಸ್ತಬ್ಧ ಜೀವ – ಜೀವನವೇ ಸ್ತಬ್ಧ! ಎಲ್ಲ ಗಮ್ಮತ್ತುಗಳೂ ಮೈ ಮುದುರಿ ಕೌದಿ ಹೊದ್ದು ತೆಪ್ಪಗೆ ಮಲಗಿಬಿಟ್ಟಿವೆಯೇ? ಮದಿರೆಯ ಬಟ್ಟಲೂ ಖಾಲಿ ನ...
ಏಕೆ ಅವನ ಕಂಡೆನೋ ಪ್ರೇಮದ ಸವಿಯುಂಡೆನೋ! ಇಲ್ಲವಾಯಿತದೇ ಗಳಿಗೆ ನನ್ನದೆಲ್ಲವೂ, ನಲ್ಲನನ್ನು ಬಿಟ್ಟು ಮನಸ್ಸು ಹೃದಯ ನಿಲ್ಲವು ನೂರು ಕಡೆಗೆ ಹಾಯುತಿದ್ದ ಹೃದಯ ಇದೇ ಏನು? ನೂರು ರುಚಿಯ ಬಯಸುತಿದ್ದ ಮನಸು ಇದೇ ಏನು? ಬಿಗಿದ ನಲ್ಲ ನನ್ನ ತನ್ನ ಸ್ಮರಣೆಯ...
ಇನಿಯನೊಲುಮೆಯ ಹುಚ್ಚು ಕುದಿಯಲ್ಲಿ ಸಿಕ್ಕಿ ಏನಾದೆನೇ ಸಖಿ ಏನಾದೆನೇ! ತೀರದಾಸೆಯ ಬೆಂಕಿ- ಯುರಿಯಲ್ಲಿ ಉಕ್ಕಿ ಪಾತ್ರೆಯಾಚೆಗೆ ಸುರಿದ ಹಾಲಾದೆನೇ! ಮರಳು ಕನಸಿನ ಕೀಲು ಕುದುರೆ ಬೆನ್ನೇರಿ ಏನಾದೆನೇ ಸಖಿ ಏನಾದೆನೇ! ತಾರೆಗಳ ಮೇರೆಗಳ ಮೀರುತ್ತ ಹಾರಿ ಸಾ...













