
ಎಂದೋ-ಯಾರೋ ಉರುಳಿಸಿದ ಖಂಡಿತ ಮಂದಿರ, ಮಸೀದಿಗಳ ಅಡಿಪಾಯದಡಿಯಲ್ಲಿ ನನ್ನನ್ನೇಕೆ ಸಿಕ್ಕಿಸುವಿರಿ ಯಾರೋ ಉರುಳಿಸಿದ ಮಂದಿರಗಳ ಭಾರ ನನ್ನ ಹೆಗಲಿಗೇಕೆ ಹೊರಿಸುವಿರಿ? ಯಾರೋ ಮಾಡಿದ ತಪ್ಪಿಗೆ ನನಗೇಕೆ ಬರೆ? ಛಿದ್ರಗೊಂಡ ಮಂದಿರದ ಕಲ್ಲುಗಳನ್ನೆತ್ತಿ ನನ್ನ...
ಕೃಷ್ಣನಿಗಾಸೆ ನೂರು ಅದಕೆ ಹೆಂಡಿರು ಮೂರು ಹೆಂಡಿರಿಗಾಸೆಯೆ ಇಲ್ಲ ಮರ್ಮವ ತಿಳಿದವರಾರು? ಪತಿವ್ರತೆಯೆಂಬುದು ಧರ್ಮ ಪುರುಷನಿಗ್ಯಾವುದು ಧರ್ಮ ಧರ್ಮವ ಹೇರಿದ ತಪ್ಪಿಗೆ ಕಾವಲು ಇವನ ಕರ್ಮ! ಹೆಣ್ಣು ಪೂರ ಅಬಲೆ ಜೊತೆಗೆ ಕೊಂಚ ಚಂಚಲೆ ಯಾರ ಬಾಯಿಂದ ಈ ಮಾತ...
ತಿರುಗಿ ಬಾ! ಹೃದಯವೇ! ಹುಲ್ಲುಮಾನವರೊಡನೆ ದಂದುಗವು ಸರಿಬರದು. ನಿನ್ನ ಪಲ್ಲವನೇತ್ರ ಬೆಳಗುಜಾವವಿದೆಂದು ಮೋಹಗೊಂಡಿತು ಮಾತ್ರ. ಅಲ್ಲಿಹುದು ಕತ್ತಲೆಯ ಮೊನೆ, ಹೇಯವಿಹ ನಟನೆ! ತಿರುಗಿ ಬಾ: ತ್ಯಜಿಸಿಬಿಡು ರಜನಿಯನು, ಆ ಮೃಡನೆ ಮುಟ್ಟದಿಹ ಬೂದಿಯನು. ಇನ...
ಎಲ್ಲಿ ಮನುಕುಲ ಕೆರಳಿ ನಿಂತಿದೆ ಅಲ್ಲಿ ಗುರುಕುಲ ಅರಳಿದೆ ಎಲ್ಲಿ ಜನಮನ ಜಾರಿ ಬಿದ್ದಿದೆ ಅಲ್ಲಿ ಜಂಗಮ ಬೆಳಗಿದೆ ಐದು ನಡೆಮಡಿ ಎಂಟು ಉಡುಗೊರೆ ಆರು ಅಟ್ಟದ ಗುಡಿಯಿದು ಗುರುವು ಮುಟ್ಟಿದ ಮಂತ್ರ ಪೀಠದ ನೂರ ಒಂದರ ಮಠವಿದು ಯಾಕೆ ತಳಮಳ ಸಾಕು ಕಳವಳ ಕೇಳ...
“ಪುಷ್ಪವಿದ್ದಂತೆ ಮೊಗ್ಗೆಯನರ್‍ಪಿಸಿಕೊಂಡ ಶಿವನು! ಪಕ್ವವಾದ ಫಳವಿದ್ದಂತೆ ಕಸುಗಾಯ ಕೊಯ್ಯನು ಶಿವನು! -(ಬಾಲ ಸಂಗಯ್ಯನ ಮರಣ ಕಾಲಕ್ಕೆ ಬಸವದೇವನ ವಿಲಾಪ) ಕೊಳಲಾಗಬಹುದಾಗಿತ್ತು, ಕಳಿಲಿದ್ದಾಗಲೇ ಕಡಿದ ಕಾಳ! ದೇವ! ಮಗುವೆಂದು ತಿಳಿದಿದ್ದೆ ಆದಾ...
ಸರಮಾಲೆ ಕಷ್ಟದೊಳು ಮನುಜಕುಲ ನೊಂದಿಹುದು ತರತರದ ವಿಶ್ವದಿನ ದಿನಕೊಂದು ದೋಷ ಸರಿಸಲಿಕೆಂದು ಏನೆ ಮಾಡಿದೊಡದು ಕುಂದು ಪರಿಹಾರ ಸುಲಭದೊಳಿಹುದೆಲ್ಲ ತೊಂದರೆಗು ಚರ್‍ಯೆಯೊಳು ದಿನಪನೊಡಗೂಡಿ ಬಾಳಿದಂದು – ವಿಜ್ಞಾನೇಶ್ವರಾ *****...













