ಕದನ ವಿರಾಮದ ಮಾತು

ಹಣ್ಣು ತಿನ್ನುವುದಿರಲಿ ನಿನ್ನ ಸ್ನೇಹಕ್ಕೆ ಸೋತು ಮಣ್ಣು ತಿಂದೇನು ಅಂದಿದ್ದೆ, ಅಲ್ಲವ ಹೇಳು? ಅಂದಿದ್ದೆ ಹೌದು ಒಂದಾನೊಂದು ಕಾಲದಲಿ ಬುದ್ದಿಯಿದ್ದದ್ದೆಲ್ಲ ಆಗಿನ್ನು ಬಾಲದಲಿ ಕೈಯಾರೆ ಬೆಳೆಸಿದ್ದ ಚಂದ್ರ ಹಲಸಿನ ಗಿಡ ಬುಡಕ್ಕೆ ಗೆದ್ದಲು ಹಿಡಿದು...

ಶವಪರೀಕ್ಷೆ

ನೀರು ಕಾಯುತ ನೋಡಲು ಬಚ್ಚಲಿಗೆ ಹೋದೆ ಉರಿ ಕೊನೆತನಕ ಬಂದು ಕಟ್ಟಿಗೆ ಕೈಹಿಡಿಯಷ್ಟು ಉಳಿದು ಒಲೆಯಿಂದ ಹೊರಗೆ ಬಿದ್ದಿದೆ; ಥಟ್ಟನೆ ವಯಸ್ಸಾಯಿತೆನ್ನಿಸಿತು ಸರಿದ ಬದುಕ ತಲೆಗೆ ಕರೆದು ದುರ್ಬೀನಡಿಗೆ ದಬ್ಬಿ ಹುಡುಕಿದೆ. ಒಂದು ಮಲ್ಲಿಗೆ...

ಹೊಸಬ

ಮೊನ್ನೆತನಕ ಎಲ್ಲ ಚೆನ್ನಾಗಿತ್ತು ಗೆಳೆಯ ಸರಳ ಸಮರ್‍ಪಕ ಸೂತ್ರಬದ್ಧ ಇದ್ದಕ್ಕಿದ್ದಂತೆ ದನಿಯೊಡೆದೆ ಈಗ ಕನ್ನೆಮಾಡದ ಕನಸಮುಗ್ಧ ಹಸಿರು ಹಾವು ಅಸಂಖ್ಯ ಉಸಿರುಗಟ್ಟಿಸುವಂತೆ ಹರಿದುಬಂದವು ಹತ್ತುದಿಕ್ಕಿನಿಂದ ಕುಡಿದು ಮಲಗಿದ್ದವನ ಕಡಿದು ಹೋದವು ಸತ್ತು ಬೆಸಲಾದೆ ಹೊಸಬ...

ದುರ್‍ವಿನೀತ

ಸಿಗದ ಅನಂತ ಆಕಾಶದೆದುರು ಸಿಕ್ಕದ್ದು ಒಂದು ಹಿಡಿ ಹೊಟ್ಟು, ಅದನ್ನೇ ತೊಟ್ಟು ಕೈಗೆ ಬಳೆಯಾಗಿ ಮುಡಿಗೆ ಹೂವಾಗಿ ಮರೆದಿದ್ದೇನೆ ನಾಚಿಕೆ ಬಿಟ್ಟು ನಾಚಿಕೆಯಿಲ್ಲ ನನಗೆ ನಾಚಿಕೆಯಿಲ್ಲ ಯಾಕೆ, ಇಲ್ಲಿ ಬೇರು ಬಿಟ್ಟು ಬೇರೆಲ್ಲೋ ಹೂ...

ಯಾರು ದೂರವಾದರೇನು?

ಈ ಪಚ್ಚಬಾಳಸಿಪ್ಪೆಯ ಬೆಳಗು, ಟೊಮ್ಯಾಟೋ ಸೂರ್‍ಯನ ಮುಳುಗು, ಮೊಳೆಮೆಟ್ಟಿನಿಂದ ತಲೆಮೆಟ್ಟುವ ರಾಕ್ಷಸ ನಡುಹಗಲು, ಹಗಲು ಹಿಂಜಿದವನನ್ನ ತುದಿಗೆ ಮಂಜಲ್ಲಿ ಹುಗಿಯುವ ಡಿಸೆಂಬರಿನ ರೆಫ್ರಿಜಿರೇಟರ್ ರಾತ್ರಿ, ಯಾರು ದೂರವಾದರೆ ಏನು ನನಗೆ? ನಿಂತ ನೆಲದ ಈ...

ಅಪರೂಪದವನು

ಬೆಟ್ಟದ ತಪ್ಪಲಲ್ಲೇ ಹುಟ್ಟಿ ಅಲ್ಲೇ ಬಾಳು ಕಟ್ಟಿದ್ದೇವೆ, ಕೊಪ್ಪಲು ಬಿಟ್ಟು ಬೆಟ್ಟದ ನೆತ್ತಿ ಹತ್ತಲಾರದೆ ಹೋಗಿದ್ದೇವೆ. ಇಲ್ಲೇ ಹುಟ್ಟಿದ ನೀನು ಅಲ್ಲಿಗೆ ಮುಟ್ಟಿದ್ದಕ್ಕೆ ನಗಾರಿ ಬಡಿದರು ಹೊರಗೆ ನಡುಗಿದ್ದೇವೆ ಒಳಗೆ ಅಲ್ಲಿಗೆ ಸೇರಿದ ನೀನು...

ಧವಳಪುರದ ಪವಾಡ

ಹಾರುವ ವಿಮಾನ ಹಾಗೇ ಹದ್ದಾಗಿ ಹೋದರೆ ಗತಿ? ಗಡಿ ರಕ್ಷಿಸಿಯಾಯಿತಲ್ಲ! ತೊಟ್ಟ ಬಟ್ನೆಗಳೇ ಥಟ್ಟನೆ ಇಲ್ಲವೆನ್ನಿ ಏಕಾಂತದಲ್ಲೆ ಮಾನವೆಲ್ಲ! ಧವಳಪುರದಲ್ಲಿ ಇಂಥ ಆಟಂಬಾಂಬ್ ಅಲ್ಲದಿದ್ದರೂ ಚಿನಕುರಳಿ ಸಿಡಿಯುತ್ತವೆ. ಮಾಮೂಲು ಬದುಕಿನ ಒಂದು ಕೂದಲು ಕೊಂಕದಿದ್ದರೂ...

ಮಾತಿನವರು

ಬರಿ ಗಂಗೆ ಗೌರೀಶಂಕರ ರಾವಣಾಸುರ ಮಥನ ದಿವ್ಯನಡತೆಯ ಕಥನ ಹಗಲಲ್ಲಿ ಹತ್ತು ಜನರೆದುರಲ್ಲಿ ಸತ್ತರೂ ನಿಲ್ಲುವ ಶಾಸನದಲ್ಲಿ; ಕೊಳೆವ ಗದ್ದಲದ ವಠಾರ ನಿಂತ ನೀರ ಗಬ್ಬುಗಟಾರ ಬಾಗಿದವನ ಬೆನ್ನ ಕುತಾರ ಹಿತ್ತಿಲಲ್ಲಿ ಗುಪ್ತಚಾರರ ಜೊತೆ...

ಆಗೀಗ ಹೂಳೆದ ಚುಕ್ಕಿಗೆ

ಕರೆದೇ ಕರೆದೆ ಗಂಟಲು ಹರಿವ ತನಕ ಒಂದೇ ಸಮನೆ ಮೊರೆದೆ. ತಿರುಗಿದೆಯ ನೀನು ತಿರುಗುವುದೆ ಬಾನು ಭೂಮಿಯ ತಾಳಕ್ಕೆ? ಭೂಮಿಯ ತಾಳಕ್ಕೆ ಋತುಗಳ ಗಾನಕ್ಕೆ ತಿರುಗುವವರು ನಾವು, ಯಾವನ ಪುಂಗಿಗೊ ರಾಗದ ಭಂಗಿಗೊ ಎಳ್ಳುಕಾಳಾಗಿ...

ಉದುರಿದೆಲೆಗಳು

ಸುರುಳಿ ಸುತ್ತಿಟ್ಟ ಬಾಳಬೀದಿಯ ನೆನಪು ಕೆರಳಿ ಮರಳಿ ಬಿಚ್ಚಿ ಹೊರಳ ತೊಡಗುತ್ತೇನೆ ಆಗೀಗ; ಹಳೆಯ ಅರಳಿಮರ ಹೊಳೆಮೆಟ್ಟಲು ಗರುಡಗಂಬ ಚಿಕ್ಕದೊಡ್ಡದ್ದೆಲ್ಲ ಚಿಮ್ಮಿ ನಿಲ್ಲುತ್ತವೆ ಹುಗಿದ ತಳದಿಂದ ಹುಟ್ಟಿಕೊಳ್ಳುತ್ತದೆ ಸತ್ತ ಗಿಡ ಸುತ್ತದಡ ನಡುವೆ ಕತ್ತರಿಸಿ...