ಹಾಡ-ಹುರುಳು

ಕವಿ:- ನನ್ನ ಹಾಡುಗಳನ್ನೆ ನೀನು ಕೇಳುತ ಕುಳಿತೆ, ನಿನ್ನ ಹಾಡನು ನಾನು ಕೇಳಲೆಂದು ಕುಳಿತೆ, ನನ್ನೀ ಹಿಗ್ಗು ಮರುದನಿಯ ಕೊಡುವಂತೆ ನಿನ್ನ ಕಣ್ಣಲಿ ಕಂಡೆ ಕುಣಿವುದೊಂದು. ರಸಿಕ:- ನನ್ನ ಕಂಗಳ ಕುಣಿತಗಳ ತಾಳಲಯದಲ್ಲಿ ಕಟ್ಟಿರುವೆ...

ಇಂದು

ಇಂದಿನರಸನಿಗೇಕೆ ನಾಳನಾಳುವ ಚಿಂತೆ? ಇಂದು ರಸವನು ಸವಿವುದವಗೆ ಸಾಜ. ಇಂದು ಮುಳುಗದೆ, ನಾಳೆ ಹೊತ್ತು ಮಾಡುವದೇನು? ಹೊತ್ತು ಮೂಡಲು, ಇಂದುಗಿಲ್ಲ ತೇಜ. ನಾಳಮೊಗವನು ಮುಸುಕದಿರಲಿಂದು, ಆ ನಿನ್ನೆ ಸತ್ತ ಹೊತ್ತಿನ ನೆರಳು ಇಂದು ಅಲ್ಲ....

ಅಮರ ಜೀವನ

ಮುತ್ತಲದ ನೆತ್ತರವ ಚಿಮ್ಮಿ ಚಿತ್ರಿಸುವ ಹೂ ಸುಗ್ಗಿಯೊಲುಮೆಯ ತಂದೆ ಅಂಚೆಗಾರ. ಅರಿತೊಂದು ಕುಡಿನೋಟ, ತಿಳಿದೊಂದು ಮುಗುಳುನಗೆ, ಬರುವ ಬೆಳಕಿನ ಬನದ ಸಂಚಕಾರ. ತನ್ನ ಸನ್ನಿಧಿಯಲ್ಲಿ ಜೀವಕೋಟಿಯಲೊಂದು ಜೀವ ಹೂ ಬಿಡಲು ಈ ಜನ್ಮ ಧನ್ಯ....

ವನಸುಮ

ಹೆಸರಿಲ್ಲದಿಲ್ಲಿ ಎಸೆಯುವದು ಹೂವಿನ ಪಸರ. ಮರ ಮರದ ಮೆರೆದಾಟವಿರಲಿ ಸುತ್ತ; ಪಶುಗಳಾರ್‍ಭಟೆ, ಮೃಗದ ಎಡೆಯಾಟ, ಹುಳಹುಪ್ಪ- ಡಿಯ ಕಾಟ ನಡೆದಿರಲಿ ನೋಡಿದತ್ತ. ನೋಡುವರು, ನೋಡಿ ನಲಿದಾಡುವರು ಕೊಂಡು ಕೊನೆ- ದಾಡುವರು ಇಲ್ಲದಿರೆ ಏನು ಕೊರತೆ?...

ಸತ್ಯವೀರ

ತೊಗಲ ನಾಲಗೆ ನಿಜವ ನುಡಿಯಲೆಣಿಸಿದರೆ, ತಾ- ನಂಗೈಲಿ ಪ್ರಾಣಿಗಳ ಹಿಡಿಯಬೇಕು. ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು ಉರಿಯ ನಾಲಗೆಯಿಂದ ನುಡಿಯಬೇಕು. ಸುಡುಗಾಡಿನಲಿ ಹುಡುಗ ಹೆಣವಾದರೇನು? ಕೈ- ಹಿಡಿದವಳು ಹೊಲೆಯನಾಳಾದರೇನು ? ಸಿಲುಬೆಯಲ್ಲೊಡಲು, ವಿಷದಲಿ ನೆರಳು ಚಲಿಸಿದರು,...

ತೊಗಲ ಚೀಲ

ತೊಗಲ ಚೀಲಗಳಲ್ಲಿ ಬದುಕು ನಡೆದಿದೆ. ಹೊಟ್ಟೆ ಹೊಸೆಯುವದೆ ಬಾಳುವೆಯು; ನಿದ್ದೆ ಹಿಗ್ಗು; ಮಣ್ಣಿನಲಿ ಅನ್ನವನು ಹುಡುಕುತಿವೆ ಕಣ್ಣುಗಳು; ಇನ್ನುವೂ ಹೂತಿಲ್ಲ ಮನದ ಮೊಗ್ಗು. ಬಾನ ತುಂಬಿದೆ ಶಂಖನಾದ, ತಿರುತಿರುಗುತಿದೆ ಚಕ್ರ, ಬಣ್ಣಗಳಲ್ಲಿ ಬೀರಿ ಪ್ರಭೆಯ....

ಹಾದಿ

ಅಡಿಗಳಿಂದಳೆದಾಡೆ ದಾರಿಯುದ್ದೋ ಉದ್ದ, ದಾರಿ ತೆರೆದವನಾರೊ ಬಲು ವಿಚಿತ್ರ! ಹೆಜ್ಜೆಯಲಿ ಹಿಗ್ಗಿರಲು, ಹಾದಿಯುದ್ದಕು ಸೊಗಸು, ಹೆಜ್ಜೆ ಬರೆದಿತು ಹಾದಿಯೆಂಬ ಚಿತ್ರ. ನೆಲದಗಲದಲ್ಲಿ ಅಗಲಿಕೆಗೆ ಇಂಬಿರಲಾಗಿ, ಅಗಲಿಕೆಯ ಕಳೆಯಲಿಹುದೊಂದೆ ಹಾದಿ; ಪ್ರಿಯನ ಬಳಿಗೊಯ್ಯುತಿಹ ಪ್ರೀತಿ-ದೂತಿಯ ಹಾಗೆ...

ಇರವು-ಅರಿವು

ಇರವಿಗೂ ಅರಿದೇನು? ಇರವೆ ಅರಿದರಿದು; ಮೇ- ಣಿದುವೆ ಅದ್ಭುತರಮ್ಯ ಶ್ರೀವಿಭೂತಿ! ಕಂಡುದನೆ ಕೊನೆಯೆಂದು ಕಣ್ಣು ಬಣ್ಣಿಸುತಿತ್ತು. ಅರಿವು ಒಡನುಡಿಯಿತ್ತು ‘ನೇತಿ ನೇತಿ’. ಒಂದು ಕಿಡಿಕಣದಲ್ಲು ಮಿಡಿದು ಮಿಳ್ಳಿಸುತಿರುವ ಇರವಿನಾಲದ ಬೀಜವದಕು ಕಿರಿದು. ಹಬ್ಬಿರುವ ಹೂಬಳ್ಳಿ...

ಎಣಿಕೆ

ನಡುಹಗಲಿನಲಿ ಗಮ್ಮನೆಣಿಕೆ ಇಣಕುವದೊಂದು, "ಇಂದು ಬಂದದ್ದು ಹೋದದ್ದು ಏನು?" ಬರಿಗೈಲಿ ಮೊಳಹಾಕಿ ಬಯಲ ಸುತ್ತಿದೆನಷ್ಟೆ! "ಹಾರುತ್ತ ಹೊರಟಿರುವೆನೆತ್ತ ನಾನು?" ನಿದ್ದೆಯಿಂದೆಚ್ಚತ್ತು, ನಡು ಇರುಳಿನಲ್ಲೆದ್ದು, ಬಿಡಿಸುತಿದೆ ‘ಮುಂದೆ ಏನೆಂಬ ಗಂಟು? ಹಿಂದಿನಂತೆಯೆ ಮುಂದೆ, ಎಂದಿನಂತೆಯೇ ಇಂದೆ’...

ಬಾಳೆದೆಯ ಶೂಲ

ಹೊನ್ನುರಿಯ ಮೈ ಬಣ್ಣ, ಕೆಂಡಕಾರುವ ಕಣ್ಣ ಎಂಟೆದೆಯ ಹುಲಿರಾಯ, ನಂಟ ನೀನು. "ಕವಡು ಕಂಟಕವಿಲ್ಲದೀ ಹುಲ್ಲೆ ಸವಿ ಮೇವು" ಎನುವೆ ಅದು ತಿಂದಂಥ ಗಂಟು ಏನು? ನೀ ಪಶುವು; ನಿನಗೇನು? ಮನದ ಚೊಚ್ಚಿಲ ಮಗನು...