ನುಡಿಯಬೇಕು ಮದ್ದಲೆ

ಚೈತ್ರ ಎಷ್ಟು ಬಂದವೋ ಕದವ ಬಡಿದು ನಡೆದವೋ ಹಕ್ಕಿ ಕೊರಳು ಕರೆಗಂಟೆಯ ಒತ್ತಿ ಒತ್ತಿ ದಣಿದವೋ ತೆರೆಯ ಬರದ ಬಾಗಿಲೇ, ನೆಲ ಹಾಯದ ನೇಗಿಲೇ ಇದ್ದರಾಯ್ತೆ ಬದುಕು ಬರಿದೆ ? ನುಡಿಯಬೇಕು ಮದ್ದಲೆ ಇರುವುದೇಕೆ...

ಬಣ್ಣದ ಕೊಕ್ಕಿನ ಬಾನಾಡಿ ಹಕ್ಕಿ

ಬಣ್ಣದ ಕೊಕ್ಕಿನ ಬಾನಾಡಿ ಹಕ್ಕಿಗೆ ಮಣಿಗಿಳಿಯುವ ತನಕ ಬಾಳೆ ಇಲ್ಲ; ಬಳ್ಳಿ ಗಿಡ ಮರ ಎಲ್ಲ ಬೀಜದಲೆ ಇದ್ದರೂ ನೆಲದೊಳಗೆ ಕೃಪೆಯಿರದೆ ಸುಳ್ಳೇ ಎಲ್ಲ. ಬಣ್ಣದ ಕೊಕ್ಕಿನ ಬಾನಾಡಿ ಹಕ್ಕಿಗೆ ಹಗಲಲ್ಲಿ ದಣಿವು ಆಲಸ್ಯ...

ಯಾತ್ರೆಯ ನಡುವೆ

ಮರೆಯಲ್ಲಿ ನಿಂತು ಮಣಿದಿಗಂತಗಳನ್ನು ಬರೆಯುವ ಸತ್ಯದ ತರಣಿಯೇ, ನನ್ನ ಹರಣದ ನಿಜಗೆಳೆಯ ಇನ್ನಾರು ? ನೀನೇ. ಈ ಮೊಗ್ಗು ಅರಳಿದ್ದು, ಹಂಬಲಕ್ಕೆ ಹೊರಳಿದ್ದು, ಮೆಚ್ಚಿದ ದುಂಬಿಯ ಹುಚ್ಚಿಗೆ ಕಾಯಿಬಿಟ್ಟು ಫಲಿಸಿದ್ದು ನಿನ್ನರಸಿ ಅಭಿನಯಿಸಿದ ಮಧುನೃತ್ಯದ...

ನನ್ನ ನೆನಪಿನ ಯಾತ್ರೆ

ನನ್ನ ನೆನಪಿನ ಯಾತ್ರೆ ನಿನ್ನದರ ಥರವಲ್ಲ ಅದಕ್ಕಿಲ್ಲ ಸರಳಗತಿ ದಾರಿನೆರಳು ; ಮೊಸಳೆ ಹಲ್ಲಿನ ಕಲ್ಲುದಾರಿ, ಕನ್ನಡಿ ಚೂರು ಮಂಡೆ ಮೇಲೇ ಬಾಯಿಮಸೆವ ಬಿಸಿಲು. ಮಡಿದ ನಿನ್ನೆಗಳೆಲ್ಲ ಒಡೆದ ದೊನ್ನೆಗಳಲ್ಲಿ ಸುರಿದ ಮರುಧರೆಯ ಅಮೂಲ್ಯ...

ಹೊಳೆಸಾಲಿನ ಮರ

ಹೊಳೆಸಾಲಿನ ಮರಕ್ಕೆ ನಿಂತ ನೆಲವೇ ವರ ; ಇಳಿಸುತ್ತದೆ ಬೇರನ್ನು ಅಳಕ್ಕೆ, ಅಗಲಕ್ಕೆ ನೀರಿನ ಯೋಚನೆ ಎಲ್ಲಿದೆ ಅದಕ್ಕೆ ? ಹೊಳೆಸಾಲಿನ ಮರದ ತಲೆತುಂಬ ಫಳಫಳ ಎಲೆ, ಕೆಳಗೆ ನದಿಯುದ್ದ ಏರಿಳಿಯುವ ಜುಳು ಜುಳು...

ನವವಸಂತ

ದಾವಾನಲ ಧಾರಿಣಿ ಜಲ ಆಗಸ ಅನಿಲದಲಿ, ಮಾಯದ ಗಾಯದ ಮಣ್ಣಿನ ಕಾಯದ ಹಂಗಿನಲಿ, ಸಾರದ ಸೇರದ ಎಂದೂ ಆರದ ಘನತರಣಿ, ಇರುಳಾಳುವ ಮನದಾಳಕೆ ಸುರಿ ಕಿರಣವ ಕರುಣಿ. ಎದೆಯಾಳದಿ ಎವೆತೆರೆದಿವೆ ಗತಭವಗಳು ಹೊರಳಿ, ಎಂದಿನ...

ಶಿವಮೊಗ್ಗೆಯಲ್ಲಿ ಮಳೆ – ೧೯೪೬

ಹತ್ತು ದಿನದಿಂದ ಊರಲ್ಲಿ ರಚ್ಚಿಟ್ಟು ರಾಚುತ್ತಿದೆ ಮಳೆ ಬಡಿದಂತೆ ನೆಲಕ್ಕೆ ಏಕಕಾಲಕ್ಕೆ ಸಹಸ್ರಮೊಳೆ! ಊರಿನ ಕೆನ್ನೆಗೆ ಪಟಪಟ ಬಾರಿಸಿ ರೇಗಿಸಿ ಛೇಡಿಸಿ ಕೂಗಿ ತರಿಸುತ್ತಿದೆ ಎಲ್ಲರ ಎದೆಯಲ್ಲೂ ದಿಗಿಲು ತಿಂಗಳ ಹಿಂದೆ ಮಾತೇ ಬರದೆ...

ಮನಸೂ ಸಾರದ ಕನಸೂ ಹಾಯದ

ಮನಸೂ ಸಾರದ ಕನಸೂ ಹಾಯದ ಘನತೆಯ ಗೌರೀಶಂಕರವೇ, ಮಾನವಜೀವನ ಮೇರುವಿನೆತ್ತರ ನಿಲಿಸಿದ ಅಹಿಂಸೆಯಂಕುರವೇ! ಸತ್ಯಕಾಗಿ ವಿಷ ಕುಡಿದ ವಿವೇಕವೆ ಸತಿಸುತರನು ಮಾರಿದ ಛಲವೇ, ಜ್ಞಾನವರಸಿ ವನ ಸಾರಿದ ಬೋಧಿಯೆ ಶಿಲುಬೆಯೇರಿ ಹರಸಿದ ಕರವೇ! ರಾಜಕಾರಣದ...

ಯಾರೀ ದಿಟ್ಟ ಫಕೀರ?

ನೂರು ಬಣ್ಣದಲಿ ಊರು ನಗುತಿರಲು ಗಿರಿಯ ತಪ್ಪಲಲ್ಲಿ ಬಾಳಿನ ಚೆಲುವನು ಹಸಿರು ಬರೆದಿರಲು ಬೆಟ್ಟದ ಮೈಯಲ್ಲಿ ಕೈಯ ಬೀಸಿ ಕರೆಯುತ್ತಿರೆ ಜೀವನ ಸಾವಿರ ಕೈಗಳಲಿ ಕಣವೂ ಚಲಿಸದೆ ಕಣ್ಣೇ ಹರಿಸದೆ ಕುಳಿತನಲ್ಲ ವೀರ ಯಾರೀ...

ಶರೀಫಜ್ಜನಿಗೆ

ಒಂದು ಧರ್ಮಕೆ ಮೊಳೆತು ಇನ್ನೊಂದರಲಿ ಫಲಿತು ಸಾರ ಒಂದೇ ಎಂದು ಹಾಡಿದಾತ, ಹನಿ ಸೇರಿ ಹೊಳೆಯಾಗಿ ಗುರಿ ಸೇರಿ ಕಡಲಾಗಿ ನಭವೇರಿ ಮುಗಿಲಾಗಿ ಆಡಿದಾತ, ಹತ್ತು ವನಗಳ ಸುತ್ತಿ, ಹೂ ಹೂವನೂ ಮುತ್ತಿ ಒಂದೇ...