ಸಂಜೆಬೆಳಕು

ಬಿಲ್ಲಿಗೆ ಏರಿದೆ ಬಾಣ ಕೊರಳಿಗೆ ಹಾರಿದೆ ಪ್ರಾಣ ಭಯವಿಸ್ಮಯದಲಿ ಗೀತೆಯ ಕೊನೆಚರಣದ ಗಾನ ಸಂಜೆಯ ಸೂರ್ಯನ ಕೆಂಪಿಗೆ ಕಂಪಿಸುತಿದೆ ಮರದೆಲೆಯಲಿ ಸಂಚರಿಸಿಯು ನಿಂತಂತಿದೆ ಗಾಳಿಗು ನಿತ್ರಾಣ ಮಳೆಸುರಿದೂ ಹೊಳೆಹರಿದೂ ಹಕ್ಕಿ ಹಗುರ ದನಿಗರೆದೂ ಲೋಕ...

ವಿಸರ್ಜನೆ

ಮಣ್ಣನ್ನು ಹಿಡಿದೆತ್ತಿ ಮಣ್ಣಲ್ಲಿ ಬಿಡುವಾಗ ಕಣ್ಣು ಮುಚ್ಚುತ್ತೇನೆ ಕೊನೆಯಾಗಲಿ ; ನಡುವೆ ಹತ್ತಿರ ಸುಳಿದು ನೂರು ಕಾಮನ ಬಿಲ್ಲ ಮೀರಿ ಮಿಂಚಿದ ಚಿಗರೆ ಹರಿದೋಡಲಿ ಬಿಟ್ಟ ಕೈಯನು ಸುಟ್ಟ ಕೊರಡೆನಲಿ ವ್ಯಥೆಯಿಲ್ಲ, ಮರ್ತ್ಯಲೋಕದ ಮಿತಿಗೆ...

ತಿರುಗಿ ನೋಡೇ ಒಮ್ಮೆ

ಹಳೆಯೂರ ಧಿಕ್ಕರಿಸಿ ಹೊಸ ಊರುಗಳ ಕನಸಿ ಕಟ್ಟಿದ್ದ ಕೆಡವಿ ಹೊರಟಿರುವ ಹೆಣ್ಣೆ ತಿರುಗಿ ನೋಡೇ ಒಮ್ಮೆ ಇಳಿದ ದಿನ್ನೆ "ನಾ ಮುಡಿದ ಹೂವು, ನಾ ತೊಟ್ಟ ಕೈಬಳೆ, ಹಣೆಗೆ ಇಟ್ಟ ಸಿಂಧೂರ, ಎದೆಕವಚ ನೀನೇ"...

ಯಾರು ಬಂದರೆ ತಾನೆ ಏನು ?

ನಿನಗೆ ಅರವತ್ತಾಯಿತಾ ಎಂದದ್ದು ‘ಬರೋ ಹೊತ್ತಾಯಿತಾ’ ಎಂದು ಕೇಳಿಸಿ ಸಣ್ಣಗೆ ಬೆಚ್ಚಿದೆ ಒಳಗೆ, ಯಾರು ಕೇಳಿದ್ದು ಹಾಗೆ ? ಜೊತೆಗಿದ್ದ ಅಳಿಯನ ? ಮಗನ ? ಅಥವಾ ಸಿನಿಮಾ ರೇಸು ಕಾರು ಬಾರು ಎಂದು...

ಇದಲ್ಲ ತಕ್ಕ ಗಳಿಗೆ

ಗಾಳಿ ಕೂಗುತ್ತಿದೆ ಕಡಲು ಮೊರೆಯುತ್ತಿದೆ ಮರ ಗಿಡ ತೋಟ ಗದ್ದೆ ತಲ್ಲಣಿಸಿ ತೂಗಿ ನೆಲಕ್ಕೆ ಒಲೆಯುತ್ತಿದೆ, ಮೇಘದ ಕಪ್ಪು ಸಲಗಗಳ ದಾಳಿಗೆ ಬೆದರಿ ಬೆಳಕು ತುರಾತುರಿ ತಳ ಕಿತ್ತಿದೆ ಚಚ್ಚಿದೆ ಮಳೆ ಬೆಚ್ಚಿದೆ ಇಳೆ...

ಉರುಳಿ ಅರಿವಿನ ಮೋರಿಯಲ್ಲಿ

ಉರುಳಿ ಅರಿವಿನ ಮೋರಿಯಲ್ಲಿ ನರಳುತ್ತಿರುವೆ ಇಲ್ಲಿ ನೆಮ್ಮದಿ ಎಲ್ಲಿ ? ಕೊಳೆತು ನಾರುತ್ತಿರುದ ಹಳೆಯ ಭೂತ ; ಅದರ ಮೇಲೇ ಮೊಳೆತ ಹೊಸ ಕನಸುಗಳ ತುಡಿತ, ಎರಡು ಗಡಿಗಳ ನಡುವೆ ಒಡೆದು ಬಿದ್ದಿದೆ ರೂಪ....

ದಾಟಿ ತಾಗಲಿ ದೃಷ್ಟಿಕಡೆಯ ಪರಿಧಿ

ಪಟ್ಟಿದ್ದೆಲ್ಲ ಕಾಮಕ್ಕೆ, ಪ್ರೀತಿಗಲ್ಲ - ಭಜನೆ ಕುಟ್ಟಿದ್ದೆಲ್ಲ ಮೋಜಿಗೆ ಭಕ್ತಿಗಲ್ಲ; ಮೋರಿಯಲ್ಲಿಳಿದ ಜಲ ಪಾತ್ರದಲ್ಲಿದ್ದರೂ ಕೊಚ್ಚಿ ಹೋಗಲು ಮಾತ್ರ, ಕುಡಿಯಲಲ್ಲ ಅರ್ಥಸಾಧಕ ಗುರಿಯೆ ಬಿಟ್ಟು ಪಡುತಿರುವ ಸುಖ ತೀಟೆಗಳ ಪೂರೈಕೆ, ಭೋಗವಲ್ಲ ನೆರೆ ಹೊರೆಯ...

ಸಂಕ್ರಾಂತಿ

ಎಷ್ಟೋ ಸಂಕ್ರಾಂತಿಗಳ ಬಣ್ಣದ ಕಮಾನುಗಳ ಹಾದು ಬಂದಿದ್ದೇನೆ ಬಡಿದು ರೆಕ್ಕೆ ಸುಟ್ಟೂ ಸಂದಿದ್ದೇನೆ ಪ್ರಸ್ತುತಕ್ಕೆ ಬಂಡೆಗಳ ಮೇಲೆ ಬಿದ್ದರು ಏನು ಸಂದಿಗಳ ಮಣ್ಣಲ್ಲಿ ಬೇರಿಳಿಸಿ ಎದ್ದ ಬೀಜ ಹೋರಾಟಗಳ ಕಥೆಯ ನುಡಿವ ಗಾಯ ಸಹಸ್ರ...

ಕೃತಜ್ಞತೆ

ಹಳಿಯಬೇಡ ಕಾಮವನ್ನು ಹಾಗೆ ಹೀಗೆಂದು ಹಳಿಯುವಂತೆ ಹೆತ್ತ ತಾಯನ್ನೇ ಹೋಗು ಹೋಗೆಂದು. ನಿನ್ನನ್ನು ಕರೆಸಿದ್ದು ಗರ್ಭಕ್ಕೆ ಇರಿಸಿದ್ದು, ಹೊರಬಂದಮೇಲೂ ಮೈ ಸೇರಿ ಪರಿಪರಿ ಮೆರೆಸಿದ್ದು ಸುತ್ತಲ ಬದುಕಲ್ಲಿ ಸರಿಗಮ ಹರಿಸಿ ಬಾಳೆಲ್ಲ ಪಟ್ಟೆ ಪೀತಾಂಬರ...

ಸೂರ್ಯಾಸ್ತ

ಇರುಳ ಗೂಳಿಯು ಜಿಗಿದು ಉಗಿದ ಬೆಳಕಿನ ಚಿಂದಿ ಮುದುರಿ ಬಿದ್ದಿದೆ ಬುವಿಯ ತಿಪ್ಪೆಮೇಲೆ. ಮುರಿದ ಷರಟಿನ ಗುಂಡಿ ಬಿದಿಗೆ ಚ೦ದಿರ ದೂರ ಸಿಡಿದು ಬಿದ್ದಿದೆ ಮಬ್ಬು ತೇವದಲ್ಲಿ *****