Home / Tirumalesh KV

Browsing Tag: Tirumalesh KV

ಒಂದು ದೊಡ್ಡದಾದ ಬೆಲೂನನ್ನು ಕಂಡರೆ ಎಲ್ಲರಿಗೂ ತಮಾಷೆ ಅದನ್ನು ಹಿಡಿದೆತ್ತಿ ಒಡೆಯಬೇಕೆನ್ನುವ ವಿಚಿತ್ರ ಆಸೆ ಆದರೆ ನಿಜಕ್ಕೂ ಒಂದು ದೊಡ್ಡ ಬೆಲೂನಿನಷ್ಟು ಮಜವಾದ ವಸ್ತು ಈ ಲೋಕದಲ್ಲಿ ಇನ್ನೊಂದಿಲ್ಲ ಎಂಬುದು ಎಲ್ಲರಿಗೂ ಗೊತ್ತು ಉದಾಹರಣೆಗೆ ಒಂದು ಕೋ...

ಹೊಸ ಮನೆಯ ಬೆದರುಗೊಂಬೆಗೆ ಯಾವಾಗಲೂ ಬಿದಿರಿನ ಎಲುಬುಗೂಡು, ಬೈಹುಲ್ಲಿನ ಮಿದುಳು, ಹರಿದ ಹಳೇ ದೊಗಲೆ ಶರ್ಟು. ಒಂದೆಡೆಗೆ ವಾಲುತ್ತ ತೂಗುತ್ತಿರುವ ಸ್ಥಿತಿ. ಒಡೆದ ಮಡಕೆಯ ತಲೆ.  ಕಣ್ಣುಗಳಿರಬೇಕಾದಲ್ಲಿ ಬಿಳೀ ಸುಣ್ಣದ ಬೊಟ್ಟು. ಕಣ್ಣಲ್ಲಿ ಕಣ್ಣಿಟ್ಟು...

ಈ ಕಿಟಕಿ ಈ ಬಾಗಿಲುಗಳ ಹಲಸು ಬೀಟೆ ಹೆಮ್ಮರಗಳನ್ನು ಹಳೆ ಕಾಡುಗಳಿಂದ ಉರುಳಿಸಿದರು.  ಚಿತ್ತಾರದ ಮಂಚಗಳನ್ನು ಪಳಗಿದ ಕೆಲಸದವರಿಂದ ಮಾಡಿಸಿದರು.  ನೆಲಕ್ಕೆ ಹಾಸಿದ ಬಣ್ಣಬಣ್ಣದ ಕಲ್ಲುಗಳನ್ನು ಬಹುದೂರದಿಂದ ತರಿಸಿದರು.  ಪಡಸಾಲೆಯಲ್ಲಿ ತೂಗಿದ ಬೃಹತ್ತಾ...

ಆರು ದಿನ ಕೆಲಸ ಮಾಡಿ ಏಳನೆ ದಿನ ದೇವರು ವಿಶ್ರಾಂತಿ ತೆಗೆದುಕೊಂಡದ್ದು ಎಲ್ಲರಿಗೂ ಗೊತ್ತಿದೆ. ತಡವಾಗಿ ಎದ್ದ, ದಿನವಿಡೀ ಕುಡಿದ, ಸಾಯಂಕಾಲ ಬೀಚಿನಲ್ಲಿ ಸೂರ್ಯಸ್ನಾನ ಮಾಡಿದ, ಕ್ಲಬ್ಬಿನಲ್ಲಿ ಆಡಿದ, ಡಾನ್ಸ್ ಮಾಡಿದ, ಬಾರ್‌ಮೈಡನ್ನು ಕರೆದುಕೊಂಡು ರೂ...

ರೆನೆಯನ್ನು ಕಂಡಮೇಲೆ ನನ್ನ ಜೀವನದ ದೃಷ್ಟಿಕೋನವೇ ಬದಲಾಯಿತು-ಎನ್ನುವುದು ಹೇಗೆ?  ಯಾವುದೂ ಅಷ್ಟು ಬೇಗನೆ ಬದಲಾಗುವುದಿಲ್ಲ.  ಉದಾಹರಣೆಗೆ ಅಬೀಡ್ಸಿನಲ್ಲಿ ಸಂಜೆಯಾಗುವುದು ನಮೆಗೆ ಗೊತ್ತಾಗುವುದೆ ಇಲ್ಲ. ಅಂಗಡಿಯವರು ಒಬ್ಬೊಬ್ಬರಾಗಿ ಬೆಳಕು ಹಾಕುವ ನಿ...

ಬಿಳಿಬೆಕ್ಕು ಹಿಂಜಿದ ಹತ್ತಿಯಂತಿದೆ, ಚಳಿಗಾಲದ ಮಂಜಿನಂತಿದೆ, ಜಲಪಾತದ ನೊರೆಯಂತಿದೆ.  ಹಗಲಿನಂತಿದೆ. ಕರಿಬೆಕ್ಕು ಕುರುಬರ ಕಂಬಳಿಯಂತಿದೆ, ಮಳೆಗಾಲದ ಮೋಡದಂತಿದೆ, ಇದ್ದಿಲ ಗಟ್ಟಿಯಂತಿದೆ.  ರಾತ್ರಿಯಂತಿದೆ. ಬಿಳಿಬೆಕ್ಕಿನ ಕಣ್ಣುಗಳು ಹಗಲಿನ ನಕ್ಷತ್...

ಸುರಿಯುತ್ತಿರುವ ಮಂಜಿನೊಳಗಿಂದಲೇ ಮುಂದರಿಯಬೇಕು ಮುಂಜಾವದ ಬಸ್ಸು. ಘಟ್ಟಗಳ ಬದಿಯ ಟಾರು ರೋಡಿನ ಮೇಲೆ ತಿರುವುಗಳಲ್ಲಿ ಮರೆಸಿಕೊಂಡು, ಅಲ್ಲಲ್ಲಿ ಕಾಣಿಸಿಕೊಂಡು ಇಳಿದರೂ ಇಳಿದ ಆಳ ಗೊತ್ತಾಗಬೇಕಾದರೆ ಹಿಂತಿರುಗಿ ನೋಡಬೇಕು ಹಿಂದೆ ಬಿಟ್ಟ ಶಿಖರಗಳನ್ನು....

ಮನಸ್ಸಿಗೆ ನಾಟುವ ಪ್ರತೀಕಗಳನ್ನು ಬಯಸುವವರಿಗೆ ಅರ್ಧ ಓದಿ ಬೋರಲು ಹಾಕಿದ ಪುಸ್ತಕ, ಮೇಜಿನ ಮೇಲೆ ತೆಗೆದಿಟ್ಟ ಟೆಲಿಫೋನು, ಬಟವಾಡೆಯಾಗದೆ ಬಂದ ಪತ್ರ-ಏನೂ ಅನಿಸುವುದಿಲ್ಲ. ಬೃಹತ್ತಾದ ಪ್ರತಿಮೆಗಳನ್ನು ಹುಡುಕಿಕೊಂಡು ಹೋದವರು ರಸ್ತೆ ಚೌಕಗಳಲ್ಲಿ ಮೇಲೆ...

ಇಲಿಗಳನ್ನು ಕೊಲ್ಲಲು ಹಲವು ಉಪಾಯಗಳಿದ್ದರೂ ಅತ್ಯಂತ ಫಲಪ್ರದವಾದ್ದೆಂದರೆ ಇಲಿಬೋನು. ರೂಮಿನಲ್ಲಿ ಕೂಡಿಹಾಕಿ ಓಡಿಸಿ ಕೊಲ್ಲುವುದರಿಂದ ರಾತ್ರಿಯ ನಿದ್ದೆ ಹಾಳಾಗುತ್ತದೆ.  ಸುಸ್ತಾಗುವಿರಿ, ಇನ್ನು ಪಾಷಾಣದಿಂದ ಬರೇ ಇಲಿಯಲ್ಲ, ನಿಮ್ಮ ಪ್ರೀತಿಯ ಬೆಕ್ಕೂ...

ಇತಿಯೋಪಿಯಾದಲ್ಲಿ ಕ್ಷಾಮ ಬಂದು ಇಡೀ ಒಂದು ಗ್ರಾಮವೇ ಬಲಿಯಾಯಿತೆಂದು ಬೆಳಗ್ಗಿನ ಕಾಫಿ ಹೀರುತ್ತ ಪತ್ರಿಕೆಯಲ್ಲಿ ಓದಿ ಕೇಳಿದೆಯೇನೆ ಸುದ್ದಿ ಎಂದು ಉದ್ಗರಿಸಲಿಲ್ಲ. ದೇವರಿಗೆ ದೀಪ ಹಚ್ಚಿ ನೀನು ಪ್ರಾರ್ಥಿಸುತ್ತಿದ್ದುದು ಏನು ಎಂದು ಕೇಳಲಿಲ್ಲ. ಮನೆಯೆ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...