ಮುಖಾಮುಖಿ

೧ ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು ಹಠಾತ್ತನೆ ನಿಂತಿತು.  ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು. ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ ಹೋಗಿರುವ ಅಪರಾಹ್ನವಂತೂ ಖಂಡಿತ...

ಬಂಡಿಚೋರಟೆ

ದೂರದ ಮೂಸಿಹೊಳೆಯ ಸಂಕದ ಮೇಲೆ ಸಿಕಂದರಾಬಾದಿನಿಂದ ಫಲಕ್‌ನುಮಾಗೆ ನಿಧಾನವಾಗಿ ಗಮಿಸುತ್ತಿರುವ ಲೋಕಲ್‌ಗಾಡಿಯನ್ನು ನೋಡಿದಾಗ ನನಗೆ ಕೆಲವೊಮ್ಮೆ ನೆನಪಾಗುವುದು- ಮಳೆಗಾಲದಲ್ಲಿ ನಮ್ಮೂರ ಅಡಿಕೆ ತೋಟಗಳಲ್ಲಿ ಕಾಣಿಸುವ ಸಾವಿರಕಾಲಿನ ಬಂಡಿಚೋರಟೆಗಳು: ತಿರುವುಗಳನ್ನು ಅವು ಹೇಗೆ ಬಳಸುತ್ತವೆ, ಸರಳ...

ಟ್ಯಾಂಕ್‌ಬಂಡಿನ ಕಳ್ಳರು

ಟ್ಯಾಂಕ್‌ಬಂಡಿನ ಕಳ್ಳರನ್ನು ಸೃಷ್ಟಿಸಿ ಕದಿಯಲು ಬಿಟ್ಟೆ ನಾನು, ಅವರಿಗೆ ಪರ್ಸ್ ಉಡಾಯಿಸುವ ಕೈಚಳಕವನ್ನು ಕಲಿಸಿದೆ. ತುಂಬಾ ಬುದ್ದಿವಂತರು.  ಹೇಗಾದರೂ ತಪ್ಪಿಸಿಕೊಳ್ಳುತ್ತಿದ್ದರು. ಅವರಲ್ಲಿ ಒಬ್ಬನಿಗೆ ಆಮೆಗಳೆಂದರೆ ಪ್ರೀತಿ.  ಇನ್ನೊಬ್ಬ ಬಹಳ ಹಿಂದೆ ಒಂದು ಹುಡುಗಿಯನ್ನು ಪ್ರೇಮಿಸಿದ್ದ....

ಪೆಂಟಯ್ಯನ ಅಂಗಿ

ಇದ್ದಿಲಂಗಡಿ ಕೆಲಸದ ಪೆಂಟಯ್ಯನಿಗೆ ಇದ್ದುದು ಒಂದೇ ಒಂದು ಅಂಗಿ.  ಗಿರಾಕಿಗಳ ಮನೆಗೆ ಇದ್ದಿಲು ಸಪ್ಲೈ ಮಾಡುವಾಗಲೂ ರಾತ್ರಿ ನಿದ್ದೆ ಮಾಡುವಾಗಲೂ, ಪೇಟೆಕಡೆ ಹೋಗುವಾಗಲೂ ಇದೇ ಅಂಗಿ.  ಮೂಸಿನದಿಯ ಕೊಚ್ಚೆಯಲ್ಲಿ ಅದ್ದಿ ತೆಗೆದಂಥ ಬಣ್ಣ, ಇದರಿಂದ...

ಆರ್ಟ್ಸ್ ಕಾಲೇಜಿನ ಹಾದಿಯಲ್ಲಿ

ಇಲ್ಲಿ ಗುಲ್ಮೊಹರ್‍ ಹೂವುಗಳು ದಟ್ಟವಾಗಿ ಬೀಳುತ್ತಿವೆ. ತಂಪಾದ ಗಾಳಿಗೆ ಮುಂಗುರುಳುಗಳೂ ಇಷ್ಟಬಂದಂತೆ ಹಾರುತ್ತಿವೆ. ಅವಗುಂಠನ ಹಾಕಿದ ಯುವತಿಯರ ಕಣ್ಣುಗಳಾದರೋ ಏನೋ ಹೇಳುವ ಹಾಗಿವೆ. ಮರದ ಕೆಳಗೆ ಕುಳಿತ ಹುಡುಗನೂ ಹುಡುಗಿಯೂ ಸುಮ್ಮಸುಮ್ಮನೆ ನಗುತ್ತಿದ್ದಾರೆ. ಬಸ್...

ಅಬೀಡ್ಸಿನಲ್ಲಿ ರಸ್ತೆ ದಾಟುವುದು

ನಿಮಗೀಗ ಬುಲ್‌ಚಂದನ ವಸ್ತ್ರದ ಮಳಿಗೆಗೆ ಹೋಗಬೇಕಲ್ಲವೆ? ವೈವಿಧ್ಯವನ್ನು ಅರಸುವ ನೀವು ಸರಿಯಾದ ಅಂಗಡಿಯನ್ನೇ ಆರಿಸಿದಿರಿ.  ಈಗ ನಾವು ಈ ರಸ್ತೆಯನ್ನು ದಾಟಬೇಕಾಗಿದೆ. ತುಸು ತಾಳಿರಿ.  ಸಂಜೆ ಯಾವಾಗಲೂ ಇಲ್ಲಿ ಜನಸಂದಣಿ ಜಾಸ್ತಿ. ಎಡಗಡೆಯಿಂದ ಸಾಲುಗಟ್ಟಿ...

ಸಾಲಾರ್‌ಜಂಗ್ ಮ್ಯೂಸಿಯಂನಿಂದ

ನಮ್ಮ ಹಿಂದಿನವರಿಗೆ ವಸ್ತುಗಳು ಬರೇ ಸಾಧನಗಳಾಗಿರಲಿಲ್ಲ ವಸ್ತುಗಳಾಗಿದ್ದವು. ಉದಾಹರಣೆಗೆ ಕನ್ನಡಿ ಬರೇ ಮುಖ ನೋಡುವುದಕ್ಕಾಗಿರಲಿಲ್ಲ ಅದಕ್ಕೊಂದು ದೊಡ್ಡ ಫ್ರೇಮು ಬೇಕಿತ್ತು.  ಫ್ರೇಮಿಗೆ ಹಲವು ಬಳ್ಳಿಗಳೂ, ಬಳ್ಳಿಗೆ ಹಲವು ಹೂವುಗಳು. ನಮಗೆ ಬರೇ ಕನ್ನಡಿ ಸಾಕು-ಅದನ್ನು...

ಅವರು

ಅವನ ಅನೇಕ ಹೆಂಡಂದಿರಿದ್ದರಲ್ಲ ಅವರೇನಾದರು? ಅವರೆ?  ಕೆಲವರು ಅವರವರ ಹುಟ್ಟೂರಿಗೆ ಹೊರಟುಹೋದರು.  ಇನ್ನು ಯಾರನ್ನೋ ಆಶ್ರಯಿಸಿದರು.  ಕೆಲವರು ಚಾರ್‌ಮಿನಾರಿನ ಸಮೀಪ ಮಾಲೆಗಳನ್ನು ಕಟ್ಟಿ ಮಾರತೊಡಗಿದರು. ಹಳೆ ನಗರದ ಧೂಳು ಎಲ್ಲಾ ಹೂವುಗಳ ಮೇಲೂ ಕುಳಿತಿದೆ....

ಹವೇಲಿ

೧ ಈಗ ಈ ಹವೇಲಿಯಲ್ಲಿ ಯಾರೂ ಇಲ್ಲ.  ಇದು ಯಾರಿಗೆ ಸೇರಿದ್ದೊ ಯಾರಿಗೂ ತಿಳಿಯದು.  ಹೊರಗೆ ಬೀದಿಯಲ್ಲಿರುವ ಪಾನ್‌ವಾಲ ಮುದುಕನ ಕಣ್ಣುಗಳಲ್ಲಿ ಇದರ ಚರಿತ್ರೆ ಇಳಿದುಹೋಗಿರುವಂತಿದೆ.  ಆದರೆ ಅವನೇನೂ ಹೇಳಲೊಲ್ಲ.  ವೀಳ್ಯದೆಲೆ ಹೊಸೆಯುವ ಅವನ...

ರಾಮುಲುವೂ ಸೋಮುಲುವೂ

೧ ನಿರ್ಜನವಾದ ಬಯಲು ಹೊತ್ತಾದರೋ ಕಹಿಬೇವಿನ ಹೆಮ್ಮೆರಗಳ ಹಿಂದೆ ಮರೆಯಾಗುತ್ತಿದೆ ಒಂದಿಷ್ಟು ಇಳಿಬೆಳಕು ಮಾತ್ರ ಪುಡಿ ಪುಡಿಯಾದ ಒಣಹುಲ್ಲಿನ ಮೇಲೆ ಸಮಾನಾಂತರವಾಗಿ ಬಿದ್ದಿದೆ ಅಷ್ಟರಲ್ಲಿ ಎಡಗಡೆಯಿಂದ (ಅಥವಾ ಬಲಗಡೆಯಿಂದ) ರಾಮುಲುವೂ ಸೋಮುಲುವೂ ಅನುಮಾನಿಸುತ್ತ ಅನುಮಾನಿಸುತ್ತ...