ಅಬೀಡ್ಸಿನಲ್ಲಿ ರಸ್ತೆ ದಾಟುವುದು

ನಿಮಗೀಗ ಬುಲ್‌ಚಂದನ ವಸ್ತ್ರದ ಮಳಿಗೆಗೆ ಹೋಗಬೇಕಲ್ಲವೆ?
ವೈವಿಧ್ಯವನ್ನು ಅರಸುವ ನೀವು ಸರಿಯಾದ ಅಂಗಡಿಯನ್ನೇ
ಆರಿಸಿದಿರಿ.  ಈಗ ನಾವು ಈ ರಸ್ತೆಯನ್ನು ದಾಟಬೇಕಾಗಿದೆ.
ತುಸು ತಾಳಿರಿ.  ಸಂಜೆ ಯಾವಾಗಲೂ ಇಲ್ಲಿ ಜನಸಂದಣಿ ಜಾಸ್ತಿ.
ಎಡಗಡೆಯಿಂದ ಸಾಲುಗಟ್ಟಿ ಬರುತ್ತಿರುವ ಈ ಮೋಟಾರು
ವಾಹನಗಳು ಹೋಗಿಕೊಳ್ಳಲಿ.  ಬಲಗಡೆಯಿಂದಲೂ ಬರುತ್ತಿವೆ.
ಅಬೀಡ್ಸಿನಲ್ಲಿ ರಸ್ತೆ ದಾಟುವುದೆಂದರೆ ಪ್ರಾಣವನ್ನು
ಜೇಬಿನಲ್ಲಿ ಹಾಕಿಕೊಂಡಿರಬೇಕು. ನೋಡಿದಿರ,
ಆ ಡಬಲ್ ಡೆಕ್ಕರಿನ ಕಿಟಕಿಗಳು ಬುಲ್‌ಚಂದನ ಬೆಳಕುಗಳನ್ನು
ಹೇಗೆ ತುಂಡರಿಸಿ ಹೋದವು!  ಆದರೆ ಅವು ಮತ್ತೆ
ಜಗಜಗಿಸುತ್ತಿವೆ.  ಬುಲ್‌ಚಂದನ ಬೆಳಕುಗಳೆ ಹಾಗೆ.

ಈಗ ನುಗ್ಗಿಬಿಡಿ.  ಈ ಕಾರು ಮತ್ತು ಆ ಸ್ಕೂಟರಿನ ನಡುವೆ
ರಸ್ತೆ ದಾಟಿಬಿಡುವ.  ಕೇಳಿಯೂ ಕೇಳಿಸದಂತೆ ಇದ್ದ ಸದ್ದು
ಸ್ಕೂಟರಿನವನು ಬಯ್ದದ್ದು.  ಪೋಲೀಸನ ಬಿಗಿಲಿನಂತೆ ಕಿರುಚಿದ್ದು
ಕಾರಿನ ಬ್ರೇಕು.  ಅಂತೂ ದಾಟಿದ ಮೇಲೆ ಹೇಗನ್ನಿಸುತ್ತಿದೆ
ನಿಮಗೆ?  ನಿರಂತರವಾದ ಈ ರಸ್ತೆಯನ್ನು ತುಂಡರಿಸಿಬಿಟ್ಟೆವು
ಎಂದೆ?  ಆದರೆ ಎಷ್ಟು ಬೇಗ ಅದು ಮತ್ತೆ
ಒಂದಾಯಿತು ನೋಡಿ-ನಾವು ದಾಟಿಬಂದದ್ದೇ ಇಲ್ಲ
ಎಂಬಂತೆ.  ಅಬೀಡ್ಸಿನ ರಸ್ತೆಗಳೆ ಹಾಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತಃಕರಣ
Next post ಬಾ ಮತ್ತೊಮ್ಮೆ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…