ದೂರದ ಮೂಸಿಹೊಳೆಯ ಸಂಕದ ಮೇಲೆ
ಸಿಕಂದರಾಬಾದಿನಿಂದ ಫಲಕ್‌ನುಮಾಗೆ ನಿಧಾನವಾಗಿ
ಗಮಿಸುತ್ತಿರುವ ಲೋಕಲ್‌ಗಾಡಿಯನ್ನು ನೋಡಿದಾಗ ನನಗೆ
ಕೆಲವೊಮ್ಮೆ ನೆನಪಾಗುವುದು-
ಮಳೆಗಾಲದಲ್ಲಿ ನಮ್ಮೂರ ಅಡಿಕೆ ತೋಟಗಳಲ್ಲಿ ಕಾಣಿಸುವ
ಸಾವಿರಕಾಲಿನ ಬಂಡಿಚೋರಟೆಗಳು: ತಿರುವುಗಳನ್ನು ಅವು
ಹೇಗೆ ಬಳಸುತ್ತವೆ, ಸರಳ ರೇಖೆಗಳನ್ನು ಹೇಗೆ
ಗುರುತಿಸುತ್ತವೆ, ಸಮಾನಾಂತರಗಳನ್ನು ಹೇಗೆ
ಬಿಡಿಸುತ್ತವೆ-
*****