ಮಲಗು ಮಲಗೆನ್ನೆದೆಯ ಮಂಟಪದ ಮೂರ್ತಿ

ಮಲಗು ಮಲಗೆನ್ನೆದೆಯ ಮಂಟಪದ ಮೂರ್ತಿ ಮುಗಿಲಿನಲಿ ಮೋಡಗಳು ಕೂಡುತಿವೆ ಭರದಿ! ಜಗದ ಕೊನೆಯನು ತಂದ ದೂತರಂತೆ ಪ್ರಳಯ ರುದ್ರನ ಅಂಶ ತಾಳ್ದರಂತೆ ಗುಡುಗು ಸಿಡಿಲುಗಳೆರಗಿ ಜಗವ ನಡುಗಿಸುತಿಹವು. ನೀನೇಳಬೇಡ, ಮಗು, ಉಷೆಯೆ ಮಲಗಿನ್ನು! ನಾಳೆಯಂತೊ...

ಇನ್ನೆಲ್ಲಿ ಬಾಳಿನುಷೆ?

ನಾಲ್ಕು ದಿನಗಳ ಕಾಲ ಬೇರೆಯೂರಿಗೆ ಸಾಗಿ ನಿನ್ನ ಕನಸನು ಮರೆತು ನನ್ನಂತೆ ನಾನಿದ್ದು ಮತ್ತೆ ಹಿಂದಿರುಗುವೆನು, ಅಗಲಿಕೆಯ ದಿನಗಳಲ್ಲಿ ಇನಿತಾದರೂ ನಿನ್ನ ನೆನಪುಗಳು ಭುಗಿಲೆದ್ದು ಮನವ ಕೆರಳಿಸದಿರಲಿ, ವಿರಹ ಮಾಡಲಿ ನಿದ್ದೆ! ಮೌನ ಮಸಣದಲೆನ್ನ...

ಬೆಳಗು ನನ್ನ ಉಷೆ!

ಸುಖದುಃಖಗಳ ನಡುವೆ ಸಿಕ್ಕಿ ಸಂತಾಪದಲಿ ಕಾವಿನಲಿ ಬೇಯುತಿದೆ ನನ್ನ ಬಾಳು; ಇದನೆಲ್ಲ ಮರೆಸುತ್ತ ಒಲವ ಬೆಳಕಿನಲಿನ್ನ ಹೃದಯವನು ಅರಳಿಸುತ ಬೆಳಗು ನನ್ನ ಉಷೆ! ಬಾಳ ಭೀಕರ ಇರುಳ ಕಾತರದಿ ಕೂಗಿದೆನು ಹೃದಯ ಬರಿದಾಗಿಹುದು ಮಂಜು...

ಒಂದೆ ಒಲವು

ತೋಟದಲಿ ಬಳುಕುತಿಹ ಬಳ್ಳಿಯೊಳಗರಳುತಿಹ ಎಳೆಮೊಗ್ಗುಗಳಿಂದ ಚಿವುಟಿ ಕೈಯಲಿ ಹಿಡಿದು ಹಸುಗೂಸ ಹಾಲ್ಕೆನ್ನೆಯಂತೆ ಮಿದುವಾಗಿರುವ ದನಗಳನು ಕೆನ್ನೆಗಳಿಗೊತ್ತಿಕೊಂಡೆ ! ಗಳಿಗೆಗಳು ಉರುಳಿದುವು. ಕಾವಿನಲಿ ಎಳೆಮೊಗ್ಗು ಬಸವಳಿದು ಬಾಡುತಲಿ ನಿರ್ಜೀವ ತರಗಾಯ್ತು. ಹೃದಯದೊಳ ಕೊರಗಿನಲಿ ಕಂಗಳಲಿ ಹನಿಯಿಳಿದು...

ಆ ಸಮುದ್ರದಾಚೆಯಲ್ಲಿ

ಆ ಸಮುದ್ರದಾಚೆಯಲ್ಲಿ ಮುಗಿಲು ನೆಲವ ಕೂಡುವಲ್ಲಿ ಹಿರಿಯಲೆಗಳ ಮಡಿಲಿನಲ್ಲಿ ದೀಪವೊಂದಿದೆ ನಿನ್ನ - ಜೀವವಲ್ಲಿದೆ ! ನೆಲವಾಗಸ ಸೇರುವಂತೆ ನಮ್ಮಿಬ್ಬರ ಒಲವಿನ ಜತೆ ಆ ಕೊನೆಯಲ್ಲಿ ಒಂದೆ ಅಂತೆ ನನ್ನ ಕನಸದು ಬರಿಯ -...

ಮುರುಕು ಮಂಟಪ

ಮುರುಕು ಮಂಟಪದಲ್ಲಿ ಅಳಿದುಳಿದ ಎಡೆಯಲ್ಲಿ ನಿನ್ನ ರೂಪವು ಬಂದು, ಕಳೆದ ಕಾಲದ ನನಸ ಕೂಡ ಆಡುತಲಿಹುದು ಕಣ್ಣ ಮುಚ್ಚಾಲೆ! ಬೇಡ ಬೇಡೆಂದರೂ, ಕೇಳದೆಯೆ, ತಾಳದೆಯೆ, ಓಡುತಿದೆ ನಿನ್ನೆಡೆಗೆ ಮನಸು, ಕನಸಿನ ನನಸು, ಮರೆಯಾದ ನಿನಗಾಗಿ...

ನೋಡು ಉಷೆ !

ನೋಡು ಉಷೆ! ಸುತ್ತೆಲ್ಲ ಬೆಡಗು ಸೂಸಿದೆ ತುಂಬಿ, ಚಂದ್ರಮನ ಎಳಗಿರಣಗಳ ತೋಳತೆಕ್ಕೆಯಲಿ ಮುದ್ದು ಮೋಡವು ನಕ್ಕು ನಲಿಯುತಿರೆ, ಮರಿದುಂಬಿ ಹೂಹೃದಯದೊಲವಿನಲಿ ಕುಣಿದಾಡುವಂದದಲಿ! ತಂಗಾಳಿ ಮರದೆಲೆಯ ಮುಟ್ಟಿಯೂ ಮುಟ್ಟದೊಲು, ಮೃದುವಾಗಿ ಮುತ್ತಿಟ್ಟು, ಮುಂದೆ ಸಾಗುತ್ತಲಿದೆ. ಆ...

ಇರುಳಾಗಲೆ ಕವಿದಿದೆ ಗೆಳತಿ

ದಾರಿಯು ಇನಿತಾದರು ಕಳೆದಿಲ್ಲ, ದೂರದ ಊರಿನ ಸುಳಿವೇ ಇಲ್ಲ, ಹಸುರು ಬಯಲುಗಳೊ ಬಾಳಿನೊಳಿಲ್ಲ, ಇರುಳಾಗಲೆ ಕವಿದಿದೆ, ಗೆಳತಿ! ರವಿ ಮುಳುಗಿದನದೋ ದುಗುಡದ ಕಡಲಲಿ, ಮೋಡದ ದಿಬ್ಬಣ ಆಗಸದೊಡಲಲಿ ಅಬ್ಬರಿಸಿದೆ, ಭಯ ತುಂಬುತ ಸಿಡಿಲಲಿ ಇರುಳಾಗಲೆ...

ಆ ಕಾಲ ಅಳಿದಿಹುದು

ಆ ಕಾಲ ಅಳಿದಿಹುದು, ಮತ್ತೆ ಬಾರದು, ಮಗುವೆ. ಮುಳುಗಿಹುದು ಮಂಜಾಗಿ ಚಿರಕು ಅಳಿದಿಹುದು. ನಿನ್ನೆಯೆಡೆ ನೋಡುವೆವು ಎದೆಗೆಟ್ಟು ಕಾಣುವೆವು- ನಾನು ನೀನೂ ಕೂಡಿ- ಜೀವಕಾರ್ನದಿಯೊಳಗೆ ಕಂಡ ಕನಸಾಸೆಗಳ ಮುರುಕು ರೂಪಗಳು ಕಂಗೆಟ್ಟು, ಮಂಜಿಟ್ಟು ಮಸಕಿನಲಿ...

ಉಷೆಯೆನ್ನ ಬಾಳ ನಗೆ

ಬಲು ಕಾಲ ಸುತ್ತುತಲಿ ಬಳಲಿದೆನು ಬಲು ದೂರ ಬಂದಿಹೆನು ಎಡಹಿದೆನು ಎನಿತೆನಿತೊ ದಾರಿಯಲಿ ಕೊನೆಗಿಲ್ಲಿ ನಿಂದಿಹೆನು! ನಾಳೆ ಬಾಳೆಂತಹುದೋ ಅರಿಯೆನದ ಇಂದೊಂದೆ ನಿಜವೆನಗೆ; ಅದನೆನಗೆ ತೋರಿಸುತ ಬೆಳಗಿಸಿದ ಉಷೆಯನ್ನ ಬಾಳ ನಗೆ! *****