ಸುತ್ತ ಹಬ್ಬುತಿದೆ ತುಳಸೀ ಪರಿಮಳ

ಸುತ್ತ ಹಬ್ಬುತಿದೆ ತುಳಸೀ ಪರಿಮಳ ಸಣ್ಣಗೆ ಗೆಜ್ಜೆ ದನಿ, ಕೋಗಿಲೆ ಉಲಿಯೋ ಕೊಳಲೊ ಕಾಣೆ ಮೋಹಕ ಇನಿಯ ದನಿ. ಹಗಲಿನ ಧಗೆಯಲಿ ನೀಲಿಯ ಮುಗಿಲು ಇಣುಕಿ ಹಾಯುವಂತೆ ಯಾರದೊ ನೆರಳೋ ಹೊಂಚಿ ಆಡುತಿದೆ ಗುರುತೇ...

ನನ್ನ ಮನದಾಳಕ್ಕೆ

ನನ್ನ ಮನದಾಳಕ್ಕೆ ನೀನು ಇಳಿದುದೆ ಚಂದ ಸುಳಿದಂತೆ ಮಲೆನಾಡ ಗಾಳಿ ಗಂಧ ಎಳೆಗರಿಕೆ ಮೇಲೇಳುವಂತೆ ಸುಡು ನೆಲದಿಂದ ಸಂಜೆ ಹಣ್ಣಾದಂತೆ ಬಾನ ತುಂಬ ನೀ ಸುಳಿವ ಗಳಿಗೆ ಪ್ರೀತಿಯ ಹೊಳೆಗೆ ನೆರೆಬಂತು ಬಣ್ಣ ಬದಲಾಗಿತ್ತು...

ಕರಗುವ ಇರುಳಿನ ಹಣೆಯಲ್ಲಿ

ಕರಗುವ ಇರುಳಿನ ಹಣೆಯಲ್ಲಿ ಮೂಡಲ ಗಿರಿಯ ಮಣೆಯಲ್ಲಿ ಹೂಳೆಯುವ ರತ್ನದ ಹಣತೆಯನು ಹಚ್ಚುವರಾರು ಮರೆಯಲ್ಲಿ? ಬೆಟ್ಟವು ಬಾನಿನ ಕಡೆಗೇಕೆ ತೊರೆಗಳು ತಗ್ಗಿನ ಕಡೆಗೇಕೆ? ನಭದಲಿ ತೇಲುವ ನೀಲಿ ಹಂಡೆಗಳು ಮಣ್ಣಿಗೆ ಉರುಳುವುದೇತಕ್ಕೆ? ಹೂವನು ಚಿಮ್ಮುವ...

ನಿನ್ನ ಗಾನದ ಸವಿಗೆ

ನಿನ್ನ ಗಾನದ ಸವಿಗೆ ನನ್ನೆದೆಯ ಬಾನಿನಲಿ ಆಡುವುವು ಮುಸ್ಸಂಜೆ ಮುಗಿಲು; ಹೊಂಬಿಸಿಲ ಕಾಂತಿಯಲಿ ಹಾಯುವುವು ಹಕ್ಕಿಗಳು ಬೆರೆಸುತ್ತ ಮುಗಿಲಲ್ಲಿ ನೆರಳು ಎದೆಯ ಗಾಯಗಳೆಲ್ಲ ಉರಿಯಾರಿ ಮಾಯುವುವು, ಹಾಯೆನಿಸಿ ತಂಪಾಗಿ ಜೀವ; ಕನಸುಗಳ ಆಕಾಶ- ಗಂಗೆಯಲಿ...

ಮರವು ತೂಗಾಡಿದವು

ಮರವು ತೂಗಾಡಿದವು ಬಳ್ಳಿ ಓಲಾಡಿದವು ಹೂವು ನಕ್ಕವು ಕುಲುಕಿ ಮೈಯನೆಲ್ಲ, ಮಂದಮಾರುತ ಸುಳಿದು ಗಂಧವನು ಹಂಚಿದನು ನೀ ಬಂದೆ ಎನ್ನುವುದು ತಿಳಿಯಲಿಲ್ಲ ನದಿ ಹಾಡಿ ಓಡಿತು, ಬೆಳುದಿಂಗಳಾಡಿತು ಮೆಚ್ಚಿ ಸವರಿತು ಬೆಳಕು ಮುಗಿಲ ಗಲ್ಲ,...

ಚಿಕ್ಕೆಯಾಗಿ ಒಳಗೆ ಹೊಳೆದು

ಚಿಕ್ಕೆಯಾಗಿ ಒಳಗೆ ಹೊಳೆದು ತುಟಿಗೆ ಬಾರದವನೆ, ಮಕ್ಕಳ ನಗೆಗಣ್ಣಿನಲ್ಲಿ ಬಾಗಿಲು ತೆರೆದವನೆ, ಉಕ್ಕುವ ಹೂಚೆಲುವಿನಲ್ಲಿ ಸೊಕ್ಕುವ ತೆನೆ ಪಯಿರಿನಲ್ಲಿ ಸಿಕ್ಕಿದಂತೆ ನಟಿಸಿ ಸಿಗದೆ ಎಲ್ಲೋ ಸಾಗುವವನೆ! ಆಡುವ ಮಗು ಓಡಿ ಬಂದು ತೊಡೆಯನೇರಿದಾಗ, ಗೂಡ...

ಗಾಳಿಗೆ ತೂಗಾಡುವ ಬಿದಿರ ಚಿಂತೆ

ಗಾಳಿಗೆ ತೂಗಾಡುವ ಬಿದಿರ ಚಿಂತೆ ಇಂತು ಗಾಳಿಯನೇ ಆಡಿಸುವ ಬಾಳಾಗುವುದೆಂತು? ಸಿಕ್ಕಿಬಿದ್ದೆ ಮೆಳೆಯಲಿ ಮೈಯೆಲ್ಲಾ ಮುಳ್ಳು ಬಾ ಎನ್ನದ, ಕೋ ಎನ್ನದ ಬಾಳಿದು ಹಸಿ ಸುಳ್ಳು ಪಾದ ಹುಗಿದು ಮಣ್ಣಲಿ ಕನಸಾಡಿದೆ ಕಣ್ಣಲಿ ಕಾಯುತಿರುವೆ...

ಉರಿಯುವ ಚಂಡನು ನೀಲಿನಭದಲ್ಲಿ

ಉರಿಯುವ ಚೆಂಡನು ನೀಲಿನಭದಲ್ಲಿ ಇರಿಸಿದವರು ಯಾರು? ಹಗಲಿನ ನಾಟಕ ಮುಗಿಸಿ ಕರಿತೆರೆ ಸರಿಸುವವರು ಯಾರು? ಅಂಧಕಾರದಲಿ ಚಂದ್ರನ ಹಣತೆಯ ಹಚ್ಚುವವರು ಯಾರು? ಬಾನಿನ ಮೈಯನು ಮುಗಿಲ ವಸ್ತ್ರದಲಿ ಮುಚ್ಚುವವರು ಯಾರು? ಸಣ್ಣ ಗಿಡದಲು ಬಣ್ಣದ...

ಏನು ಸಂಯಮ ನಿನ್ನದು!

ಏನು ಸಂಯಮ ನಿನ್ನದು ಎಂಥ ತಾಳ್ಮೆಯು ನಿನ್ನದು! ಎಲ್ಲ ಕಡೆಯೂ ಇರುವ ನಿನ್ನನೆ ಅಲ್ಲಗಳೆದರೂ ತಾಳ್ವುದು, ನಿನ್ನ ಕಾಣದ ಬೆರಳು ಸೋಕದೆ ಹೂವು ದಳಗಳ ತೆರೆವುದೇ? ನಿನ್ನ ಸನ್ನೆಯ ಆಜ್ಞೆ ಬಾರದೆ ಗಾಳಿ ಕಂಪನು...

ಬಾನಿಂದೇನೋ ಇಳಿಯುತಿದೆ

ಬಾನಿಂದೇನೋ ಇಳಿಯುತಿದೆ ಬುವಿಯೆದೆಯೊಳಕ್ಕೆ ಕಲ್ಪನೆ ಏನನೊ ಸೇರಿಸಿದೆ ಕಾಣುವ ದೃಶ್ಯಕ್ಕೆ ನದಿಯೆದೆಯಲ್ಲಿ ಮುಗಿಲಿನ ಕವಿತೆ ಹುಣ್ಣಿಮೆ ಇರುಳಲ್ಲಿ, ಬಾನಿನ ಹಾಡು ಮೂಡಿತು ಹೇಗೆ ಭೂಮಿಯ ಶ್ರುತಿಯಲ್ಲಿ? ನೋಟಕೆ ಶ್ರವಣಕೆ ತಿಳಿಯದ ಏನೋ ಕಾಡಿದೆ ಎದೆಯಲ್ಲಿ...