ಮೀರಬಾರದಲ್ಲ ಹೊತ್ತು

ರಾಜಕುಮಾರನ ಹೊತ್ತ ಕುದುರೆಗೆ ಉಸಿರು ಬಿಗಿಹಿಡಿದು ನೇರ ಹಾದಿಗೆ ಕಣ್ಣು ಜಡಿದು ಸುಮ್ಮನೆ ಓಡುವ ಉಮೇದು. ನೆಲದ ಆಳಗಳನರಿಯದ ಅದರ ತುಡಿತಕ್ಕೆ ಸ್ಪಂದಿಸದ ನಿಂತಲ್ಲೇ ಕ್ಷಣ ನಿಲ್ಲದ ಚಪಲಚಿತ್ತ ಕುದುರೆ ಕಾಲುಗಳಿಗೋ ಚಕ್ರ. ಒಮ್ಮೆಯೂ...

ಬಗೆ ಬಗೆ

ಮೆದುಭೂಮಿ ಹದ ಗಾಳಿ ಬೇಕಷ್ಟು ಬೆಳಕು ಸಾಕಷ್ಟು ನೀರು ಎಲ್ಲಾ ಇದ್ದೂ ಮೊಳಕೆಯೊಡೆಯಲೋ ಬೇಡವೋ? ಈಗಲೋ ಆಗಲೋ ಅನುಮಾನದಲ್ಲೇ ಸ್ತಬ್ದಗೊಂಡ ನುಗ್ಗೆಬೀಜ. ಯಾವ ಪರುಷಸ್ಪರ್ಶವೋ ಆಳಕ್ಕೆ ಬೇರನಿಳಿಸಿ ನೆಲ‌ಒಡಲು ಸೀಳಿ ಮೊಳಕೆಯೊಡೆಸಿ ಬುರಬುರನೆ ಎತ್ತರಕ್ಕೇರಿ...

ಕಾರ್ಯಕಾರಣ ಸಂಬಂಧ

ಇರುಳು ಸುಮ್ಮನೆ ಬೆಳಕಾಗಿ ಅರಳುವುದಿಲ್ಲ ಮುಗಿಲು ಸುಮ್ಮನೆ ಮಳೆ ಸುರಿಸುವುದಿಲ್ಲ ಶಿಲುಬೆಗೇರಿದ ಕತ್ತಲು ನೋವುಗಳಿಗೆ ಮೈಯೊಡ್ಡಿ ಹದ ಬೆಂದು ಬೆಳಕಾಗಬೇಕು ತಕ್ಕಡಿಯಲಿ ಕೂತ ತುಂಬು ಬಸುರಿನ ಮುಗಿಲು ಹಿಂಸೆಯನುಭವಿಸುತ್ತಲೇ ಈಗಲೋ - ಆಗಲೋ ಅನುಮಾನಿಸುತ್ತಾ...

ನಿರಂತರ

ಶತಶತಮಾನಗಳಿಂದ ಧಗಧಗನೆ ಹೊತ್ತಿ ಉರಿಯುತ್ತಲೇ ಇದೆ ಈ ಅಗ್ನಿಕುಂಡ. ಬೇಯುತ್ತಲೇ ಇದೆ ತಪ್ಪಲೆಯೊಳಗೆ ಅನ್ನವಾಗದ ಅಕ್ಕಿ! ಮತ್ತೆ ಮತ್ತೆ ಸೌದೆಯೊಟ್ಟಿ ಉರಿ ಹೆಚ್ಚಿಸುವ ಕಾಯಕ. ತಪ್ಪಲೆಗೆ ನೀರು ಸುರಿದು ತಳ ಸೀಯದಂತೆ ಕಾಯುವ ಕರ್ಮ...

ವಿಸ್ಮಯ!

ಪರಮಾವಧಿ ಬಿಂದುವಿನ ಕಾದೆಣ್ಣೆಗೆ ಬಿದ್ದರೂ ಚೀಕಲು ಸಾಸಿವೆ ಎಂದಿಗೂ ಸಿಡಿಯುವುದಿಲ್ಲ ಬದಲಿಗೆ ಸುಟ್ಟು ಕರಕಲಾಗುತ್ತದಷ್ಟೇ! ನಿಜ ಗರಿಷ್ಟ ಕಾವಿಗೇರಿದ ನೀರು ಕೊತಕೊತನೆ ಕುದಿಯುತ್ತದೆ ಆದರೆ ಹಾಲು... ಸದ್ದಿಲ್ಲದೇ ಉಕ್ಕುತ್ತದೆ! ಒಲೆಯ ಮೇಲೆ ಗಂಟೆಗಟ್ಟಲೆ ಕಾದ...

ನಟ್ಟಿರುಳಿನಲ್ಲೊಂದು ಸಂವಾದ

ಬೆಳಕು ಬೇಡವಾದರೆ ಇಲ್ಲ ಇಲ್ಲಿ ಏನೂ ಆಗಿಯೇ ಇಲ್ಲ ಆಗಿದ್ದು ಆಟವಷ್ಟೇ ಲೆಕ್ಕವಲ್ಲ ಜಮಾ ಆಗಿಲ್ಲ ಎನ್ನುತ್ತಾ ಯಾವುದಕ್ಕೂ ಬದ್ಧವಾಗದೇ ಎಲ್ಲಾ ಕೊಡವಿ ಎದ್ದು ಹೋಗಿಬಿಡಬಹುದು ಕತ್ತಲು ಬೇಡದ್ದೆಲ್ಲಾ ಒಪ್ಪಿ ತೋಳ್ತೆರೆದು ಅಪ್ಪಿ ತುಂಬಿ...