ಎದುರಾಳಿಯಾಗರು

ಉಕ್ಕಿ ಹೊರ ಬರಲು ಯತ್ನಿಸುವ ಕಣ್ಣೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ, ನಿಟ್ಟುಸಿರುಗಳ ನುಂಗಿ, ಹಸಿರಿನುಸಿರಿಗೆ ಹಂಬಲಿಸಿ, ಹಳದಿ ಕಾಯಿಲೆ ಓಡಿಸಿದ ಜೀವ ಸೂತ್ರ ಸ್ವತಂತ್ರ. ಮುಚ್ಚಿರುವ ಮುಸುಕಿನ ಅಡಿಯಲಿ ಹಿಡಿದಿಟ್ಟ ಬಿಗಿಯುಸಿರು ಸ್ವತಂತ್ರ ಕೋಗಿಲೆಯ...

ಅಸ್ತಿತ್ವ

ನನ್ನ ಮನೆಯ ಒಡತಿ ನೀನು, ನನ್ನ ಮಕ್ಕಳ ತಾಯಿ ನೀನು, ಮೌನವಾಗಿ ತಲೆ ತಗ್ಗಿಸಿ ಎಲ್ಲರ ಸೇವೆ ಮಾಡುವ ನಿನಗೆ ಸ್ವರ್ಗ ಲೋಕದಲ್ಲಿ ಸ್ಥಾನ ಭದ್ರ ಮರಿಯಮ್, ಖತೀಜಾ ಹಾಗೂ ಬೀವಿ ಫಾತೀಮಾರಂತೆ ನಾವು...

ಕನಸು ವಾಸ್ತವ

ಕಡೆದು ನಿಲ್ಲಿಸಲಿಲ್ಲ ನಾನು ಗಾಳಿ ಗೋಪುರದ ಗೋಡೆ, ಕಂಬಗಳ ನೆಲ ಮುಗಿಲ ಗಾಳಿಯಲ್ಲಿ ಕಟ್ಟಲಿಲ್ಲ ನಾನು ತಾಜಮಹಲುಗಳ.. ಕನಸಿನ ಬುತ್ತಿ ಬಿಚ್ಚಲಿಲ್ಲ. ಸಾಮ್ರಾಜ್ಯಗಳ ನಾನು ಉರುಳಿಸಲಿಲ್ಲ. ಮತ್ತೆ ಎತ್ತರಕೆ ನಿಲ್ಲಿಸಲಿಲ್ಲ. ಮಹಲುಗಳ ಮಜಲುಗಳ ರಾಜರುಗಳ...

ನನ್ನವರು

ರಾಜರು ಕಟ್ಟಿಸಿದ ಅರಮನೆ ಮಹಲು, ಗುಡಿ, ಗೋಪುರ, ಮಸೀದಿ, ಕೋಟೆ, ಕೊತ್ತಳಗಳಿಗೆ ಇಟ್ಟಿಗೆ, ಗಾರೆ, ಕಲ್ಲುಗಳ ಹೊತ್ತು ಹುಡಿಯಾಗಿ ಕೊನೆಗೆ ಭೂತಾಯಿ ಒಡಲು ಸೇರಿದವರು. ಇಲ್ಲವೆ ರಾಜರು ಘೋಷಿಸಿದ ಯುದ್ಧಗಳಿಗೆ ಮರು ಮಾತಿಲ್ಲದೆ ಕತ್ತುಗಳ...

ಬಂಧಿಗಳು

ಕಾಡು, ನದಿ, ಬೆಟ್ಟಗಳು ವಾಸ್ತವದಲ್ಲಿ ಯಾರ ಆಸ್ತಿ? ಬೆವರಿಳಿಸಿ ದುಡಿವಾಗ ಹುಟ್ಟಿದ ಉಸ್ಸೆಂಬ ನಿಟ್ಟುಸಿರಿನ ಶಬ್ದದಲಿ ನಾನು ಗುರುತಿಸುತ್ತೇನೆ ಯಾವನು ಗುಲಾಮ ಯಾರು ಯಜಮಾನ? ವಿದೇಶಿ ಸರಕುಗಳಿಗೆ ಮಾರುಕಟ್ಟೆ ಒದಗಿಸಲು ಬಲಿಯಾದ ನನ್ನವರು ಅಸಹಾಯಕ...

ಪ್ರತೀಕ್ಷೆ-ನಿರೀಕ್ಷೆ

ಜನಜಂಗುಳಿಯಲ್ಲಿ ಕಳೆದಿರುವ ಬದುಕಿನ ಜೊತೆಗಾರನಿಗೆ ಮತ್ತೆ ಮತ್ತೆ ಹುಡುಕುತ್ತೇನೆ, ಕೀವು ಸೋರುವ ಗಾಯಗಳಿಗೆ ಮತ್ತೆ ಮತ್ತೆ ತೊಳೆಯುತ್ತೇನೆ, ಮುಲಾಮು ಸವರುತ್ತೇನೆ, ಎಂದಿಗೂ ಒಂದಾಗದ ರೈಲು ಹಳಿಗಳಂತೆ ಕ್ಷಿತಿಜದಲ್ಲಿ ಎಂದಿಗೂ ಸೇರದ ನದಿಯ ಎರಡು ದಡಗಳಂತೆ...

ಆಶಾಕಿರಣ

ಇತಿಹಾಸದ ಪುಟಪುಟಗಳಲ್ಲಿ ಸಾವು, ನೋವು, ರಕ್ತ ಮಾನವರ ಬೇಟೆ ನರಮೇಧ ಸಾವಿನ ಬಾಯಿಗೆ ಬಲಿಯಾದವರು, ಉಳಿದು ಊನರಾಗಿ ಭಾರವಾದವರು, ತೋಪಿನ ಬಾಯಿಗೆ ಎದೆಕೊಟ್ಟು ವೀರ ಪಟ್ಟವ ಪಡೆದು ಸ್ವಾತಂತ್ರ್ಯಕ್ಕಾಗಿ ಹಗಲಿರುಳೂ ಹಂಬಲಿಸಿ ಮಣ್ಣಾದವರು. ಇವರ...

ಜಡ ವಸ್ತುವೆ?

ನಾನು ಮನೆಯ ಕಸವೆಲ್ಲ ಗುಡಿಸಿ ಮೂಲೆಗೆ ಕೂಡುವ ಕಸಪರಿಕೆಯೇ? ಎಲ್ಲರೂ ದಾಟುತ್ತ ಇಲ್ಲ, ಕಾಲಿನಿಂದ ಹೊಸಕುತ್ತ ಮುಂದೆ ಸಾಗುವ ಮನೆಯ ಹೊಸ್ತಿಲೆ? ಒಡೆಯನ ಮರ್ಜಿಯಂತೆ ಬೆಳಕು ಬೇಕೆಂದಾಗ ಮನೆಗೆ ಬೆಳಕು ಕೊಡುವ ಬಲ್ಬು ಆಗಿರುವೆನೆ?...

ದಕ್ಕಿದ ಅವಕಾಶ

ನಾ ಹುಟ್ಟಿ ಬೆಳೆದಂತಹ ಮಣ್ಣ ಗೋಡೆಯ ಮನೆಯ ವಿಶಾಲ ಅಂಗಳದಲಿ ಛಾವಣಿಯೇ ಇಲ್ಲದ ಹಾಳು ಗೋಡೆಗಳ ಮೇಲೆ ಬೆಳೆದಿರುವ ಹುಲ್ಲುಗರಿಕೆ- ದಯಾಮಯ ಅಲ್ಲಾಹ್‌ನ ಕರುಣೆ ನನ್ನ ಮೇಲಿದೆಯೇನೋ, ಕತ್ತಲೆಯ ಕೋಣೆಯಲಿ ಕೈದಿಯಾಗಬೇಕಿದ್ದ ನನಗೆ, ಛಾವಣಿಯಿಲ್ಲದ...

ಜಾರು ನಕ್ಷತ್ರ

ಆಕಾಶದಿಂದ ಜಾರಿ ನಕ್ಷತ್ರ ಗುಂಪಿನಿಂದ ಕಳಚಿ ಬಿದ್ದ ಒಂಟಿ ನಕ್ಷತ್ರ, ರಾತ್ರಿ ಕತ್ತಲಲಿ ಉದುರುವ ಮಿಂಚು, ಹಗಲಿನಲ್ಲೇಕೆ ಹುಡುಕುವಿರಿ? ನೋವಿನ ಸುರಂಗದಿಂದ ಕಣ್ಣುಗಳ ಆಳಕ್ಕಿಳಿದು ಝಲ್ಲೆಂದು ಉದುರುವ, ಗಾಢ ಕತ್ತಲೆಯಲಿ ಜಾರುವ ಬೆಳಕಿನಕಿಡಿ ಮಿಂಚಿನ...