ಆಕಾಶದಿಂದ ಜಾರಿ
ನಕ್ಷತ್ರ ಗುಂಪಿನಿಂದ
ಕಳಚಿ ಬಿದ್ದ
ಒಂಟಿ ನಕ್ಷತ್ರ,
ರಾತ್ರಿ ಕತ್ತಲಲಿ
ಉದುರುವ ಮಿಂಚು,
ಹಗಲಿನಲ್ಲೇಕೆ ಹುಡುಕುವಿರಿ?
ನೋವಿನ ಸುರಂಗದಿಂದ
ಕಣ್ಣುಗಳ ಆಳಕ್ಕಿಳಿದು
ಝಲ್ಲೆಂದು ಉದುರುವ,
ಗಾಢ ಕತ್ತಲೆಯಲಿ
ಜಾರುವ ಬೆಳಕಿನಕಿಡಿ
ಮಿಂಚಿನ ಸೆಳಕು.
ಮಿಂಚಿ ಮಾಯವಾಯಿತೇಕೆ?
ಮಿಚನು ಹುಡುಕಲು
ಹೊರಟ ಚಂದ್ರನ
ಜೋಲು ಮುಖದಲಿ
ನಿರಾಸೆಯ ಛಾಯೆ,
ನೆತ್ತರು ಕೆಂಪಿನೊಡನೆ
ಮಿಂಚನು ಹುಡುಕಿ ತರಲು
ಹೋದ ಸೂರ್ಯನ
ಕಪ್ಪು ಮುಖದಲಿ
ಗೆಲುವಿಲ್ಲ ಕಳೆಯಿಲ್ಲ
ಮಿಂಚಿ ಮಾಯವಾದ
ಉದುರುವ ನಕ್ಷತ್ರವನು
ಹುಡುಕುವುದೆಲ್ಲೀಗ ?
*****
Related Post
ಸಣ್ಣ ಕತೆ
-
ತಿಥಿ
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…
-
ಹೃದಯ ವೀಣೆ ಮಿಡಿಯೆ….
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…
-
ಸಂಬಂಧ
ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…