ದೀನ ನೀನು ಹೇಗೆ

ದೀನ ನೀನು ಹೇಗೆ ಮಹಾಮಾನಿಯೇ? ನಾವೇ ಋಣಿ ನಿನಗೆ ಹಿರಿಯ ದಾನಿಯೇ ಚಳಿ ಬಿಸಿಲಿನ ಪರಿವೆಯಿರದೆ ನಮ್ಮ ಮನೆಯ ಕಟ್ಟಿದೆ, ಮಳೆಯಲಿ ಬರಿಮೈಲಿ ದುಡಿದು ನಮ್ಮ ಮಾನ ಮುಚ್ಚಿದೆ, ಹಿಡಿ ತಂಗಳು ತಿಂದು ಮನೆಯ...

ತುಂಬಿದ ಕಪ್ಪನೆ ನೇರಿಳೆ

ತುಂಬಿದ ಕಪ್ಪನೆ ನೇರಿಳೆಯಂತೆ ಮಿರಿ ಮಿರಿ ಮಿಂಚುವ ಮಗುವೊಂದು ಚಿಂದಿಯನುಟ್ಟಿದೆ, ಚರಂಡಿ ಬದಿಗೆ ಮಣ್ಣಾಡುತ್ತಿದೆ ತಾನೊಂದೆ ದಾರಿಯ ಎರಡೂ ದಿಕ್ಕಿಗೆ ವಾಹನ ಓಡಿವೆ ಚೀರಿವೆ ಹಾರನ್ನು, ಮಗುವಿನ ಬದಿಗೇ ಭರ್ರನೆ ಸಾಗಿವೆ ನೋಡದಂತೆ ಆ...

ಆರದಿರಲಿ ಆಸೆ

ಆರದಿರಲಿ ಆಸೆ ಉರಿಗೆ ಬೀಳದಿರಲಿ ಕನಸು, ನೋಯದಿರಲಿ ಭಾರ ಹೊತ್ತ ಬಡವರ ಹೂಮನಸು. ಯಾರ ಅನ್ನ ಎಲ್ಲೋ ಬೆಳೆವ ರೈತನ ಬಲದಾನ ಯಾರ ಭಾರ ಏಕೋ ಹೊರುವ ಕೂಲಿಯವನ ಮಾನ ಬೀದಿ ಗುಡಿಸಿ ಕೊಳೆನೆಲದಲಿ...

ಬೆಸ್ತರ ಹಾಡು

ನೀರ ಮೇಲಿನ ಲೀಲೆ ನಮ್ಮದೀ ಜೀವನ ಗಾಳಿ ನೂಕಿದ ತೀರ ಸೇರಿ ಪಯಣ ಪಾವನ ಯಾರಿಗೂ ತಿಳಿಯದಂಥ ನೂರುಗುಟ್ಟು ನೀರಲಿ ಧೀರರಿಗೆ ಮಾತ್ರ ದೊರೆವ ಮುತ್ತು ರತ್ನ ತಳದಲಿ ದೂರದ ತಾರೆಯೇ ದೀಪ ನಮಗೆ...

ಸಂಜೆಯ ಮಂಜು

ಸಂಜೆಯ ಮಂಜು ಕವಿಯು ವೇಳಗೆ ಬಂದರು ನಾಲ್ಕು ಜನ ಮುಖವೇ ಕಾಣದ ಹೆಸರೇ ಕೇಳದ ಯಾರೋ ದೀನಜನ ಜಗುಲಿಯ ಮೇಲೆ ಕೂರಿಸಿ ಹಾಕಿದೆ ಉಳಿದ ಕೊಂಚ ಅನ್ನ ಹಾಸಲು ಹೊದೆಯಲು ನಾಚದೆ ನೀಡಿದೆ ತುಂಡು...

ಎಲ್ಲ ದಾರಿಗೊಂದೆ ಗುರಿ

ಎಲ್ಲ ದಾರಿಗೊಂದೆ ಗುರಿ ಬಿಡುಗಡೆ ಸೃಷ್ಟಿನಿಯಮದಲ್ಲಿ ಇಲ್ಲ ನಿಲುಗಡೆ ನೀಲಿಯಾಕಾಶದಿಂದ ಹೂಬಿಸಿಲಿಗೆ ಬಿಡುಗಡೆ ತೂಗುತಿರುವ ಮೋಡದಿಂದ ನೀರ ಸೆರೆಗೆ ಬಿಡುಗಡೆ ಹಗಲು ತೀರಿ ಇರುಳಿಗೆ ಇರುಳು ದಾಟಿ ಹಗಲಿಗೆ ಸರದಿ ಮುಗಿದು ಸೆರೆಯು ಹರಿದು...

ಹರಿವ ನದಿಯು ನೀನು

ಹರಿವ ನದಿಯು ನೀನು ಸುರಿವ ಮಳೆಯು ನೀನು ನೆಲದಿ ಬಿದ್ದ ಬೀಜ ಮೊಳೆಸಿ ಫಲದಿ ಬಂದೆ ನೀನು ಹೂವು ಹಣ್ಣ ಮೈಯೊಳು ಹೊತ್ತ ಬಳ್ಳಿ ನೀನು ತಾರೆಗಳಿಗೆ ತೀರವಾಗಿ ನಿಂತ ಬಾನು ನೀನು ಭಾರ...

ಬೇರೆ ದೈವ ಯಾಕೆ ಬೇಕು?

ಬೇರೆ ದೈವ ಯಾಕೆ ಬೇಕು ತಾಯಿ ಈಕೆ ಸಾಲದೆ? ಎಲ್ಲ ತೀರ್ಥ ಕೂಡಿ ನಿಂತ ಸಾಗರವೆನೆ ಆಗದೆ? ಲಕ್ಷ ಚಿಕ್ಕ ಹಕ್ಕಿ ಯಾಕೆ ಗರಿತೂಗುವ ನವಿಲಿದೆ ಯಾ ಹೂವಿಗೆ ಹೋಲಿಕೆ ಕಂಪಾಡುವ ಮಲ್ಲಿಗೆ? ಕವಿತೆಯಲ್ಲಿ...

ಮತ್ತೆ ಮೂಡುತಿದೆ

ಮತ್ತೆ ಮೂಡುತಿದೆ ಕತ್ತಲೆದೆಯಿಂದ ಪೌರುಷಮಯ ಇತಿಹಾಸ, ಸತ್ತ ಬೂದಿಯಲು ಕಿಡಿಗಳ ತೆರೆಯುವ ಅನಂತತೆಯ ಚಿರಸಾಹಸ ಮನೆಯ ಕವಿದಿದ್ದ ಇರುಳನು ಕೊಳೆದು ಹಗಲ ಹಚ್ಚಿದುದೆ ಸಾಲದೆ? ನೆರೆಜನ ಮೊರಯಿಡೆ ಕಾದಿ ಗೆಲಿಸಿದೆವು ಉರುಗೋಲಾಗಿ ಬಳ್ಳಿಗೆ ಎಂದಿನಿಂದಲೋ...

ಎಲ್ಲಿ ಮಾನವ ಮತಿಗೆ

ಎಲ್ಲಿ ಮಾನವ ಮತಿಗೆ ಭಯದ ಬಂಧನವಿರದೊ ತಲೆಯೆತ್ತಿ ಸ್ಥೈರ್ಯದಲಿ ನಿಲ್ಲಬಹುದೋ ಎಲ್ಲಿ ತಿಳಿವಿಗೆ ಯಾವ ಹಂಗುಗಳ ತಡೆಯಿರದೊ ಭೇದದಲಿ ನೆಲ ನೂರು ಪಾಲಾಗದೋ, ಎಲ್ಲಿ ಸತ್ಯದ ಒಡಲಿನಿಂದ ನುಡಿ ಚಿಮ್ಮುವುದೊ ಸತತ ಸಾಧನೆ ಸಿದ್ದಿಯೆಡೆ...