
ಎಲ್ಲಿ ಮಾನವ ಮತಿಗೆ ಭಯದ ಬಂಧನವಿರದೊ ತಲೆಯೆತ್ತಿ ಸ್ಥೈರ್ಯದಲಿ ನಿಲ್ಲಬಹುದೋ ಎಲ್ಲಿ ತಿಳಿವಿಗೆ ಯಾವ ಹಂಗುಗಳ ತಡೆಯಿರದೊ ಭೇದದಲಿ ನೆಲ ನೂರು ಪಾಲಾಗದೋ, ಎಲ್ಲಿ ಸತ್ಯದ ಒಡಲಿನಿಂದ ನುಡಿ ಚಿಮ್ಮುವುದೊ ಸತತ ಸಾಧನೆ ಸಿದ್ದಿಯೆಡೆ ಕರೆವುದೋ ರೂಢಿ ಮರುಧರೆ...
ಕಳೆದ ಕಾಲವ ಗುಣಿಸಿ ಏಕೆ ಕೊರಗುವೆ ಬರಿದೆ ಮೂಡುತಿದೆ ಕನಸು ತೆನೆಯೊಡೆವ ಚಿತ್ರ ಬೆಳಕು ನೆರಳಿನ ಹವಳ ಕರಿಮಣಿಯ ಪಾತ್ರದಲಿ ಹಾಯುತಿದೆ ಈ ನೆಲದ ಭಾಗ್ಯಸೂತ್ರ ಯಾರ ಹಮ್ಮಿಗೊ ನಮ್ಮ ಅಭಿಮಾನ ಮಣಿಸಿ ಕೈಗಳೂ ಕಾಲಾಗಿ ನಡೆದ ದೈನ್ಯ ಮುಗಿದು ಬಂದಿದೆ ನಮ್ಮ ಬ...
ಮಸಿ ಬಟ್ಟೆ ಆ ಹುಡುಗ ಆ ಹುಡುಗ ಮಸಿ ಬಟ್ಟೆ ಬರಿಗಾಲಲಿ ಬೀದಿ ಬೀದಿ ಸುತ್ತುತ್ತಾ ‘ಸಾಕು’ ಎಂದೆಸೆದದ್ದ ಎತ್ತಿಕೊಳ್ಳುತ್ತಾನೆ ಹುಡುಕಿ ತುತ್ತಿನಂತೆ ಕುಡಿದು ಬಿಸುಟ ಖಾಲಿ ಬಾಟಲು ಕತ್ತರಿಸಿ ಒಗೆದ ‘ಡೈರಿ’ ಹಾಲಿನ ಪಾಕೆಟ್ಟು ತುಕ್ಕು ಹಿಡಿದ ಸೈಕಲ್ಲಿ...
ಸಾವಿರ ನೇತ್ರದ ಸಾವಿರ ಪಾತ್ರದ ಸಹಸ್ರಶೀರ್ಷ ಪುರುಷನೆ ನೀ ಸಾವಿರ ದನಿಗಳ ಗಾನದ ಮೇಳಕೆ ಆಧಾರದ ಶ್ರುತಿಯಾಗಿಹೆ ನೀ ಸಾಗುತ್ತಿರೆ ದೊರೆ ನೀ ರಥದಲ್ಲಿ ಬೆಳುದಿಂಗಳ ಹೊಳೆ ಹರಿಯುವುದು, ನಿನ್ನ ಮೈಯ ಆಭರಣಗಳಾಗಿ ಚಿಕ್ಕೆ ಚಿಕ್ಕೆಯೂ ಮೆರೆಯುವುದು ಆಗಸದಿಂದ...
ಜಯ ಜಯ ಜಯ ಕನ್ನಡ ರಾಜೇಶ್ವರಿ ಶರಣು ಬಂದೆ ಪಾದಕೆ ಭುವನೇಶ್ವರಿ ಪಂಪನ ನುಡಿಮಿಂಚಿನ ಮಣಿಮಾಲೆಗೆ ನಾರಣಪ್ಪ ಕಡೆದ ಭಾವಜ್ವಾಲೆಗೆ ಶಿಲೆಯೆ ಅರಳಿ ನಗುವ ಕಲೆಯ ಲೀಲೆಗೆ ಯಾರು ಸಮವೆ ತಾಯಿ ನಿನ್ನ ಚೆಲುವಿಗೆ? ಶಂಕರ ರಾಮಾನುಜರಲಿ ಸುಳಿಯುವೆ ಮಧ್ವರ ನವಚಿಂತ...
ಅಮ್ಮ ನಿನ್ನ ಕರುಣೆಯ ನಾ ಸದಾ ಮನದಿ ನೆನೆವೆ ನೂರು ರೂಪಗಳಲಿ ನಮ್ಮ ಭಾಗ್ಯವ ನೀ ಬೆಳೆವೆ ಮಲೆನಾಡಿನ ಕಾಡುಗಳಲಿ ಮೈಪಡೆದ ಬಲವೆ, ಅಡಿಕೆ ತೆಂಗು ಸಾಲು ಸಾಲು ಸೇನೆ ನಿಂತ ನಿಲವೆ, ಶಾಲಿವನದ ತೆನೆಗಳಲ್ಲಿ ತೂಗುವನ್ನಪೂರ್ಣೆಯೇ, ಚೆಲುವಿನಷ್ಟೊ ಹೊನಲು ಸೇರ...
ನಾಲ್ಕು ದಾರಿಗಳು ಸೇರುವ ಇಲ್ಲಿ ಬಹುದಿನಗಳಿಂದ ಒಬ್ಬ ‘ಮುದುಕ’ ಕೋಲು ಹಿಡಿದು ನಿಂತಿದ್ದಾನೆ ವೃತ್ತ ಸುತ್ತಿಕೊಂಡು ಹೋಗುವ ಜನ ಯಾರನ್ನೂ ಗಮನಿಸುವುದಿಲ್ಲ ಅವಸರದಲಿ ನಡುವೆ ನಿಂತ ಅರೆ ಬೆತ್ತಲೆ ಫಕೀರನನು ಅಲ್ಲೇ ಮಲಗಿರುವ ದನಗಳನೂ… ಮುರುಕು ಚ...
ಕಟ್ಟಿದ್ದೇನು ಕುಣಿದಿದ್ದೇನು ಸಿಂಗರಿಸಿದ್ದು ಅದೇನು! ಒಂದೇ ದಿನದ ಮಂಗಕುಣಿತಕ್ಕೆ ಹಡೆ ವೈಯಾರ ಅದೇನು! ಆರತಿ ಬಂತು, ಅಕ್ಷತೆ ಬಿತ್ತು ಉಘೇ ಉಘೇ ಜನ ಘೋಷ, ನಂದೀಕೋಲು ನೂರು ಹಿಲಾಲು ಕುಣಿತ ಕೇಕೆ ಆವೇಶ. ಭಜನೆ ಮುಗಿದು ಮೈ ಬಸವಳಿದು ಕಣ್ಣಿಗಿಳಿದಿದೆ...
ರಾಜ್ಯ ಹಲವು ಆದರೇನು ರಾಷ್ಟ್ರ ನಮಗೆ ಒಂದೇ; ಜಾತಿ ಭಾಷೆ ಎಷ್ಟೆ ಇರಲಿ ಭಾವಮೂಲ ಒಂದೇ. ಬೇರು ಚಿಗುರು ಹೂವು ಕಾಯಿ ಕೊಂಬೆ ಕಾಂಡಗಳಲಿ ಹರಿವುದೊಂದೆ ಜೀವರಸ ಇಡೀ ತರುವಿನಲ್ಲಿ ಥಳ ಥಳ ಥಳ ಹೊಳೆವ ಹಲವು ಬಿಡಿಮಣಿಗಳ ನಡುವೆ ಹಾದು ಬಂದ ಸೂತ್ರವಾಯ್ತು ಹೂಳ...













