ಕಟ್ಟಿದ್ದೇನು ಕುಣಿದಿದ್ದೇನು
ಸಿಂಗರಿಸಿದ್ದು ಅದೇನು!
ಒಂದೇ ದಿನದ ಮಂಗಕುಣಿತಕ್ಕೆ
ಹಡೆ ವೈಯಾರ ಅದೇನು!
ಆರತಿ ಬಂತು, ಅಕ್ಷತೆ ಬಿತ್ತು
ಉಘೇ ಉಘೇ ಜನ ಘೋಷ,
ನಂದೀಕೋಲು ನೂರು ಹಿಲಾಲು
ಕುಣಿತ ಕೇಕೆ ಆವೇಶ.
ಭಜನೆ ಮುಗಿದು ಮೈ ಬಸವಳಿದು
ಕಣ್ಣಿಗಿಳಿದಿದೆ ಮಂಪರು,
ಆಗಸೆ ಬಾಗಿಲಿಗೆ ಬಂದಿತು ತೇರು
ಮುಗಿಯಿತು ಹಬ್ಬದ ಜೋರು.
ಇಷ್ಟೇ ಎಲ್ಲಾ ತೇರಿನ ಕಥೆಯೂ
ಒಂದು ದಿನದ ಮೆರೆದಾಟ,
ಯಾಕೆ ಮೆರೆಯುವಿ ತಿಳಿಯದೆ ತಮ್ಮಾ
ನಿಲ್ಲಿಸು ಹುಸಿ ಕುಣಿದಾಟ.
*****