ಕಳೆದ ಕಾಲವ ಗುಣಿಸಿ ಏಕೆ ಕೊರಗುವೆ?

ಕಳೆದ ಕಾಲವ ಗುಣಿಸಿ ಏಕೆ ಕೊರಗುವೆ ಬರಿದೆ
ಮೂಡುತಿದೆ ಕನಸು ತೆನೆಯೊಡೆವ ಚಿತ್ರ
ಬೆಳಕು ನೆರಳಿನ ಹವಳ ಕರಿಮಣಿಯ ಪಾತ್ರದಲಿ
ಹಾಯುತಿದೆ ಈ ನೆಲದ ಭಾಗ್ಯಸೂತ್ರ

ಯಾರ ಹಮ್ಮಿಗೊ ನಮ್ಮ ಅಭಿಮಾನ ಮಣಿಸಿ
ಕೈಗಳೂ ಕಾಲಾಗಿ ನಡೆದ ದೈನ್ಯ
ಮುಗಿದು ಬಂದಿದೆ ನಮ್ಮ ಬಾಳ ಗೆಲುವಿಗೆ ನಾವೆ
ಬೆವರಿಳಿಸಿ ಮಡಿವ ಬಿಡುಗಡೆಯ ಪುಣ್ಯ

ಮನೆ ಮನೆಯ ಮೂಲೆಯಲು ಬೆಳಕು ನಗುವಂತೆ
ಉತ್ತ ನೆಲದಲ್ಲೆಲ್ಲ ತೆನೆ ಬೀಗುವಂತೆ
ಸದ್ದು ಗದ್ದಲವಿರದ ದುಡಿಮೆಗೊಲಿದು
ನಗಲಿ ನಾಡಿನ ಭಾಗ್ಯ ಮಬ್ಬು ಕಳೆದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿದ ಜೋಳಿಗೆ ತುಂಬ
Next post ಕತ್ತಲೆ – ಬೆಳಕು

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…