ಯಾರ ದೃಷ್ಟಿ, ತಾಕಿತು ನನ್ನ ಕಂದವ್ವಗೆ-ಯಾರ ದೃಷ್ಟಿ ? ಮುಂಜಾವಿನ ಮಂಜು ತಾಕಿತೋ ? ಮುಚ್ಚಂಜೆಯ ನಂಜು ತಾಕಿತೋ ? ಯಾರ ದೃಷ್ಟಿ ತಾಕಿತು ನನ್ನ ಕಂದವ್ವಗೆ-ಯಾರ ದೃಷ್ಟಿ ? ಹೂಗಳು ಕಣ್ಣು ಬಿಟ್ಟುವೊ ? ಚಂದ್ರನ ಕಿರಣ ನೆಟ್ಟುವೊ ? ಯಾರ ದೃಷ್ಟಿ ತಾಕಿತ...
ಒಂದು ದೊಡ್ಡ ಬೌದ್ಧ ವಿಹಾರ. ಅಲ್ಲಿ ಅನೇಕ ಬೌದ್ಧ ಭಿಕ್ಷುಗಳ ವಾಸ. ಅಲ್ಲಿಗೆ ಒಬ್ಬ ಶಿಲ್ಪಿ ದಿನವೂ ತಾನು ಕೆತ್ತಿದ ಬುದ್ದನ ಶಿಲ್ಪವನ್ನು ಒಬ್ಬ ಭಿಕ್ಷುವಿಗೆ ತೋರಿಸಿ, ಕೊಂಡುಕೊಳ್ಳಲು ಕೇಳಿಕೊಳ್ಳುತಿದ್ದ. ಭಿಕ್ಷು ದಿನವೂ ಅದರಲ್ಲಿ ಮುಖ್ಯವಾದುದನ್ನ...
ಪರಿಪರಿಯ ಕೈಚೀಲ, ಸೋಲಾರು, ಕಾಂಕ್‌ವುಡ್‌ಗಳೆಂದೆಂಬ ಬರಿ ಮುಖವಾಡಗಳಿಂದೆಂತು ಪರಿಸರವ ರಕ್ಷಿಪುದು ? ಪರಿಪರಿಯೊಳುಂಬನ್ನವನು ದುಡಿಮೆಯೊಳಲ್ಲಲ್ಲೇ ಗಳಿಸಿದರೆ ಬೇಕಿಲ್ಲ ಕೈ ಚೀಲ, ಸಾಕಲ್ಲ ಬರಿ ಸೂರ್‍ಯ ಇರುಳೊಳೆಲ್ಲರೊರಗಿದರೆ ಮರವಿಕ್ಕು ಮನೆಗಕ್ಕು &#...
ಮುಗಿಲಿನಲಿ ಮಳೆಬಿಲ್ಲ ಕಾಣುತಲೆ ನಾನು ನೆಗೆದು ಕುಣಿದಾಡುವುದು ಹೃದಯ ತಾನು! ಅಂತೆ ಇದ್ದುದು ಮೊದಲು ಚಿಕ್ಕಂದಿನಂದು; ಅಂತೆ ಇಹುದೀ ಮೆರೆವ ಯೌವನದಲಿಂದು, ಅಂತೆ ಇರಲೆನಗಿನ್ನು ಮುಪ್ಪಿನಲೆ ಮುಂದೆ- ಅಂತಿರದೆ, ಸಾವು ಬರಲಂದೆ! ಮನುಜನಿಗೆ ಮಗು ತಂದೆ &...
ಅಧ್ಯಾಯ ಒಂಭತ್ತು ಚಿನ್ನಾಸಾನಿಯು ಚಕ್ರವರ್ತಿಗಳ ಸನ್ನಿದಿಯಲ್ಲಿ ತಲೆಬಾಗಿ ನಿಂತು, “ಮಹಾಪಾದಗಳಿಗೆ ಜಯವಾಗಲಿ, ಈಗ ನಾನು ಮೊದಲು ಯಾರಿಗೆ ನಮಸ್ಕಾರ ಮಾಡಬೇಕು ಎನ್ನುವುದನ್ನು ಪ್ರಭುಗಳೇ ಅಪ್ಪಣೆ ಕೊಡಿಸಬೇಕು. ಇಲ್ಲಿ ಗುರುಗಳು. ಇಲ್ಲಿ ಸನ್ನಿಧಾನ. ಅಪ...
ಮಾನವ ನಿನ್ನಂತರಂಗದಿ ತ್ಯಾಗ ಉದಯಿಸಲಿ ನಿನ್ನ ಭಾವದಲಿ ವಿಶಾಲತೆ ಬರಲಿ ನಿನ್ನ ನೋಟವು ಪರಿಶುದ್ಧವಾಗಿರಲಿ ನಿನ್ನ ಬಾಳು ಹಚ್ಚು ಹಸಿರಾಗಿರಲಿ ಆಲೋಚನ ದೇವರಿಗೆ ಮುಡಿಪಾಗಲಿ ಮನಸ್ಸು ದೇವರಿಗೆ ಹಂಬಲಿಸಲಿ ದೇಹವು ದೇವ ಸೇವೆಯಲಿ ಕರಗಲಿ ಬಾಳೊಂದು ಜನರಿಗೆ...
ಕಾರಂತರಿಲ್ಲದ ಬಾಲವನಕ್ಕೆ ಹೋದಾಗಲೆಲ್ಲ, ತಂಗಾಳಿ ದೇಹವ ಸೋಕಿದಾಗಲೆಲ್ಲ, ಕಾರಂತರ ಕೈಯ ಬೆಚ್ಚನೆಯ ಸ್ಪರ್ಶವೇ ಮನದಲ್ಲಿ ಮನೆ ಮಾಡುತ್ತದೆ ಕಾರಂತರಿಲ್ಲದ ಬಾಲವನದ ಜೋಕಾಲಿಯನ್ನು ತೂಗಿದಾಗಲೆಲ್ಲ ಮಹಾಪುರುಷನ ಜೀವನವೊಂದು ನಿಧಾನವಾಗಿ ಜೀಕಲಾರಂಭಿಸುತ್ತದ...
ಉಧೋ ಮನಸೆ ಉಧೋ ಉಧೋ ಉಧೋ ಮನಸೇ ಬ್ರಹ್ಮಾಂಡದ ಕನಸೇ ವಿಶ್ವಾತ್ಮನ ನೆನಸೇ ಜನ್ಮಾಂತರ ಜೀವವೇ ಅಂತರತಮ ಭಾವವೇ ಓ ಮನಸೇ ಉಧೋ ಉಧೋ ಮನಸೇ ಸಿದ್ಧವಾಗಿರು ನೀನೆಲ್ಲ ಸಾಧ್ಯತೆಗು ಬದ್ಧವಾಗಿರು ನೀನೆಲ್ಲ ಬಾಧ್ಯತೆಗು ಸದಾ ಜಾಗೃತವಾಗಿರು ಮನಸೇ ಸದಾ ಕರ್‍ತೃವಾಗ...
ಅಭಯವಿನಯಗಳೆಂಬ ಷಡ್ಜಪಂಚಮದೊಳಗೆ ಸದ್ಗುಣಸ್ವರಮೇಳ ಮೂಡುತಿಹುದು ಬಗೆಬಗೆಯ ಬೆರೆತದೊಳು ತೆರತೆರದ ರಂಜನೆಯ ಧೀರಾನುಭೂತಿಗಳ ರಸವ ತಳೆದು ಅಂಥಾತ್ಮಶೀಧುಗಳ ಸಿಂಧುವೆನಲೆಸೆವುದೀ ದೈವಸುಂದರಭಾವ ಜಾನಪದಿಕ ಅದರುತ್ಸವಂಗಳೇ ನಮ್ಮ ಹೃದಯೋತ್ಸವಗ- ಳದರೆಡೆಯೊಳೇ ...
ನಾನೊಬ್ಬ ಭಯೋತ್ಪದಕ ಏಕೆಂದರೆ ನಾನೊಬ್ಬ ಮುಸಲ್ಮಾನ ಹೀಗೆಂದು ಲೋಕದ ಠೇಕೇದಾರ ಅವನು ಹೇಳುತ್ತಿದ್ದಾನೆ. ನಾನೊಬ್ಬ ಮಾನವ ಪೀಡಕ ಏಕೆಂದರೆ ನಾನು ಕಾಶ್ಮೀರಿ ಹಾಗೆಂದು ಸೂತಕದ ಮನೆವಾಸಿ ಅವನು ಹೇಳುತ್ತಿದ್ದಾನೆ. ನಾನೊಬ್ಬ ಹಿಂಸ್ರಕ ಪ್ರಾಣಿ ಏಕೆಂದರೆ ಬದ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...






