ಮಳೆಯ ದನಿಯ ಮಧ್ಯದಲ್ಲಿ ಬರುತಿರುವ ಹೊಂಬಿಸಲು
ಎಳೆಬಣ್ಣ ಕಿರಣದಲ್ಲಿ ಬೆಳೆದಿಹವೊ ಬೆಳಕನೋ
ಕಳೆ ಏರಿ ನಿಂತಿರುವ ಸೌಂದರ್‍ಯ ಈ ಹೊಳಪು
ಬಳಿಯಲ್ಲಿ ಕರಿತಿಹದು ಹರಷವನ ಭೋಗಿಸಲು || ೧ ||
ಹಾರುತಿಹ ರಮಣೀಯ ಆಕಾಶ ಪಕ್ಷಿಗಳು
ಝರಿಯಾ ಪ್ರವಾಹದಿ ಮುಳಿ ಮುಳಿಗಿ ಏಳುತಿಹದು
ಗಿರಿಗಿರಿನೆ ತಿರುಗುತಲಿ ಬರುತಿಹವೋಽ ದಡಕೆ ಮತ್ತೆ
ಸರಸದಲಿ ಓಡುತಿಹಾ ನೀರಹಕ್ಕಿ ಗುಂಪುಗಳು || ೨ ||
ಅಂದವಿದು ಮನಕೆಲ್ಲ ಚಂದವಿದು ದೃಶ್ಯಕೆ
ಎಂದೆಂದು ಮರೆಯದಿರು ಸೊಗಸಿನ ನೋಟವನು
ಎಂದೆಂಬ ಬಗೆಯನೋ ತಿಳಿ ಹೇಳು ಎನ್ನುತಲಿ
ನೊಂದಿದಾ ಹೃದಯಕೇ ಕೊಟ್ಟಿಹದು ಸಂತಸವ || ೩ ||
ಚೆಲವೊಂದು ಅರಳಿದ ಹೂ ಝರಿಯಾ ದಂಡೆಯಲಿ
ಬಲು ರಮ್ಮ ಅರಳಿಹದು ಸುವಾಸನೆ ಬೀರುತಲಿ
ಬಲು ಹರುಷ ತುಂಬಿಗಳು ಓಡಿ ಬಂದು ಮುತ್ತಿಹವು
ಒಲುವಿನಲಿ ನಿಂತಿರುವ ಸವಿ ಕಂಪ ಹೂವುಗಳಿಗೆ || ೪ ||
ಸುತ್ತಲೂ ಬೆಳೆದಿಹ ಲತ್ತುಂಗ ಶಿಖರಗಳ
ಹೊತ್ತಿಹಾ ಭೂತಾಯಿ ಬಿಟ್ಟಿಹಳು ಆದೃಶ್ಯ
ಮುತ್ತತಾ ಹರಿದಿಹಾ ತಿಳಿನೀರ ಪ್ರವಾಹದಿ
ಪ್ರತಿಬಿಂಬ ಬಳೆದಿಹದು ಶಿಖರಗಳ ಶ್ರೇಣಿಯಲ್ಲಿ || ೫ ||
ಬಗೆ ಬಗೆಯ ಬಣ್ಣದಲಿ ತೊಳೆ ತೊಳೆದು ಮನ ಒಲಿಪ
ಸೊಗಸಿನಾ ನೋಟವನು ಬರೆದಿಹದು ಚಿತ್ರಪಟ
ನಗೆ ನಗುತಾ ಕುಳಿತಿರಲು ಮಿತ್ರನಾ ಒಲುಮೆಯಿಂ
ಹೊಗುನಾ ಗಡಿಬಿಡಿಯು ಎನಗಾಯ್ತು ಈ ನೋಟದಿ || ೬ ||
*****








